ಪೋಲಿಸರು ಅದರಲ್ಲೂ ಜೂನ್ ತಿಂಗಳು ಬಂತೆಂದರೆ ಸಾಕು ಮಕ್ಕಳ ಶಾಲಾ ಕಾಲೇಜುಗಳಿಗೆ ದಾಖಲಾತಿಯನ್ನ ಮಾಡಿಸಿರುತ್ತಾರೆ. ಆದರೆ ಪದೆ ಪದೆ ವರ್ಗಾವಣೆ ಮಾಡೋದರಿಂದ ಪೋಲಿಸ್ ಸಿಬ್ಬಂದಿಗಳಿಗೆ ಈ ಕಡೆ ಕೆಲಸ ಮಾಡಲು ಆಗದೆ, ಆ ಕಡೆ ಕುಟುಂಬದ ಸದಸ್ಯರ ಜೊತೆ ಇರದೆ ಕೇವಲ ಟ‌್ರ್ಯಾವಲಿಂಗನಲ್ಲೇ ಸಮಯ ಕಳೆಯುವ ಪರಿಸ್ಥಿತಿ ಸದ್ಯ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸ್ ಸಿಬ್ಬಂದಿಗಳಲ್ಲಿ ಕಾಡುತ್ತಿದೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಜೂ.03): ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪೋಲಿಸ್ ಇಲಾಖೆ ಅಚ್ಚು ಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಪೋಲಿಸ್ ಸಿಬ್ಬಂದಿಗಳನ್ನ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಧಾರವಾಡದಿಂದ ಹುಬ್ಬಳ್ಳಿಗೆ ಅದಲು ಬದಲು ಕಂಚಿ ಬದಲು ಅನ್ನೋ ಹಾಗೆ ವರ್ಗಾವಣೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಸ್ಥಳೀಯ ವಲಯದಲ್ಲಿ ಕೇಳಿ ಬರುತ್ತಿದೆ.
undefined
ಇನ್ನು ಪೋಲಿಸರು ಅದರಲ್ಲೂ ಜೂನ್ ತಿಂಗಳು ಬಂತೆಂದರೆ ಸಾಕು ಮಕ್ಕಳ ಶಾಲಾ ಕಾಲೇಜುಗಳಿಗೆ ದಾಖಲಾತಿಯನ್ನ ಮಾಡಿಸಿರುತ್ತಾರೆ. ಆದರೆ ಪದೆ ಪದೆ ವರ್ಗಾವಣೆ ಮಾಡೋದರಿಂದ ಪೋಲಿಸ್ ಸಿಬ್ಬಂದಿಗಳಿಗೆ ಈ ಕಡೆ ಕೆಲಸ ಮಾಡಲು ಆಗದೆ, ಆ ಕಡೆ ಕುಟುಂಬದ ಸದಸ್ಯರ ಜೊತೆ ಇರದೆ ಕೇವಲ ಟ‌್ರ್ಯಾವಲಿಂಗನಲ್ಲೇ ಸಮಯ ಕಳೆಯುವ ಪರಿಸ್ಥಿತಿ ಸದ್ಯ ಅವಳಿ ನಗರದ ಪೊಲೀಸ್ ಸಿಬ್ಬಂದಿಗಳಲ್ಲಿ ಕಾಡುತ್ತಿದೆ.
ಜುಲೈನಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ: ಸಚಿವ ಜೋಶಿ
ಹಾಗಂತ ನಾವು ಪೋಲಿಸ್ ಪೇದೆಗಳ ವಿಚಾರವನ್ನ ಯಾಕೆ ಪ್ರಸ್ತಾಪ ಮಾಡುತ್ತಿದ್ದೇವೆ ಅಂದರೆ ಪೋಲಿಸ್ ಇಲಾಖೆಯಲ್ಲಿ ಐದು ವರ್ಷ ಒಂದೇ ಕಡೆ ಕೆಲಸ ಮಾಡುತ್ತಿದ್ದರೆ ಅಂತವರನ್ನ ವರ್ಗಾವಣೆ ಮಾಡೋದು ಅಂತ ಪೋಲಿಸ್ ಇಲಾಖೆಯಲ್ಲಿ ರೂಲ್ಸ್ ಇರಬಹುದು. ಆದರೆ ಹಾಗಂತ ನಾವು ಎಲ್ಲರೂ ಕೆಟ್ಟವರು, ಹಾಗಂತ ಎಲ್ಲರೂ ಒಳ್ಳೆಯವರು ಅಂತ ನಾವು ಹೇಳ್ತಿಲ್ಲ. ಇದರಿಂದ ಪೋಲಿಸ್ ಪೇದೆಗಳಿಗೆ ವರ್ಗಾವಣೆ ನೀತಿ ತುಂಬಾ ಕಿರಿಕರಿ ಆಗಿದೆ ಎಂದು ಕೆಲ ಪೋಲಿಸ್ ಸಿಬ್ಬಂದಿಗಳು ಏಷ್ಯಾ ನೆಟ್ ಸುವರ್ಣ ನ್ಯೂಸ್ ಮುಂದೆ ಅಳಲನ್ನ ತೋಡಿಕೊಂಡಿದ್ದಾರೆ. ಆದರೆ ಈ ಕಡೆ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡೋದರಿಂದ ನಮ್ಮ ಮಕ್ಕಳು, ಕುಟುಂಬಗಳಿಗೆ ಸಮಯ ಕೊಡಲು ಆಗುತ್ತಿಲ್ಲ, ಈ ಕಡೆ ಕೆಲಸ ಮಾಡಲೂ ಸರಿಯಾಗಿ ಆಗುತ್ತಿಲ್ಲ ಅಂತ ಕೆಲ ಪೋಲಿಸ್ ಸಿಬ್ಬಂದಿಗಳು ಹೇಳಿದ್ರೆ ಮತ್ತೊಂದಡೆ ವರ್ಗಾವಣೆ ಆದ್ರೆ ನಾವು ಪೋಲಿಸ್ ಕೆಲಸವನ್ನೇ ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲನ್ನ ತೋಡಿಕೊಂಡಿದ್ದಾರೆ.
ಇನ್ನು ಪೋಲಿಸ್ ಕಮಿಷನರ್ ರಮನಗುಪ್ತಾ ಅವರು ವರ್ಗಾವಣೆ ಮಾಡ್ತಾ ಇರೋದಕ್ಕೆ ಸಿಬ್ಬಂದಿಗಳ ಆಕ್ಷೇಪಣೆ ಇಲ್ಲ, ಆದರೆ ಎಪ್ರಿಲ್, ತಿಂಗಳಲ್ಲಿ ವರ್ಗಾವಣೆ ಮಾಡಿದ್ರೆ ಒಳ್ಳೆಯದಿತ್ತು. ಆದರೆ ಈಗಾಗಲೇ ಮಕ್ಕಳನ್ನ ಮೇ ಮೊದಲ ವಾರದಲ್ಲಿ ಶಾಲಾ ಕಾಳೆಜುಗಳಿಗೆ ಸೇರಿಸಿದ್ದೇವೆ, ಈಗ ನಮ್ಮನ್ನ ಧಾರವಾಡದಿಂದ ಹುಬ್ಬಳ್ಳಿಗೆ , ಹುಬ್ಬಳ್ಳಿಯಿಂದ ಧಾರವಾಡಕ್ಕೆ ವರ್ಗಾವಣೆ ಮಾಡಿದ್ರೆ ನಮಗೆ ದಿನನಿತ್ಯ 25 ಕಿ ಮಿ ಸಂಚರಿಸಿ ಸೇವೆ ಮಾಡಲಿಕ್ಕೆ ತೊಂದರೆಯಾಗಿದೆ. ಇನ್ನು ನಾವು ಕೂಡಾ ಯಾವುದೇ ಕಾರಣಕ್ಕೂ ಹಿರಿಯ ಅಧಿಕಾರಿಗಳ ಮಾತು ಮೀರಲ್ಲ. ಆದರೆ ಯಾರೋ ಪೋಲಿಸರು ಮಾಡಿದ ತಪ್ಪನ್ನ ಬಡಪಾಯಿ ಪೋಲಿಸ್ ಸಿಬ್ಬಂದಿಗಳಿಗೆ ಶಿಕ್ಷೆ ಕೊಡೋದು ಸರಿ ಅಲ್ಲ ಅನ್ನೋ ಮಾತುಗಳು ಪೋಲಿಸ್ ಇಲಾಖೆಯಲ್ಲಿ ಕೇಳಿ ಬರುತ್ತಿವೆ. ಯಾರೋ ಒಂದಿಷ್ಟು ಪೋಲಿಸ್ ಪೇದೆಗಳು ಮಾಡಿದ ತಪ್ಪಿಗೆ ಬಡಪಾಯಿ ಅಮಾಯಕ ಪೋಲಿಸ್ ಸಿಬ್ಬಂದಿಗಳಿಗೆ ಆಗುವ ಅನ್ಯಾಯವನ್ನ ಪೋಲಿಸ್ ಕಮಿಷನರ್ ರಮನಗುಪ್ತಾ ಅವರು ಗಮನ ಹರಿಸಬೇಕು ಎಂಬುದು ನಮ್ಮ ಆಶಯವು ಕೂಡಾ ಇದೆ.
