ಹುಬ್ಬಳ್ಳಿ ಲವ್‌ ಜಿಹಾದ್ ಪ್ರಕರಣ: ಸಮೀರ್‌ ಮೊಬೈಲ್ ನಲ್ಲಿ ಹಲವು ವಿಡಿಯೋ, ಹಿಂದೂ ಯುವತಿಯರ ಸಂಪರ್ಕಕ್ಕೆ ಅಕ್ಕನೇ ಸಾಥ್!

Published : Apr 04, 2026, 09:23 AM IST
Hubballi Love Jihad  case

ಸಾರಾಂಶ

ಹುಬ್ಬಳ್ಳಿಯ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾ ವಿರುದ್ಧ ಲವ್‌ ಜಿಹಾದ್‌ ಆರೋಪ ಕೇಳಿಬಂದಿದ್ದು, ಆತ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಖುಷಿ ಎಂಬ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ, ಹಲವು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಆತನ ಮೊಬೈಲ್‌ನಲ್ಲಿದ್ದ ವಿಡಿಯೋಗಳು ಸಾಕ್ಷಿಯಾಗಿವೆ.

ಹುಬ್ಬಳ್ಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಆರೋಪ ಸದ್ದು ಮಾಡಿದ್ದು, ವಿಜಯನಗರದ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾನ ಜಾತಕ ಒಂದೊಂದಾಗಿ ಹೊರಬರುತ್ತಿದೆ. ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್‌ ಜಿಹಾದ್‌ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್‌ನಲ್ಲಿ ಲಭ್ಯವಾಗಿದೆ. ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ, ದೌರ್ಜನ್ಯ ಮತ್ತು ಬಲವಂತದ ಗರ್ಭಪಾತಗಳ ಆರೋಪಗಳು ಆತನ ಮೇಲೆ ಕೇಳಿಬಂದಿದೆ.

ವಿಜಯನಗರದ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾ ತನ್ನ ಸಂಪರ್ಕ ವಲಯದ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್‌ ಜಿಹಾದ್ ನಡೆಸಿದ್ದು. ಅವನ ಮೊಬೈಲ್ ಫೋನ್‌ನಲ್ಲಿ ಹಲವು ಯುವತಿಯರೊಂದಿಗೆ ನಡೆದ ವಾಟ್ಸಪ್ ಚಾಟ್‌ಗಳು, ಫೋಟೋಗಳು ಮತ್ತು ಕೆಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆ ನೀಡಿರುವ ಸಮೀರ್

ಖುಷಿ ಕಲಬುರಗಿ ಎಂಬ ಯುವತಿಯೊಂದಿಗೆ ಸಮೀರ್ ಮುಲ್ಲಾ ಹೊಂದಿದ್ದ ಸಂಬಂಧವು ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಖುಷಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಇದೆ. ಇದಲ್ಲದೆ, ಪ್ರತೀ ಬಾರಿ ದೌರ್ಜನ್ಯ ನಂತರ ಗರ್ಭಪಾತ ಮಾಡಲು ಬಲವಂತ ಮಾಡುತ್ತಿದ್ದನೆಂದು ಹೇಳಲಾಗಿದೆ. ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಮಾತ್ರೆಗಳನ್ನು ಸೇವಿಸಲು ಖುಷಿ ನಿರಾಕರಿಸಿದಾಗ, ಸಮೀರ್ ಮುಲ್ಲಾ ಒತ್ತಡ ಹೇರುತ್ತಿದ್ದನು ಮತ್ತು ಬೆದರಿಕೆ ಹಾಕುತ್ತಿದ್ದನು ಎಂಬುದು ಆರೋಪದ ಭಾಗವಾಗಿದೆ. ಮಾತ್ರೆ ತೆಗೆದುಕೊಳ್ಳುವ ದೃಶ್ಯವನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ತನಗೆ ಕಳುಹಿಸುವಂತೆ ಕೂಡ ಸೂಚಿಸುತ್ತಿದ್ದನೆಂದು ಹೇಳಲಾಗಿದೆ. ಈ ರೀತಿಯ ವಿಡಿಯೋಗಳು ಇದೀಗ ಬಹಿರಂಗಗೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ

ತಂಗಿಯ ಸಾಥ್,  ಸಮೀರ್ ಗೆ ಹುಡುಗಿರ ಪರಿಚಯ

ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಸಮೀರ್ ಮುಲ್ಲಾಗೆ ಯುವತಿಯರನ್ನು ಪರಿಚಯ ಮಾಡಿಸುತ್ತಿದ್ದವರಲ್ಲಿ ಅವನ ಸಹೋದರಿಯ ಪಾತ್ರವಿದೆ ಎಂಬ ಆರೋಪ. ತೈಸಿಮ್ ಮುಲ್ಲಾ ಎಂಬ ಸಮೀರ್‌ನ ಸಹೋದರಿ, ತನ್ನ ಪರಿಚಯದ ಯುವತಿಯರನ್ನು ಅವನಿಗೆ ಪರಿಚಯಿಸುತ್ತಿದ್ದಳು ಎನ್ನಲಾಗಿದೆ. ಖುಷಿ ಕಲಬುರಗಿಯನ್ನು ಸಹ ತೈಸಿಮ್ ಮುಲ್ಲಾ ಸಮೀರ್‌ಗೆ ಪರಿಚಯ ಮಾಡಿಕೊಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ ಖುಷಿ ಏರೋಬಿಕ್ ಕ್ಲಾಸ್‌ಗೆ ಹಾಜರಾಗುತ್ತಿದ್ದಳು. ಇದೇ ಸಂದರ್ಭದಲ್ಲಿಯೇ ಪರಿಚಯ ಬೆಳೆಯಿತು. ಬಳಿಕ ಖುಷಿಯನ್ನು ಪಾರ್ಟಿಗಳು, ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ, ಸಮೀರ್ ಜೊತೆ ಸಮಯ ಕಳೆಯುವಂತೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಮೂಲಕ ಇಬ್ಬರ ಮಧ್ಯೆ ಸಂಬಂಧ ಬೆಳೆಸಲು ತೈಸಿಮ್ ಮುಲ್ಲಾ ಸಹಕರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೈಸಿಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಖುಷಿ ಸೇರಿಕೊಂಡಿರುವ ವಿಡಿಯೋಗಳು ಕೂಡ ಇದೀಗ ಹೊರಬಂದಿವೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಲವ್‌ ಜಿಹಾದ್‌ಗೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅಮಾಯಕ ಹಿಂದೂ ಯುವತಿಯರನ್ನು ಮೋಸದ ಬಲೆಗೆ ಸಿಲುಕಿಸುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.

ಸಮೀರ್‌ನ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದರೆ, ನನ್ನ ಸಹೋದರನ ಮೇಲೆ ಸುಳ್ಳು ಆರೋಪ ಮಾಡಿ ಮನೆಗೆ ಬಂದು ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಿಡ್ನ್ಯಾಪ್‌ ಮಾಡಿದ್ದಾರೆ ಎಂದು ಸಮೀರ್‌ ಸಹೋದರಿ ತೈಸಿಮ್‌ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

PREV
Read more Articles on
click me!

Recommended Stories

ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಅಲ್ಲಿ ತನಕ ಕುರಿಮೇಯಿಸಿಕೊಂಡಿರು ಎಂದಿದ್ದಕ್ಕೆ ಯುವಕ ಸಾವಿಗೆ ಶರಣು!
Karnataka Vision Care : 40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