ಚಿತ್ರದುರ್ಗ: ಸ್ವಿಮ್ಮಿಂಗ್ ಫೂಲ್ ಇಂದು-ನಾಳೆ ಓಪನ್‌ ಮಾಡ್ತೀವಿ ಅಂತ ಮಕ್ಕಳಿಗೆ ಫೂಲ್

By Suvarna News  |  First Published May 6, 2022, 8:31 PM IST

* ಈಜುಕೊಳ ಓಪನ್ ಮಾಡೋದಕ್ಕೆ ಅಧಿಕಾರಿಗಳು ಮೀನಾಮೇಷ 
* ಇಂದು ನಾಳೆ ಓಪನ್‌ ಮಾಡ್ತೀವಿ ಅಂತ ಹೇಳ್ತಿರೋದಕ್ಕೆ ದಿನೇ ದಿನೇ ಮಕ್ಕಳು ಬಂದು ವಾಪಾಸ್ 
* ಬೇಸಿಗೆ ರಜೆ ಅರ್ಧ ಮುಗಿಯುವ ಹಂತಕ್ಕೆ ಬಂದ್ರು ಓಪನ್ ಆಗದ ಚಿತ್ರದುರ್ಗದ ಈಜುಕೊಳ 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಮೇ.06): ಬೇಸಿಗೆ ಕಾಲದಲ್ಲಿ ಮಕ್ಕಳು ರಜೆ ಹಿನ್ನೆಲೆ ಸ್ವಿಮ್ಮಿಂಗ್ ಫೂಲ್ ಬಂದು ಈಜು ಕಲಿಯಬೇಕು ಅಂತ ಸರ್ಕಾರ ಯೋಜನೆ ರೂಪಿಸಿದೆ‌. ಆದ್ರೆ ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎಬಂತಾಗಿದೆ ಕೋಟೆನಾಡಿನಲ್ಲಿರುವ ಈಜುಕೊಳದ ಪರಿಸ್ಥಿತಿ. ಅಷ್ಟಕ್ಕೂ ಅಲ್ಲಾಗ್ತಿರೋ ಸಮಸ್ಯೆ ಆದ್ರು ಏನು ಅಂತೀರಾ ಈ ಸ್ಟೋರಿ ನೋಡಿ......,

ಬೇಸಿಗೆ ರಜೆ ಬಂತು ಅಂದ್ರೆ ಸಾಕು ಎಲ್ಲಾ‌ ಮಕ್ಕಳು ಸರ್ಕಾರಿ ಸ್ವಿಮ್ಮಿಂಗ್ ಫೂಲ್ ಗೆ ಹೋಗಿ ಪರ್ಫೆಕ್ಟ್ ಆಗಿ ಈಜು ಕಲಿಯಬೇಕು ಅಂತ ಆಸೆ ಪಡ್ತಾರೆ.‌ ಆದ್ರೆ ಈಗಾಗಲೇ ಬೇಸಿಗೆ ರಜೆ ಅರ್ಧ ಮುಗಿಯುವ ಹಂತಕ್ಕೆ ಬಂದ್ರು ಸಹ ಕೋಟೆನಾಡು ಚಿತ್ರದುರ್ಗ ನಗರದಲ್ಲಿರೋ ಈಜುಕೊಳ ಮಾತ್ರ ಓಪನ್ ಮಾಡೋದಕ್ಕೆ ಅಧಿಕಾರಿಗಳು ಮೀನಾಮೇಷ ಏಳಿಸ್ತಿದ್ದಾರೆ. ಇತ್ತ ಖಾಸಗಿ ಸ್ವಿಮ್ಮಿಂಗ್ ಫೂಲ್ ಗಳಿಗೆ ತೆರಳಿ ಈಜು ಕಲಿಯೋಣ ಅಂದ್ರೆ ಸಿಕ್ಕಾಪಟ್ಟೆ ಶುಲ್ಕ ಕೇಳ್ತಾರೆ. ಅದಕ್ಕಾಗಿಯೇ ಸರ್ಕಾರಿ ಈಜುಕೊಳದತ್ತ‌ ಮಕ್ಕಳು ಹೆಚ್ಚು ಧಾವಿಸ್ತಾರೆ. ಆದ್ರೆ ನಮ್ಮ ನಗರದಲ್ಲಿ ಈಜುಕೊಳ ಇಂದು ನಾಳೆ ಓಪನ್‌ ಮಾಡ್ತೀವಿ ಅಂತ ಹೇಳ್ತಿರೋದಕ್ಕೆ ದಿನೇ ದಿನೇ ಮಕ್ಕಳು ಬಂದು ವಾಪಾಸ್ ತೆರಳ್ತಿದ್ದಾರೆ. ಈಗ ಓಪನ್ ಮಾಡಿದ್ರು ಅವರು, ಫುಲ್ ಫೀಸ್ ಕಟ್ಟಿಸಿಕೊಳ್ತಾರೆ ನಾವು ಸರಿಯಾಗಿ ಕಲಿಯೋದಕ್ಕೂ ಆಗಲ್ಲ ಇನ್ನೇನು‌ ಕೆಲವೇ ದಿನಗಳಲ್ಲಿ ಶಾಲಾ‌-ಕಾಲೇಜುಗಳು ಓಪನ್ ಆಗ್ತಾವೆ ತುಂಬಾ ಬೇಸರ ಆಗ್ತಿದೆ ಅಂತಾರೆ ವಿಧ್ಯಾರ್ಥಿಗಳು.

