ಹಾಲು ದರ ಏರಿಕೆಗೆ ಹೋಟೆಲ್ ಸಂಘ ಆಕ್ರೋಶ, ಕಾಫಿ ಟೀ ರೇಟ್ ಹೆಚ್ಚಳದ ಬಗ್ಗೆ ಎಕ್ಸ್‌ಕ್ಲೂಸೀವ್ ಮಾತು

Published : Oct 29, 2026, 07:53 PM IST
milk rate increase in karnataka

ಸಾರಾಂಶ

ನಂದಿನಿ ಹಾಲಿನ ದರ ಹೆಚ್ಚಳವನ್ನು ಹೋಟೆಲ್ ಮಾಲೀಕರ ಸಂಘ ತೀವ್ರವಾಗಿ ವಿರೋಧಿಸಿದ್ದು, ಟೀ ಮತ್ತು ಕಾಫಿ ಬೆಲೆಯನ್ನು 3 ರಿಂದ 5 ರೂಪಾಯಿ ಹೆಚ್ಚಿಸುವ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ, ರೈತರ ಹಿತದೃಷ್ಟಿ ಹಾಗೂ ಸಾಗಣೆ ವೆಚ್ಚದ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಬೆಂಗಳೂರು: ನಂದಿನಿ ಹಾಲು ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ನಾವು ಮೊದಲಿನಿಂದಲೂ ದರ ಹೆಚ್ಚಳ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಿದ್ವಿ. ಆದರೂ ಸರ್ಕಾರ ನಮ್ಮ ಮೇಲೆ ದರ ಏರಿಕೆ ಹೊರೆ ಹಾಕುತ್ತಿದ್ದಾರೆ ಎಂದು ಹೋಟೆಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಸಿ.ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ಮಾಲೀಕರು ಸರ್ವೈವ್ ಆಗಬೇಕಾದ್ರೆ ಟೀ, ಕಾಫಿ ತಿಂಡಿ ದರ ಹೆಚ್ಚಳ ಅನಿವಾರ್ಯ ಆಗಿದೆ. ಟೀ, ಕಾಫಿ ದರ 3 ರಿಂದ 5 ರೂಪಾಯಿ ಹೆಚ್ಚಳ ಸಾಧ್ಯತೆ ಇದೆ. ಸರ್ಕಾರದ ಹೀಗೆ ಅವೈಜ್ಞಾನಿಕವಾಗಿ ಬೆಲೆ ಹೆಚ್ಚಿಸುವುದು ಸರಿಯಲ್ಲ. ಸರ್ಕಾರಕ್ಕೆ ಮೊದಲೂ ಒತ್ತಾಯ ಮಾಡಿದ್ವಿ, ಈಗಲೂ ಮನವಿ ಮಾಡ್ತೀವಿ. ಸರ್ಕಾರ ರೈತರಿಗೆ ಸಹಾಯ ಮಾಡೋದಿದ್ದರೆ ಅವರೇ ಸಬ್ಸಿಡಿ ಕೊಡಲಿ. ರೈತರ ಹೆಸರು ಹೇಳಿ ಜನ ಸಾಮಾನ್ಯರ ಮೇಲೆ ನೇರ ಹೊರೆ ಹಾಕುವುದು ಸರಿಯಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಶಿವಕಮಾರ್ ಹೇಳಿದ್ದೇನು?

ಒಂದು ವರ್ಷ, ಎರಡು ವರ್ಷದಿಂದ ಹಾಲಿನ ದರ ಏರಿಕೆ ಬಗ್ಗೆ ಬೇಡಿಕೆ ಇತ್ತು. ಎಲ್ಲ ಬೆಲೆ ಜಾಸ್ತಿ ಇದೆ. ಹಾಲಿನ ಸಾಗಣೆ ಕೂಡ ಜಾಸ್ತಿ ಇದೆ. ಡಿಸೇಲ್ ಪೆಟ್ರೋಲ್ ಜಾಸ್ತಿ ಆಗಿದೆ. ಅವರು 12 ರಿಂದ 15 ರೂಪಾಯಿ ಏರಿಕೆ ಮಾಡುವಂತೆ ಕೇಳುತ್ತಿದ್ರು. ಕೊನೆಗೆ ನಾವು ಬಹಳ ತೂಕ ಮಾಡಿ ಎಲ್ಲರ ಬಳಿ ಚರ್ಚೆ ಮಾಡಿ 8 ರೂಪಾಯಿ ಏರಿಕೆ ಮಾಡಿದ್ದೇವೆ. ನಾವು 30-35 ರೂಪಾಯಿ ಕೊಡುತ್ತಿದ್ದೇವೆ. ಪಕ್ಕದ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಈಗಾಲೂ ಹಾಲಿನ ಬೆಲೆ ಕಡಿಮೆ ಇದೆ.

