ಕಾಮಣ್ಣ ಪ್ರತಿಷ್ಠಾಪನೆ ವಿಚಾರ: ಮತ್ತೆ ವಿವಾದಕ್ಕೀಡಾದ ಹುಬ್ಬಳ್ಳಿ ಈದ್ಗಾ ಮೈದಾನ

By Kannadaprabha News  |  First Published Mar 10, 2023, 10:51 AM IST

ಗಣೇಶೋತ್ಸವ, ಕನಕದಾಸ, ಟಿಪ್ಪು ಜಯಂತಿಯನ್ನು ಇಲ್ಲಿನ ಈದ್ಗಾ ಮೈದಾನದಲ್ಲಿ ಆಚರಿಸಲು ಅನುಮತಿ ನೀಡಿದ್ದ ಮಹಾನಗರ ಪಾಲಿಕೆ ಇದೀಗ ಕಾಮಣ್ಣನ ಪ್ರತಿಷ್ಠಾಪನೆಗೆ ಅನುಮತಿ ನಿರಾಕರಿಸಿದೆ.


ಹುಬ್ಬಳ್ಳಿ (ಮಾ.10) : ಗಣೇಶೋತ್ಸವ, ಕನಕದಾಸ, ಟಿಪ್ಪು ಜಯಂತಿಯನ್ನು ಇಲ್ಲಿನ ಈದ್ಗಾ ಮೈದಾನದಲ್ಲಿ ಆಚರಿಸಲು ಅನುಮತಿ ನೀಡಿದ್ದ ಮಹಾನಗರ ಪಾಲಿಕೆ ಇದೀಗ ಕಾಮಣ್ಣನ ಪ್ರತಿಷ್ಠಾಪನೆಗೆ ಅನುಮತಿ ನಿರಾಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ(PM Narendra Modi) ಮಾ.12ಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತಾ ಸಮಸ್ಯೆಯಿಂದಾಗಿ ಅನುಮತಿ ನೀಡುತ್ತಿಲ್ಲ. ಮೊದಲೇ ಅರ್ಜಿ ಕೊಟ್ಟಿದ್ದರೆ ಪರಿಗಣಿಸಬಹುದಿತ್ತು ಎಂದು ಮಹಾನಗರ ಪಾಲಿಕೆ(hubballi Municipal Corporation), ಪೊಲೀಸ್‌ ಇಲಾಖೆ (Police Department),) ಸ್ಪಷ್ಟಪಡಿಸಿದೆ.

Tap to resize

Latest Videos

 

Holi 2023: ಹುಬ್ಬಳ್ಳಿಯಲ್ಲಿ ಇಂದು ಸಂಭ್ರಮದ ಜಗ್ಗಲಗಿ ಹಬ್ಬ

ಈದ್ಗಾ ಮೈದಾನ(Edgah)ದಲ್ಲಿ ಕಾಮಣ್ಣನ ಪ್ರತಿಷ್ಠಾಪನೆ(Kamanna festival)ಗೆ ಅನುಮತಿ ನಿರಾಕರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆ, ಪೊಲೀಸ್‌ ಕಮಿಷನರೇಟ್‌ ಹಾಗೂ ಪಾಲಿಕೆ ತನ್ನ ಅಸಹಾಯಕತೆಯನ್ನು ತೋರಿಸಿದಂತಾಗಿದೆ. ಚೆನ್ನಮ್ಮ ಮೈದಾನದಲ್ಲಿ ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ನೀಡದಿರುವುದು ಖಂಡನೀಯ ಎಂದು ತಿಳಿಸಿದೆ.

ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಈದ್ಗಾ ಮೈದಾನದ ಸುತ್ತಲೂ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಕಿತ್ತೂರ ಚೆನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) 3 ದಿನಗಳ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಹೋಳಿ ಹುಣ್ಣಿಮೆ(Holi festival) ಆಚರಿಸುತ್ತೇವೆ. ಅದಕ್ಕೆ ಅನುಮತಿ ನೀಡಿ ಎಂದು ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳವೂ ಮಹಾನಗರ ಪಾಲಿಕೆಗೆ ಮಾ.7ರಂದು ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಇಲ್ಲಿನ ಉಪನಗರ ಪೊಲೀಸ್‌ ಠಾಣೆಯಲ್ಲಿ ತುರ್ತು ಸಭೆ ನಡೆಸಿದ ಪೊಲೀಸ್‌ ಕಮಿಷನರೇಟ್‌ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಅನುಮತಿ ನಿರಾಕರಿಸಿದರು.