Latest Videos

undefined

Chitradurga Lamb's Birthday: ಸಾಕಿದ ಕುರಿಯ ಹುಟ್ಟುಹಬ್ಬ ಆಚರಿಸಿದ ರೈತ!

ಇನ್ನೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯನ್ನೇ ವಿಚಾರಿಸಿದ್ರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ವೀರವನಿತೆ ಒಳಾಂಗಣ ಈಜುಕೊಳವನ್ನು ಬಂದ್ ಮಾಡಲಾಗಿತ್ತು. ಇಲ್ಲಿಗೆ ಬರುವ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದು ಜಿಲ್ಲಾಧಿಕಾರಿಗಳ‌ ಸೂಚನೆ ಮೇರೆಗೆ ಓಪನ್ ಮಾಡೋದಕ್ಕೆ ತಡವಾಯಿತು. ಆದ್ರೆ ನಾಳೆಯಿಂದ ಬ್ಯಾಚ್ ವೈಸ್ ಹಂತ ಹಂತವಾಗಿ ಬೆಳಗ್ಗೆ ಮತ್ತು ಸಂಜೆ ತೆರೆಯಲು ಮೇಲಾಧಿಕಾರಿಗಳು ಸೂಚನೆ ನೀಡಿದ್ದು ಅದರಂತೆ ತೆರೆಯಲಾಗುವುದು ಎಂದು ತಿಳಿಸಿದರು.

ಒಟ್ಟಾರೆಯಾಗಿ ಬೇಸಿಗೆಯಲ್ಲಿ ಬಿಸಿಲಿನಿ ತಾಪವನ್ನು ತಾಣಲಾರದೆ ಮಕ್ಕಳು ಈಜುಕೊಳಗಳತ್ತ ಮೊರೆ ಹೋಗ್ತಾರೆ. ಅದ್ರಲ್ಲೂ ರಜೆ ವೇಳೆಯಲ್ಲಿ ಈಜು ಕಲಿಯಲು ಆಸಕ್ತರಾಗುತ್ತಾರೆ. ಆದ್ರೆ ಅಧಿಕಾರಿಗಳೇ ಅವರ ಆಸೆಗೆ ತಣ್ಣೀರೆರಚದೇ ಕೂಡಲೇ ಈಜುಕೊಳ ಓಪನ್ ಮಾಡಲು ಎಂಬುದು ನಮ್ಮ ಬಯಕೆ.....,

click me!