ಕೈಗೆ ಮತ್ತೊಂದು ಆಘಾತ: ಮುಖಂಡರೋರ್ವರ ಸ್ಥಾನ ಅನರ್ಹತೆ

Kannadaprabha News   | Asianet News
Published : Nov 18, 2020, 03:50 PM IST
ಕೈಗೆ ಮತ್ತೊಂದು ಆಘಾತ: ಮುಖಂಡರೋರ್ವರ ಸ್ಥಾನ ಅನರ್ಹತೆ

ಸಾರಾಂಶ

ಕಾಂಗ್ರೆಸ್ ಮುಖಂಡರೋರ್ವರನ್ನು ಪ್ರಮುಖ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದರಿಂದ ಕೈಗೆ ಮತ್ತೊಂದು ಆಘಾತವಾಗಿದೆ

ಮಂಡ್ಯ (ನ.18):  ನಾಗಮಂಗಲ ತಾಲೂಕು ಹರದಹಳ್ಳಿ ಎಚ್‌.ಎಸ್‌ ನರಸಿಂಹಯ್ಯ ಅವರನ್ನು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ಸಹಕಾರ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರು ತೀರ್ಪು ನೀಡಿದ್ದಾರೆ. 

ಈ ತೀರ್ಪಿನಿಂದಾಗಿ ಕಾಂಗ್ರೆಸ್‌ ಬೆಂಬಲಿತರೆಂದು ಗುರುತಿಸಿಕೊಂಡಿರುವ ಎಚ್‌.ಎಸ್‌.ನರಸಿಂಹಯ್ಯ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾದರು.

ಜಂಟಿ ನಿರ್ದೇಶಕರ ಮಧ್ಯಂತರ ತೀರ್ಪಿನಿಂದಾಗಿ ಡಿಸಿಸಿ ಬ್ಯಾಂಕ್‌ನಲ್ಲಿದ್ದ ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಬಲ ಈಗ 7 ರಿಂದ 6ಕ್ಕೆ ಕುಸಿದಂತಾಗಿದೆ.

ಸೋತವರಿಗೆ ಮಂತ್ರಿ ಸ್ಥಾನ ನೀಡಿದ್ರೆ...ಜನ ನಮ್ಮನ್ನ ಏಕೆ ಆಯ್ಕೆ ಮಾಡ್ಬೇಕು: ಬಿಜೆಪಿ ಶಾಸಕ ಗರಂ ...

ನಾಗಮಂಗಲ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಆಯ್ಕೆಯಾದ ನರಸಿಂಹಯ್ಯ ಅವರು ಸರಿಯಾದ ದಾಖಲೆ ನೀಡದೆ ಆಯ್ಕೆಯಾಗಿದ್ದಾರೆಂದು ನಾಗಮಂಗಲ ತಾಲೂಕಿನ ಕಲ್ಲುವೀರನ ಕೊಪ್ಪಲು ಎಚ್‌.ರಮೇಶ್‌ ಜಂಟಿ ನಿರ್ದೇಶಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಾದಗಳನ್ನು ಆಲಿಸಿದ ನ್ಯಾಯಾಲಯ ನರಸಿಂಹಯ್ಯ ಅವರ ಆಯ್ಕೆಯನ್ನು ಅನರ್ಹ ಎಂದು ಘೋಷಿಸಿತು. ಈ ಕಾರಣದಿಂದ ನರಸಿಂಹಯ್ಯನವರು ಮತದಾನದ ಹಕ್ಕಿನಿಂದ ವಂಚಿತರಾದರು. ಈ ತೀರ್ಪು ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಉಂಟುಮಾಡಿದೆ.

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್