ಆನಂದಸಿಂಗ್ ಟೆಂಪಲ್ ರನ್, 7 ದೇವರಿಗೆ ತಲಾ 9 ಕೆಜಿ ಬೆಳ್ಳಿ..!

By Suvarna News  |  First Published Dec 9, 2019, 4:33 PM IST

ಹೊಸಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಈಗ ಟೆಂಪಲ್ ರನ್ ಆರಂಭಿಸಿದ್ದಾರೆ. 7 ದೇವರಿಗೆ ತಲಾ 9 ಕೆಜಿ ಬೆಳ್ಳಿ ನೀಡುವ ಮೂಲಕ ಆನಂದಸಿಂಗ್ ಹರಕೆ ತೀರಿಸಿದ್ದಾರೆ.


ಹೊಸಪೇಟೆ(ಡಿ.09): ಉಪಚುನಾವಣೆಯಲ್ಲಿ ಗೆಲುವು ಹಿನ್ನಲೆಯಲ್ಲಿ ಆನಂದಸಿಂಗ್ ಟೆಂಪಲ್ ರನ್ ನಡೆಸಿದ್ದಾರೆ. ಫಲಿತಾಂಶದ ಬಳಿಕ ಹೊಸಪೇಟೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.

ಡಿಸೆಂಬರ್ 9ರಂದು 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಆನಂದ್‌ ಸಿಂಗ್ ಗೆಲುವಿನ ನಗೆ ಬೀರಿದ್ದಾರೆ. ವಿವಿಧ ದೇವರಿಗೆ ಹರಕೆ ತಿರಿಸಿದ ಆನಂದಸಿಂಗ್ 7 ದೇವರಿಗೆ ತಲಾ 9 ಕೆಜಿ ಬೆಳ್ಳಿ ನೀಡಿದ್ದಾರೆ.

Tap to resize

Latest Videos

ಸೋಲಿನ ಹೊಣೆಹೊತ್ತು ಸಿದ್ದು ರಾಜೀನಾಮೆ, ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ

ವಿವಿಧ ಕೇರಿಗಳ ಹೆಣ್ಣು ದೇವರಿಗೆ ಬೆಳ್ಳಿ ನೀಡಿದ ಆನಂದಸಿಂಗ್ ಪಲ್ಲಕ್ಕಿ ಮಾಡಲು 63 ಕೆಜಿ ಬೆಳ್ಳಿ ನೀಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಹರಕೆ ಹೊತ್ತಿದ್ದ ಆನಂದಸಿಂಗ್ ಚುನಾವಣೆಯಲ್ಲಿ ಗೆದ್ದರೆ ಬೆಳ್ಳಿ ನೀಡುವುದಾಗಿ ಕೆಳಿಕೊಂಡಿದ್ದರು.

ಇದೀಗ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹರಕೆಯನ್ನೂ ತೀರಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ಹಿನ್ನಲೆಯಲ್ಲಿ ಹರಕೆ ತೀರಿಸಿದ ಆನಂದಸಿಂಗ್ ಪ್ರತಿಯೊಂದು ದೇವಸ್ಥಾನಕ್ಕೂ ನಡೆದುಕೊಂಡು ಹೋಗಿಯೇ ಬೆಳ್ಳಿ ನೀಡಿದ್ದಾರೆ. ಮೆರವಣಿಗೆ ಮೂಲಕ ತೆರಳಿ ಆನಂದಸಿಂಗ್ ಹರಕೆ ತೀರಿಸಿದ್ದಾರೆ.

ಇದು ನನ್ನ ಕೊನೆ ಚುನಾವಣೆ, ಇನ್ಮುಂದೆ ಸ್ಪರ್ಧಿಸಲ್ಲ: ಗೆದ್ದ ಶಾಸಕನ ಅಚ್ಚರಿಯ ಹೇಳಿಕೆ!

click me!