ರಾಯಚೂರಲ್ಲಿ ಮತ್ತೆ ವಾಂತಿಭೇದಿ: 20 ಮಂದಿ ಅಸ್ವಸ್ಥ

By Kannadaprabha News  |  First Published Jun 3, 2023, 7:58 AM IST

ಗೊರೇಬಾಳ ಗ್ರಾಮದಲ್ಲಿ ವಾರದಿಂದ ವಾಂತಿಭೇದಿ ಕಾಣಿಸಿಕೊಂಡು ನಿಯಂತ್ರಣಕ್ಕೆ ಬಂತು ಎಂದು ನಿಟ್ಟುಸಿರು ಬಿಡುವಾಗಲೇ ಇದೇ ಗ್ರಾಪಂ ವ್ಯಾಪ್ತಿಯ ಯರಗುಂಟಿಯಲ್ಲಿ 20 ಕ್ಕೂ ಅಧಿಕ ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ. ವಾಂತಿಭೇದಿಯಿಂದ ಲಿಂಗಸುಗೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.


ಲಿಂಗಸುಗೂರು(ಜೂ.03): ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೊರೆಬಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರಗುಂಟಿ ಗ್ರಾಮದಲ್ಲಿ ಹತ್ತಾರು ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು ಕೆಲವರು ಲಿಂಗಸುಗೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಇನ್ನೂ ಕೆಲವರು ಈಚನಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವಾಂತಿಭೇದಿಯಿಂದ ಜನ ತಲ್ಲಣಗೊಂಡಿದ್ದಾರೆ.

ಗೊರೇಬಾಳ ಗ್ರಾಮದಲ್ಲಿ ವಾರದಿಂದ ವಾಂತಿಭೇದಿ ಕಾಣಿಸಿಕೊಂಡು ನಿಯಂತ್ರಣಕ್ಕೆ ಬಂತು ಎಂದು ನಿಟ್ಟುಸಿರು ಬಿಡುವಾಗಲೇ ಇದೇ ಗ್ರಾಪಂ ವ್ಯಾಪ್ತಿಯ ಯರಗುಂಟಿಯಲ್ಲಿ 20 ಕ್ಕೂ ಅಧಿಕ ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ. ವಾಂತಿಭೇದಿಯಿಂದ ಲಿಂಗಸುಗೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

Latest Videos

undefined

ಆಳಂದ: ಕಲುಷಿತ ಆಹಾರ, ನೀರಿನಿಂದ 21 ಜನರು ಅಸ್ವಸ್ಥ

ಶಂಶಾದ್‌ಬೇಗಂ ಅಬ್ದಲ್‌ ಸಾಬ, ರಮ್ಯಶ್ರೀ ಲಿಂಗರಾಜ, ವರುಣಾಶ್ರೀ ಲಿಂಗರಾಜ, ಮುಸ್ಕಾನ್‌ ಇಸಾಕ್‌ಸಾಬ, ಶಬೀನಾಬೇಗಂ, ಹಸನ್‌ ಸಾಬ ಹುಸೇನ್‌ಸಾಬ, ಆಶಾ ಹುಸೇನ್‌ ಸಾಬ, ಹನುಮೇಶ ಶಿವಗ್ಯಾನಿ ಸೇರಿದಂತೆ ಲಿಂಗಸುಗೂರು, ರಾಯಚೂರು, ಸಿಂಧನೂರು ಹಾಗೂ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೆ ಯರಗುಂಟಿ ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್‌, ತಾಪಂ ಇಒ ಅಮರೇಶ ಯಾದವ್‌ ಭೇಟಿ ನೀಡಿದ್ದು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಆಂಬುಲೆನ್ಸ್‌ ಮೂಲಕ ವಾಂತಿಭæೕದಿ ಪೀಡಿತರ ರವಾನಿಸಲು ಜಾಗ್ರತೆ ವಹಿಸಲಾಗಿದೆ.

ತಾಪಂ ಇಒ ಕುಡಿಯುವ ನೀರು ಪೂರೈಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆ ಕಂಡು ಬಂದಿಲ್ಲ ಎನ್ನಲಾಗುತ್ತಿದೆ. ಮದುವೆ ದಿಬ್ಬಣದ ಊಟದಿಂದ ವಾಂತಿಭೇದಿ ಕಂಡು ಬಂದಿರಬಹುದು ಎಂದು ಹೇಳಲಾಗುತ್ತಿದೆ. ಗ್ರಾಮದಲ್ಲಿನ ನೀರು ಕುಡಿಯಲು ಯೋಗ್ಯವಾಗಿದೆ.

ಕಲುಷಿತ ನೀರು: ರಾಯಚೂರಲ್ಲಿ ಮತ್ತೆ 38 ಮಂದಿ ಅಸ್ವಸ್ಥ

ಯರಗುಂಟಿ ಗ್ರಾಮದಲ್ಲಿ ಅನೇಕರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಸೂಕ್ತ ಚಿಕಿತ್ಸೆಗೆ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು ಯೋಗ್ಯವಾಗಿದೆ. ಮದುವೆ ಊಟದಲ್ಲಿ ಸಮಸ್ಯೆ ಆಗಿರಬಹುದೆಂಬ ಶಂಕೆ ಇದ್ದು, ಪರೀಕ್ಷೆ ಬಳಿಕ ವಾಂತಿಭೇದಿಗೆ ನಿಖರ ಕಾರಣ ಗೊತ್ತಾಗಲಿದೆ ಅಂತ ಲಿಂಗಸುಗೂರು ಟಿಎಚ್‌ಒ ಅಮರೇಶ ಪಾಟೀಲ್‌ ತಿಳಿಸಿದ್ದಾರೆ.  

ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗಳು ಸಮರ್ಪಕವಾಗಿದೆ. ಜನರಲ್ಲಿ ಕಾಣಿಸಿಕೊಂಡಿರುವ ವಾಂತಿಭೇದಿ ಕುರಿತು ಭಯಪಡದಂತೆ ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಶುದ್ಧ ಕುಡಿಯುವ ನೀರು ಒದಗಿಸಲು ವ್ಯವಸ್ಥೆಗಳ ಏರ್ಪಾಟು ಮಾಡಿಕೊಳ್ಳಲಾಗಿದೆ. ವಾಂತಿಭೇದಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳಲಾಗುವುದು ಅಂತ ಲಿಂಗಸುಗೂರು ತಾಪಂ ಇಒ ಅಮರೇಶ ಯಾದವ್‌ ಹೇಳಿದ್ದಾರೆ. 

click me!