ಗ್ರಾಹಕ ಸಂತೃಪ್ತಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 3ನೇ ರ‍್ಯಾಂಕ್

By Kannadaprabha News  |  First Published Mar 4, 2021, 9:34 AM IST

ಭಾರತದಲ್ಲಿ 56 ವಿಮಾನ ನಿಲ್ದಾಣಗಳೊಂದಿಗೆ ಪೈಪೋಟಿ ನಡೆಸಿದ ಹುಬ್ಬಳ್ಳಿ ಏರ್‌ಪೋರ್ಟ್‌| ವಿಮಾನ ನಿಲ್ದಾಣ ಪ್ರಾಧಿಕಾರ ಗ್ರಾಹಕರ ಒಟ್ಟಾರೆ ತೃಪ್ತಿ, ಪ್ರವೇಶ, ಪಾಸ್‌ಪೋರ್ಟ್‌ ನಿಯಂತ್ರಣ, ಭದ್ರತೆ, ಸೌಲಭ್ಯಗಳು, ಪರಿಸರ, ಸೇವೆಗಳು ಮತ್ತು ಪ್ರಯಾಣದ ವಿವರ ಸೇರಿ ಇತರೆ ವಿಷಯಗಳ ಕುರಿತು ನಡೆದ ಸಮೀಕ್ಷೆ| 


ಹುಬ್ಬಳ್ಳಿ(ಮಾ.04): ಗ್ರಾಹಕ ಸಂತೃಪ್ತಿ ಸಮೀಕ್ಷೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವು ದಕ್ಷಿಣ ಭಾರತ ವಲಯದಲ್ಲಿ 3ನೇ ಸ್ಥಾನ ಹಾಗೂ ದೇಶದಲ್ಲಿ 15ನೇ ಸ್ಥಾನ ಪಡೆದಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ವತಿಯಿಂದ 2020ರ ಜುಲೈನಿಂದ ಡಿಸೆಂಬರ್‌ ವರೆಗೆ ನಡೆದ ಗ್ರಾಹಕರ ಸಂತೃಪ್ತಿ ಸಮೀಕ್ಷೆ (ಸಿಎಸ್‌ಎಸ್‌) ಅಥವಾ ಸಂತೃಪ್ತ ಗ್ರಾಹಕರ ಸರ್ವೇ ನಡೆಸಲಾಗಿತ್ತು. ಇದರ ಪಟ್ಟಿಯಲ್ಲಿ ದಕ್ಷಿಣ ವಲಯ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ 3ನೇ ಸ್ಥಾನದಲ್ಲಿದೆ ಮತ್ತು ಭಾರತದಲ್ಲಿ 15ನೇ ಸ್ಥಾನದಲ್ಲಿದೆ.

Tap to resize

Latest Videos

ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ಲಾಸ್ಟಿಕ್‌ ಮುಕ್ತ

ಭಾರತದಲ್ಲಿ 56 ವಿಮಾನ ನಿಲ್ದಾಣಗಳೊಂದಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ಪೈಪೋಟಿ ನಡೆಸಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಗ್ರಾಹಕರ ಒಟ್ಟಾರೆ ತೃಪ್ತಿ, ಪ್ರವೇಶ, ಪಾಸ್‌ಪೋರ್ಟ್‌ ನಿಯಂತ್ರಣ, ಭದ್ರತೆ, ಸೌಲಭ್ಯಗಳು, ಪರಿಸರ, ಸೇವೆಗಳು ಮತ್ತು ಪ್ರಯಾಣದ ವಿವರ ಸೇರಿ ಇತರೆ ವಿಷಯಗಳ ಕುರಿತು ಸಮೀಕ್ಷೆಯಲ್ಲಿ ಅಂಕ ಪಡೆದಿತ್ತು.

ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ಪ್ರಮೋದ್‌ ಠಾಕ್ರೆ ಮಾತನಾಡಿ, ರಾಜ್ಯದಲ್ಲಿ ಗ್ರಾಹಕರಿಗೆ ಗುಣಮಟ್ಟದ ವಿಮಾನ ಸೇವೆ ನೀಡುವಲ್ಲಿ ಸಾಕಷ್ಟು ಯೋಜನೆಯನ್ನು ಸರ್ಕಾರದ ನಿರ್ದೇಶನದ ಮೇರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜಾರಿಗೆ ತರಲಾಗಿದೆ. ಈ ಎಲ್ಲ ಅಭಿವೃದ್ಧಿಗೆ ಗ್ರಾಹಕರ ಬೆಂಬಲವೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

click me!