ಈಗ ಅನುಮತಿ ನೀಡಿದರೆ ಬಂದೋಬಸ್‌್ತ ಏರ್ಪಡಿಸುವುದು ಕಷ್ಟವಾಗುತ್ತದೆ. ಪ್ರಧಾನಿ ಕಾರ್ಯಕ್ರಮಕ್ಕೂ ಬಂದೋಬಸ್‌್ತ ಏರ್ಪಡಿಸಬೇಕಾಗುತ್ತದೆ. ಆದ ಕಾರಣ ಈಗ ಅನುಮತಿ ನೀಡಲು ಸಾಧ್ಯವಾಗಲ್ಲ ಎಂದು ಪೊಲೀಸ್‌ ಕಮಿಷನರೇಟ್‌ ಅಭಿಪ್ರಾಯಪಟ್ಟಿದೆ. ಉತ್ಸವ ಸಮಿತಿಯವರನ್ನು ಕರೆದು ಅವರಿಗೂ ಈ ವಿಷಯ ತಿಳಿಸಲಾಗಿದೆ.

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ, ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈದ್ಗಾ ಮೈದಾನದಲ್ಲಿ ಕಾಮಣ್ಣನ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಮಾ.7ರಂದು ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದವರು ಅರ್ಜಿ ಕೊಟ್ಟಿದ್ದರು. ಆದರೆ ಅದೇ ದಿನ ಕಾಮಣ್ಣನ ಪ್ರತಿಷ್ಠಾಪನೆ ಆಗಿತ್ತು. ಜತೆಗೆ ಇಷ್ಟುತಡವಾಗಿ ಅರ್ಜಿ ಕೊಟ್ಟಿರುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಕಷ್ಟಕರವಾಗುತ್ತದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವೂ ಮಾ.12ಕ್ಕೆ ಧಾರವಾಡದಲ್ಲಿ ನಡೆಯಲಿದೆ. ಅದಕ್ಕೆ ಭದ್ರತೆ ಒದಗಿಸಬೇಕಿದೆ. ಈ ಬಗ್ಗೆಯೂ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅನುಮತಿ ನಿರಾಕರಿಸಲಾಗಿದೆ ಎಂದರು. ತಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡವೂ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮುಂದೆ ಬೇರೆ ಹಬ್ಬಗಳ ಆಚರಣೆಗೆ ಅನುಮತಿ ಕೋರಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ಆಗಿನ ಸ್ಥಿತಿ ನೋಡಿಕೊಂಡು ಅನುಮತಿ ಕೊಡಬೇಕೋ ಬೇಡವೋ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಪೊಲೀಸ್‌ ಕಮಿಷನರ್‌ ರಮಣ್‌ ಗುಪ್ತಾ ಮಾತನಾಡಿ, ಕಾಮಣ್ಣನ ಪ್ರತಿಷ್ಠಾಪನೆ ಮಾಡಬೇಕೆಂದರೆ ಮೊದಲೇ ತಿಳಿಸಬೇಕಿತ್ತು. ಅಂದರೆ ಭದ್ರತೆಗೆ ಹೆಚ್ಚುವರಿ ಪೊಲೀಸರನ್ನು ಬೇರೆಡೆಯಿಂದ ಕರೆ ತರಲಾಗುತ್ತಿತ್ತು. ಆದರೆ ಇದೀಗ ಏಕಾಏಕಿ ಬಂದಿದ್ದರಿಂದ ಭದ್ರತೆ ಕಲ್ಪಿಸುವುದು ಕಷ್ಟವಾಗುತ್ತದೆ. ಜತೆಗೆ ಪ್ರಧಾನಿ ಕಾರ್ಯಕ್ರಮವೂ ಮಾ.12ಕ್ಕೆ ಇರುವ ಕಾರಣ ಅಲ್ಲೂ ಭದ್ರತೆ ಕಲ್ಪಿಸಬೇಕಾಗುತ್ತದೆ. ಆದಕಾರಣ ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಖಂಡನೆ:

ಈ ನಡುವೆ ಕಿತ್ತೂರು ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಸಂಜಯ ಬಡಸ್ಕರ್‌ ಮಾತನಾಡಿ, ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ನೀಡದಿರುವುದು ಖಂಡನೀಯ. ಇದು ಪೊಲೀಸ್‌ ಕಮಿಷನರೇಟ್‌ ಹಾಗೂ ಜಿಲ್ಲಾಡಳಿತದ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಮಾ.12ಕ್ಕೆ ಮಂಡ್ಯದಲ್ಲಿ ಮೋದಿ ಭರ್ಜರಿ 15 ಕಿ.ಮೀ ರೋಡ್‌ ಶೋ

ಸಭೆಯಲ್ಲಿ ಡಿಸಿಪಿಗಳಾದ ಗೋಪಾಲ ಬ್ಯಾಕೋಡ್‌, ರಾಜೀವ್‌ ಸೇರಿದಂತೆ ಹಲವು ಅಧಿಕಾರಿಗಳಿದ್ದರು.

click me!