ನಾವು ಕಡಿಮೆ ದರ ಕೊಡುತ್ತಿರೋದ್ರಿಂದ ಆಂಧ್ರಕ್ಕೆ ಎಲ್ಲಾ ಹಾಲಿ ಹೋಗ್ತಿದೆ ಎಂದರು. ಮಹಾರಾಷ್ಟ್ರಗೂ ನಮ್ಮ ಹಾಲು ಹೋಗುತ್ತಿದೆ. ಅದನ್ನು ತಡೆಗಟ್ಟಬೇಕು ಅಂತ ಜಾಸ್ತಿ ಮಾಡುತ್ತಿದ್ದೇವೆ. ಈಗ ತಿರುಪತಿಗೆ ತುಪ್ಪ ತೆಗದುಕೊಳ್ಳುತ್ತಿದ್ದಾರೆ. ಅಲ್ಲೇ ತೆಗೆದುಕೊಳ್ಳಬಹುದು ಅಲ್ಲ? ನಮ್ಮ‌ ನಂದಿನಿ ಬಗ್ಗೆ ಅವರಿಗೆಲ್ಲ ನಂಬಿಕೆ ಇದೆ. ಆ ದೃಷ್ಟಿಯಿಂದ ಮೈಸೂರು ಪಾಕ್ ಸೇರಿದಂತೆ ಬೇರೆ ಬೇರೆ ಪದಾರ್ಥಗಳಿಗೆ ನಮ್ಮ ಉತ್ಪನ್ನಗಳನ್ನ ತೆಗೆದುಕೊಳ್ತಾರೆ. ಸರ್ಕಾರದಿಂದ ಸ್ವಲ್ಪ ಪ್ರೋತ್ಸಾಹ ಧನ ಕೊಡುತ್ತಿದ್ದೇವೆ. ರೈತನಿಗೆ ಲಾಸ್ ಆಗುತ್ತಿದೆ. ಅದಕ್ಕೆ ನಾವು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ರೈತರ ಬಹಳ ದಿನದ ಬೇಡಿಕೆ, ಪಕ್ಷಾತೀತವಾಗಿ ತೀರ್ಮಾನ ಇದು. ಕೇವಲ‌ ಕಾಂಗ್ರೆಸ್ ಶಾಸಕರ ತೀರ್ಮಾನ ಅಲ್ಲ. ಅಸೆಂಬ್ಲಿ , ಕೌನ್ಸಿಲ್ ಎಲ್ಲ ಪಕ್ಷದವರು ಜಾಸ್ತಿ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಎಲೆಕ್ಷನ್ ಇತ್ತು ಜಾಸ್ತಿ ಮಾಡಲು ಆಗಿರಲಿಲ್ಲ.

ಎಲೆಕ್ಷನ್ ಮುಗಿದಿದೆ ಆದ್ದರಿಂದ ತೀರ್ಮಾನ ಮಾಡಿದ್ದೇವೆ. ಬಸ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ನಿಮಗೆ ಗೊತ್ತಲ್ಲ ಸಾರಿಗೆ ಇಲಾಖೆ ಬಹಳ ಲಾಸ್ ಆಗಿದೆ. ಡಿಸೇಲ್‌ಗೆ ಅವರ ಬಳಿ ಕಾಸು ಇರಲಿಲ್ಲ. ನಾವು ಫ್ರೀಯಾಗಿ ಬೇರೆ ಸ್ವಲ್ಪ ಬಿಟ್ಟಿದ್ದೇವೆ. ಮೊದಲಿನಿಂದ ಅವರಿಗೆ ಟಿಕೆಟ್ ಏರಿಕೆ ಮಾಡಲು ಅಧಿಕಾರ ಇದೆ. ಆದ್ರಿಂದ ಅವರಿಗೆ ತೀರ್ಮಾನ ಮಾಡಿ ಅಂತ ಹೇಳಿದ್ದೇನೆ ಎಂದರು.

PREV
Read more Articles on
click me!

Recommended Stories

One Ward One Drive campaign: ಉತ್ತರ ಪಾಲಿಕೆಯ ಈ 18 ಜಂಕ್ಷನ್‌ ಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ!
KMF ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಸಾರಿಗೆ ಇಲಾಖೆಯಿಂದ ಮತ್ತೊಂದು ಬಿಗ್ ಶಾಕ್!