ಕೋವಿಶೀಲ್ಡ್‌ ಪಡೆದಿದ್ದ ಆಸ್ಪತ್ರೆ ಸಿಬ್ಬಂದಿ ಸಾವು

Kannadaprabha News   | Asianet News
Published : Feb 27, 2021, 07:45 AM IST
ಕೋವಿಶೀಲ್ಡ್‌ ಪಡೆದಿದ್ದ ಆಸ್ಪತ್ರೆ ಸಿಬ್ಬಂದಿ ಸಾವು

ಸಾರಾಂಶ

ಕೋವಿಶೀಲ್ಡ್ ಲಸಿಕೆ ಪಡೆದಿದ್ದ ಆಸ್ಪತ್ರೆಯ ಸಿಬ್ಬಂದಿ ಮೃತರಾದ ಘಟನೆ ಹಾಸನದಲ್ಲಿ ನಡೆದಿದೆ. ಇದರಿಂದ ಲಸಿಕೆ ಬಗ್ಗೆ ಅನುಮಾನ ಮೂಡುವಂತಾಗಿದೆ. 

ಹಾಸನ (ಫೆ.27): ಕೋವಿಶೀಲ್ಡ್‌ ಲಸಿಕೆ ಪಡೆದ 20 ದಿನಗಳ ನಂತರ ಆಸ್ಪತ್ರೆಯ ಡಿ ದರ್ಜೆ ನೌಕರನೊಬ್ಬ ಶುಕ್ರವಾರ ಮೃತಪಟ್ಟಿರುವ ಘಟನೆ ಹಾಸನನಲ್ಲಿ ನಡೆದಿದೆ. 

ಆದರೆ ಇಲ್ಲಿಯವರೆಗೂ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಗಿಲ್ಲ. ಈ ಸಾವು ಹೃದಯ ಸಂಬಂಧಿ ಸಮಸ್ಯೆಯಿಂದ ಆಗಿರುವ ಸಾಧ್ಯತೆ ಇದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿನ ನಿಜವಾದ ಕಾರಣ ಗೊತ್ತಾಗಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ ತಿಳಿಸಿದ್ದಾರೆ. 

2 ನೆ ಅಲೆ ಅಲ್ಲ, ಸುನಾಮಿ...ಭೀತಿ ಹುಟ್ಟಿದ್ದೇಕೆ..? ...

ಹಾಸನ ಮಿಷನ್‌ ಆಸ್ಪತ್ರೆಯ ‘ಡಿ’ ದರ್ಜೆ ನೌಕರ ಸುರೇಶ್‌(44) ಮೃತಪಟ್ಟವರು. 15 ವರ್ಷಗಳಿಂದ ಸುರೇಶ್‌ ಹಾಗೂ ಪತ್ನಿ ಇಬ್ಬರೂ ಈ ಆಸ್ಪತ್ರೆಯಲ್ಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಲಸಿಕೆ ಪಡೆದ ಬಳಿಕ ನಾನು ಲಸಿಕೆ ಪಡೆಯಬಾರದಿತ್ತು ಎಂದು ಸತೀಶ್‌ ನಮ್ಮ ಬಳಿ ಹೇಳಿಕೊಂಡಿದ್ದರು. ನಮಗೆ ಲಸಿಕೆ ಮೇಲೆಯೇ ಅನುಮಾನವಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC