ವರ್ಗಾವಣೆ ವಿಚಾರಕ್ಕೆ ಡಿಕೆ ಶಿವಕುಮಾರ್ ಗರಂ, 'ಸಹಿಸುವ ಮಾತೇ ಇಲ್ಲ' ಎಂದು ಖಡಕ್ ವಾರ್ನಿಂಗ್

Published : Oct 29, 2026, 06:56 PM IST
CM DK Shivakumar

ಸಾರಾಂಶ

ನವೆಂಬರ್ 1ರಿಂದ ಸಾಮಾನ್ಯ ವರ್ಗಾವಣೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳಿಗೆ ಅವಕಾಶವಿಲ್ಲ ಎಂದು ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವರ್ಗಾವಣೆ ಶಿಫಾರಸುಗಳಿಗಾಗಿ ಸಮಯ ವ್ಯರ್ಥ ಮಾಡದೆ, ಜನಸೇವೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಸಿದ್ದಾರೆ.

ಬೆಂಗಳೂರು: ವರ್ಗಾವಣೆ ದಂಧೆ, ವರ್ಗಾವಣೆ ಶಿಫಾರಸ್ಸಿನ ವಿರುದ್ಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇನ್ಮುಂದೆ ಯಾರೂ ಕೂಡ ವರ್ಗಾವಣೆಗೆ ನನ್ನ ಬಳಿ ಬಂದು ಶಿಫಾರಸ್ಸು ಮಾಡಬಾರದ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಹೇಳಿದ್ದೇನು?

ನವೆಂಬರ್‌ 1ರಿಂದ ಸಾಮಾನ್ಯ ವರ್ಗಾವಣೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳಿಗೂ ಅವಕಾಶ ಇಲ್ಲ. ವರ್ಗಾವಣೆ ಚೀಟಿ ಹಿಡಿದುಕೊಂಡು ಯಾರೂ ನನ್ನ ಬಳಿ ಬರಬಾರದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವರ್ಗಾವಣೆ ಶಿಫಾರಸುಗಳಿಗಾಗಿ ಸಮಯ ವ್ಯರ್ಥ ಮಾಡುವುದನ್ನು ಇವತ್ತಿನಿಂದಲೇ, ಈ ಕ್ಷಣದಿಂದಲೇ ನಿಲ್ಲಿಸಿ ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ.

ನಾವು ಸರ್ಕಾರದ ಕೆಲಸ ಮತ್ತು ಜನಸೇವೆಗೆ ಆದ್ಯತೆ ನೀಡಬೇಕು. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಿಕೆ ಹಾಗೂ ಜನರ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಹೆಚ್ಚಿನ ಗಮನ ಹರಿಸಬೇಕು. ವರ್ಗಾವಣೆಗಾಗಿ ಶಿಫಾರಸು ಮಾಡುವುದಾಗಲಿ, ಒತ್ತಡ ಹೇರುವುದಾಗಲಿ ಸಹಿಸುವುದಿಲ್ಲ. ಜನರ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಿಕಾರ ಮತ್ತು ಪ್ರಭಾವ ಬಳಸುವುದು ಜನರ ಕೆಲಸಕ್ಕಾಗಿಯೇ ಹೊರತು ವರ್ಗಾವಣೆಗಾಗಿ ಅಲ್ಲ. ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಿ, ಜನರಿಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆಯಲ್ಲಿ ಹಣ ವಸೂಲಿ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪೊಲೀಸ್, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೌಕರರ ವರ್ಗಾವಣೆ ನಡೆಯುತ್ತಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಲಂಚವನ್ನ ಪಡೆಯಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ.. ರಾಜ್ಯ ಬಜೆಪಿ ನಾಯಕರು ಮೊದಲಿನಿಂದಲೂ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ಇಲಾಖೆಗಳಲ್ಲಿ ಎಸ್‌ಐ, ಸಿಪಿಐ, ಡಿವೈಎಸ್‌ಪಿ ಹಾಗೂ ಶಿಕ್ಷಕರ ಹುದ್ದೆಗಳ ವರ್ಗಾವಣೆಗೆ ಮೊತ್ತದ ರೇಟ್ ಕಾರ್ಡ್‌ ಇದೆ ಎಂದು ವಿರೋಧ ಪಕ್ಷದ ನಾಯಕರ ಆರೋಪ ಇದೆ.

ಈ ಹಿಂದೆ ಸಿದ್ದರಾಮಯ್ಯ ಕೂಡ ಎಚ್ಚರಿಕೆ ನೀಡಿದ್ದರು

ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರ ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೆ ಇಲಾಖಾ ಹಂತದಲ್ಲಿ ವರ್ಗಾವಣೆ ಆದೇಶ ಹೊರಡಿಸಿದರೆ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ ಕೂಡ ಎಚ್ಚರಿಕೆಯನ್ನ ನೀಡಿದ್ದರು. ಇದೀಗ ಡಿಕೆ ಶಿವಕುಮಾರ್ ಅವರು, ವರ್ಗಾವಣೆ ವಿಚಾರದಲ್ಲಿ ಶಿಫಾರಸ್ಸಿಗಾಗಿ ಯಾರೂ ಬರಬಾರದು ಎಂದು ಖಡಕ್ ಆಗಿ ಸೂಚಿಸಿದ್ದಾರೆ.

PREV
Read more Articles on
click me!

Recommended Stories

ರಾಯಚೂರು: ಸಾಲಕ್ಕೆ ಸಿಗರೇಟ್‌ ಕೊಡಲ್ಲ ಎಂದ ಅಂಗಡಿ ಮಾಲೀಕ, ನಡುರಸ್ತೆಯಲ್ಲೇ ಕೊಚ್ಚಿ ಕೊಂ* ಹಂತಕ!
ಹಾಲು ದರ ಏರಿಕೆಗೆ ಹೋಟೆಲ್ ಸಂಘ ಆಕ್ರೋಶ, ಕಾಫಿ ಟೀ ರೇಟ್ ಹೆಚ್ಚಳದ ಬಗ್ಗೆ ಎಕ್ಸ್‌ಕ್ಲೂಸೀವ್ ಮಾತು