ವರ್ಗಾವಣೆ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿ ಪೋಲಿಸ್ ಠಾಣೆ ಗಲಾಟೆನೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ ಹಿಂದಿನ ಕಮಿಷನರ್ ಅವರು ಕಳೆದ ವರ್ಷ ಸಾಕಷ್ಟು ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿದ್ದರು. ಇದರಿಂದ ಕಮ್ಯೂನಿಮೇಶನ್ ಗ್ಯಾಪ್ ನಿಂದ ಹಳೆ ಹುಬ್ಬಳ್ಳಿ ಗಲಾಟೆ ಜೋರಾಗಿ ವಿಕೋಪಕ್ಕೆ ಹೋಗಿ ಕಲ್ಲೂ ತೂರಾಟ ಕೂಡ ನಡೆದಿತ್ತು. ಸ್ಥಳೀಯ ಪೋಲಿಸರು ಮಾಹಿತಿ ಕೊರತೆ ಕಾರಣಕ್ಕೆ ಇಷ್ಟಲ್ಲ ಅವಾಂತರವಾಗಿದೆ ಎಂದು ಸ್ಥಳೀಯ ಪೋಲಿಸ್ ಸಿಬ್ಬಂದಿಗಳಲ್ಲಿ ಮಾತುಗಳ ಕೇಳಿ ಬರುತ್ತಿವೆ.
ಪಕ್ಷದ ಕಷ್ಟಕಾಲದಲ್ಲಿ ಶೆಟ್ಟರ್ ಕೈ ಹಿಡಿದಿದ್ದಾರೆ, ಅವರನ್ನು ನಾವು ಕೈಬಿಡಲ್ಲ: ಡಿ.ಕೆ.ಶಿವಕುಮಾರ್
ಇನ್ನಾದರೂ ವರ್ಗಾವಣೆ ಮಾಡೋದಿದ್ರೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮಾಡಬೇಕು. ಜೂನ್ ತಿಂಗಳಲ್ಲಿ ವರ್ಗಾವಣೆ ಮಾಡೋದು ಸರಿಯಲ್ಲ, ಈಗಾಗಲೇ ಸ್ಥಾನಿಸಕವಾಗಿ ವಾಸಿಸುವ ಪೋಲಿಸರು ತುಂಬಾ ಕಷ್ಟವನ್ನ ಎದುರಿಸುತ್ತಿದ್ದಾರೆ, ವರ್ಗಾವಣೆಗೆ ಬೇಸತ್ತು ಕೆಲ ಪೊಲೀಸ್ ಸಿಬ್ಬಂದಿಗಳು ಸೇವೆಯಿಂದಲೇ ದೂರ ಉಳಿಯಲು ಮನಸ್ಸು ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ಇನ್ನಾದರೂ ಪೊಲೀಸ್ ಸಿಬ್ಬಂದಿಗಳಿಗೆ ಹಿರಿಯ ಅಧಿಕಾರಿಗಳು ಯಾವ ರೀತಿಯಾಗಿ ಸಹಾಯ ಮಾಡ್ತಾರೆ ಅನ್ನೋದು ಕೂಡಾ ಅಷ್ಟೇ ಪ್ರಶ್ನೆ ಯಾಗಿದೆ. ಪೊಲೀಸರಿಲ್ಲದೆ ಇಡಿ ರಾಜ್ಯವೇ ಸ್ಥಬ್ದವಾಗುತ್ತೆ. ಎಲ್ಲರಿಗೂ ರಕ್ಷಣೆ ಕೊಡೋ ಸೂಪರ್ ಕಾಪ್ ಪೊಲೀಸರ ವರ್ಗಾವಣೆಯನ್ನ ಕೈ ಬಿಡಬೇಕು. ಸದ್ಯ ವರ್ಗಾವಣೆ ನೀತಿಯನ್ನ ಕೈ ಬಿಡಬೇಕು ಎಂಬುದು ಪೋಲಿಸ್ ಸಿಬ್ಬಂದಿಗಳ ಮನದಾಳದ ಮಾತುಗಳಾಗಿದೆ.