ಡೆಂಘೀ ಟೆಸ್ಟ್‌ಗೆ ಹೆಚ್ಚು ಹಣ ವಸೂಲು ಮಾಡಿದ್ರೆ ಆಸ್ಪತ್ರೆ ಲೈಸನ್ಸ್ ರದ್ದು: ಧಾರವಾಡ ಡಿಸಿ

By Girish Goudar  |  First Published Jul 17, 2024, 7:32 PM IST

ಸರಕಾರದ ಈ ಆದೇಶ ಉಲ್ಲಂಘನೆ ಆಗದಂತೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಆಸ್ಪತ್ರೆಗಳಿಗೆ ಪ್ರಯೋಗಾಲಯಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು 


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಜು.17):  ಡೆಂಘೀ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಾದ ಎಲಿಸಾ ಹಾಗೂ ರಾಪಿಡ್ ಟೆಸ್ಟ್‌ ದರವನ್ನು ನಿಗದಿಸಿ ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಪ್ರಯೋಗ ಶಾಲೆಗಳು ಡಯಾಗೋಸ್ಟಿಕ್ ಲ್ಯಾಬೋರೇಟರಿಗಳು ಡೆಂಘೀ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಿಗೆ ಆಕರಿಸಬೇಕಾದ ವಿವಿಧ ದರಗಳನ್ನು ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು ಇದರ ಅನ್ವಯ ಹಣ ಪಡೆಯಬೇಕು. ನಿಗದಿತ ದರಕ್ಕಿಂತ ಹೆಚ್ಚು ವಸೂಲು ಮಾಡಿದ ಬಗ್ಗೆ ದೂರು ಬಂದರೆ ಪರಿಶೀಲಿಸಲಾಗುತ್ತದೆ. ಖಚಿತವಾದರೆ ಅಂತಹ ಆಸ್ಪತ್ರೆಯ ಲೈಸನ್ಸ್ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

Latest Videos

undefined

ಈ ಕುರಿತು ಪ್ರಕಟಣೆ ನೀಡಿರುವ ದಿವ್ಯ ಪ್ರಭು ಅವರು, ಡೆಂಘೀ ಪರೀಕ್ಷೆಯ ದರಗಳ ಮಾಹಿತಿಯನ್ನು ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಆಸ್ಪತ್ರೆಯಲ್ಲಿ ಹಾಕಬೇಕು ಎಂದು ತಿಳಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಡೆಂಘೀ ಜ್ವರ ಪತ್ತೆ ಹಚ್ಚುವ ELISA ಹಾಗೂ Rapid card test ದರಗಳನ್ನು (Screening test) ಪರಿಷ್ಕರಿಸಿ, ಸರಕಾರ ಆದೇಶ ಹೊರಡಿಸಿದೆ.

ಬಿಜೆಪಿ ದಲಿತರಿಗೆ ಸ್ಥಾನ ನೀಡದೆ ಅನ್ಯಾಯ: ರಮೇಶ್ ಜಿಗಜಿಣಗಿ ಹೇಳಿಕೆಗೆ ಕಾರಜೋಳ ಕಿಡಿ

ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಟೆಸ್ಟಿಂಗ್ ಲಾಬ್‍ಗಳಿಗೆ ಡೆಂಘೀ ಜ್ವರ ಪತ್ತೆ ಹಚ್ಚುವ ಡೆಂಘೀ ಎಲಿಸಾ ಎನ್‍ಎಸ್ 1 ಗೆ ರೂ.300 ಮತ್ತು ಡೆಂಘೀ ಏಲಿಸಾ ಐಜಿಎಂಗೆ ರೂ.300 ರ್ಯಾಪಿಡ್ ಕಾರ್ಡ್ ಟೆಸ್ಟ್ (ಎನ್‍ಎಸ್1, ಐಎಂಜಿ ಹಾಗೂ ಐಜಿಜಿ)ಗೆ ರೂ.250 ದರಗಳನ್ನು ಸರಕಾರದಿಂದ ನಿಗದಿ ಮಾಡಲಾಗಿದೆ.

ಸರಕಾರದ ಈ ಆದೇಶ ಉಲ್ಲಂಘನೆ ಆಗದಂತೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಆಸ್ಪತ್ರೆಗಳಿಗೆ ಪ್ರಯೋಗಾಲಯಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದ್ದಾರೆ.

click me!