ಹೊಸಪೇಟೆ- ಕೊಟ್ಟೂರು ರೈಲು ಮಾರ್ಗ ಸಂಚಾರಕ್ಕೆ ಯೋಗ್ಯ: ಸ್ಥಳೀಯರಲ್ಲಿ ಸಂತಸ

By Web Desk  |  First Published Sep 27, 2019, 2:25 PM IST

ಹಲವು ದಶಕಗಳ ಬೇಡಿಕೆಯಾದ ಕೊಟ್ಟೂರು- ಹೊಸಪೇಟೆ ಬ್ರಾಡ್‌ಗೇಜ್ ರೈಲು ಮಾರ್ಗ ರೈಲು ಮಾರ್ಗ ಸಂಚಾರಕ್ಕೆ ಯೋಗ್ಯ| ಇನ್ನೆರಡು ಅಥವಾ ಮೂರು ದಿನಗಳಲ್ಲಿ ದಾವಣಗೆರೆ-ಹೊಸಪೇಟೆ ಪ್ಯಾಸೆಂಜರ್ ರೈಲು ಆರಂಭಗೊಳ್ಳುವ ಸೂಚನೆ| 


ಕೊಟ್ಟೂರು:(ಸೆ.27) ಹಲವು ದಶಕಗಳ ಬೇಡಿಕೆಯಾದ ಕೊಟ್ಟೂರು ಹೊಸಪೇಟೆ ಬ್ರಾಡ್‌ಗೇಜ್ ರೈಲು ಮಾರ್ಗವನ್ನು ಕಳೆದ ವಾರವಷ್ಟೇ ಅಂತಿಮ ಸಮೀಕ್ಷೆ ಮಾಡಿದ್ದ ಸಿಆರ್‌ಎಸ್ ತಂಡ ಈ ಮಾರ್ಗವು ಪ್ರಯಾಣಿಕರ ರೈಲು ಮಾರ್ಗ ಸಂಚರಿಸಲು ಯೋಗ್ಯವಾಗಿದ್ದು, ಸಂಚಾರವನ್ನು ಆರಂಭಿಸಲು ರೈಲ್ವೆ ಮಂಡಳಿಗೆ ಸೂಚಿಸಿದೆ.

ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸುವುದಕ್ಕೆ ರೈಲ್ವೆ ಮಂಡಳಿ ಮುಂದಾಗಿಲ್ಲ. ಬದಲಾಗಿ ಹೊಸಪೇಟೆ- ದಾವಣಗೆರೆ ನಡುವೆ ರೈಲು ಸಂಚರಿಸಲು ರೈಲ್ವೆ ಅಧಿಕಾರಿಗಳು ಕ್ರಮಕೈಗೊಂಡಿದ್ದು, ಇನ್ನೆರಡು ಅಥವಾ ಮೂರು ದಿನಗಳಲ್ಲಿ ದಾವಣಗೆರೆ ಹೊಸಪೇಟೆ ಪ್ಯಾಸೆಂಜರ್ ರೈಲು ಆರಂಭಗೊಳ್ಳುವ ಸೂಚನೆಯನ್ನು ರೈಲ್ವೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸಿಆರ್‌ಎಸ್ ತಂಡ ರೈಲ್ವೆ ಮಂಡಳಿಗೆ ನೀಡಿದ ವರದಿಯಲ್ಲಿ ಹೊಸಪೇಟೆ-ಕೊಟ್ಟೂರು ಪ್ರಯಾಣಿಕರ ರೈಲು ಮಾರ್ಗವನ್ನು ಕೊಟ್ಟೂರಿನಿಂದ ಹಗರಿಬೊಮ್ಮನಹಳ್ಳಿಗೆ 50 ಕಿಮೀ ವೇಗದಲ್ಲಿ ಹಗರಿಬೊಮ್ಮನಹಳ್ಳಿಯಿಂದ ವ್ಯಾಸನಕೇರಿಗೆ 40 ಕಿಮೀ ವೇಗದಲ್ಲಿ ಮತ್ತು ವ್ಯಾಸನಕೇರಿಯಿಂದ ಹೊಸಪೇಟೆಗೆ 40 ಕಿಮೀ ವೇಗದಲ್ಲಿ ಸಂಚರಿಸಬಹುದು ಎಂಬ ಅಂಶವನ್ನು ನಮೂದು ಮಾಡಿದೆ. 

ಸದ್ಯದ ಮಟ್ಟಿಗೆ ಹೊಸಪೇಟೆ- ಕೊಟ್ಟೂರು ರೈಲು ಮಾರ್ಗದ ಓಡಾಟ ಆರಂಭಗೊಳ್ಳದಿದ್ದರೂ ದಾವಣಗೆರೆ- ಹೊಸಪೇಟೆ ನಡುವಿನ ರೈಲು ಮಾರ್ಗ ಕೆಲವೇ ದಿನಗಳಲ್ಲಿ ಆರಂಭಗೊಳ್ಳುವುದು ಈ ಭಾಗದ ಜನರಲ್ಲಿ ಒಳ್ಳೆಯ ಸುದ್ದಿಯಾಗಿದೆ.

ಈ ಬಗ್ಗೆ ಮಾತನಾಡಿದ ಕೊಟ್ಟೂರು ಪಟ್ಟಣದ ನಿವಾಸಿ ಪಿ. ಶ್ರೀಧರಶೆಟ್ಟಿ ಅವರು, ಸಿಆರ್‌ಎಸ್ ತಂಡ ಸಂಚಾರಕ್ಕೆ ಯೋಗ್ಯವಾಗಿರುವುದನ್ನು ವರದಿ ಮೂಲಕ ಸ್ಪಷ್ಟಪಡಿಸಿರುವುದು ವ್ಯಕ್ತವಾಗಿದ್ದು, ದಾವಣಗೆರೆ ಹೊಸಪೇಟೆ ರೈಲು ಓಡಾಟ ಆರಂಭಗೊಳ್ಳುವುದು ಉತ್ತಮ ಬೆಳವಣಿಗೆಯಾಗಿದೆ. ಅದೇ ರೀತಿಯಾಗಿ ಕೊಟ್ಟೂರು- ಹೊಸಪೇಟೆ ಪ್ರಯಾಣಿಕರ ರೈಲು ಮಾರ್ಗ ಶೀಘ್ರವೇ ಆರಂಭಗೊಳ್ಳುವಂತಾಗಬೇಕು ಎಂದು ಹೇಳಿದ್ದಾರೆ. 
 

click me!