ವಿಧಿಯ ಕ್ರೂರತ್ವಕ್ಕೆ ಇಂದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿ ಆಗಿದೆ. ಮನೆ ಮಾಲೀಕನ ಅಂತ್ಯ ಸಂಸ್ಕಾರಕ್ಕೆ ಹೋದಾಗ ಮನೆ, ಕೊಟ್ಟಿಗೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಮನೆ ಸುಟ್ಟು ಕರಕಲಾಗಿ, ಕೊಟ್ಟಿಗೆಯಲ್ಲಿದ್ದ ರಾಸುಗಳ ಸಜೀವ ದಹನ ಆಗಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.02): ವಿಧಿಯ ಕ್ರೂರತ್ವಕ್ಕೆ ಇಂದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿ ಆಗಿದೆ. ಮನೆ ಮಾಲೀಕನ ಅಂತ್ಯ ಸಂಸ್ಕಾರಕ್ಕೆ ಹೋದಾಗ ಮನೆ, ಕೊಟ್ಟಿಗೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಮನೆ ಸುಟ್ಟು ಕರಕಲಾಗಿ, ಕೊಟ್ಟಿಗೆಯಲ್ಲಿದ್ದ ರಾಸುಗಳ ಸಜೀವ ದಹನ ಆಗಿವೆ.
undefined
ಸಿಲಿಂಡರ್ ಬ್ಲಾಸ್ಟ್ ಮನೆ, ಕೊಟ್ಟಿಗೆ ಬೆಂಕಿ ಆಹುತಿ: ವಿಧಿಕ್ರೂರತ್ವಕ್ಕೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಾಣೂರು ಗ್ರಾಮ ಇಂದು ಸಾಕ್ಷಿ ಆಗಿದೆ. ಅಜ್ಜಂಪುರ ತಾಲೂಕಿನ ಬಾಣೂರು ಗ್ರಾಮದ 65 ವರ್ಷದ ವೃದ್ಧ ಹನುಮಂತಪ್ಪ ಎಂಬುವರು ಇಂದು ಅನ್ಯಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರು. ಮನೆಯವರು ಅವರ ಅಂತ್ಯಸಂಸ್ಕಾರಕ್ಕೆಂದು ಹೋಗಿದ್ದ ವೇಳೆ ಮನೆಯಲ್ಲಿದ್ದ ಗ್ಯಾಸ್ನಿಂದ ಅನಿಲ್ ಸೋರಿಕೆಯಾಗಿ, ಸಿಲಿಂಡರ್ ಬ್ಲಾಸ್ಟ್ ಆಗಿ ದುರ್ಘಟನೆ ಸಂಭವಿಸಿದೆ. ಸಿಲಿಂಡರ್ ಬ್ಲಾಸ್ಟ್ನಿಂದ ಅಕ್ಕಪಕ್ಕದ ಎರಡು ಶೀಟ್ ಮನೆ ಹಾಗೂ ಮನೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಹಸು ಹಾಗೂ ಒಂದು ಕುರಿ ಸಜೀವ ದಹನವಾಗಿವೆ.
Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು
ಬೆಂಕಿ ಅವಘಡದಿಂದ ಶೀಟ್ ಮನೆ ಹಾಗೂ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ಗ್ರಾಮದಲ್ಲಿ ಜನ ಕೂಡ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಕಾರಣ ಗ್ರಾಮದಲ್ಲಿದ್ದ ಕೆಲ ಸ್ಥಳಿಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆದರೆ, ಸಿಲಿಂಡರ ಬ್ಲಾಸ್ಟ್ ಆದ ಪರಿಣಾಮ ಮನೆ, ಕೊಟ್ಟಿಗೆ, ರಾಸುಗಳು ಎಲ್ಲವೂ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ. ಅಜ್ಜಂಪರು ಪೊಲೀಸರು ಪ್ರಕರಣ ದಾಖಲಾಗಿದೆ. ಒಂದಡೆ ಮನೆಮಾಲೀಕನ ಸಾವು ಮತ್ತೊಂದಡೆ ಮನೆಯಲ್ಲಿದ್ದ ವಸ್ತುಗಳು, ಜಾನುವಾರು ಬೆಂಕಿಗೆ ಆಹುತಿ ಆಗಿರುವುದು ಮನೆಯರಿಗೆ ತೀವ್ರ ಆಘಾತ ಮೂಡಿಸಿದೆ.