ಜೆಡಿಎಸ್ ನಲ್ಲಿದ್ದುಕೊಂಡೇ ಕಾಂಗ್ರೆಸ್ ಅಭ್ಯರ್ಥಿಗೆ ಕುಟುಂಬ ಬೆಂಬಲ ನೀಡಿದ್ದು ಆದರೆಇದೀಗ ಪ್ರಕಟವಾದ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಮಾತ್ರ ಈಗ ಶಾಸಕರು ನಿರಾಕರಿಸಿದ್ದಾರೆ.
ಹುಣಸೂರು [ಡಿ.09]: ರಾಜ್ಯದಲ್ಲಿ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 15ರಲ್ಲಿ 12 ಸ್ಥಾನಗಳಲ್ಲಿ ಗೆಲ್ಲುವಲ್ಲಿ ಬಿಜೆಪಿ ಸಫಲವಾಗಿದೆ. ಕೇವಲ 2 ಸ್ಥಾನಗಳು ಕಾಂಗ್ರೆಸ್ ಪಾಲಾದರೆ ಜೆಡಿಎಸ್ ಶೂನ್ಯ ಫಲಿತಾಂಶ ದಾಖಲಿಸಿದೆ.
ಇತ್ತ ಹುಣಸೂರು ಕ್ಷೇತ್ರದಲ್ಲಿ ಅನರ್ಹರಾಗಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಚ್. ವಿಶ್ವನಾಥ್ ಸೋಲುಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ ಮಂಜುನಾಥ್ ಅಭೂತಪೂರ್ವ ಜಯ ಗಳಿಸಿದ್ದಾರೆ. 39,727 ಮತಗಳ ಅಂತರದಲ್ಲಿ ಎಚ್ ವಿಶ್ವನಾಥ್ ವಿರುದ್ಧ ಗೆದ್ದಿದ್ದಾರೆ.
undefined
ನಿಜವಾಯ್ತು ನೀಲಿ ಪುಸ್ತಕದ ರಾಜಕೀಯ ಭವಿಷ್ಯ: BSY ಸರ್ಕಾರಕ್ಕಿಲ್ಲ ಕಂಟಕ!...
ಇತ್ತ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ರಾಜ್ಯದಲ್ಲಿ ಬಂದ ಫಲಿತಾಂಶದ ಬಗ್ಗೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಫಲಿತಾಂಶದ ಬಗ್ಗೆ ತುಟಿಬಿಚ್ಚದ ಜಿಟಿಡಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಹಿಂದೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಯಾಗಿದ್ದು, ಆದರೆ ಉಪಚುನಾವಣೆಯಲ್ಲಿ ಜೆಡಿಎಸ್ ನಲ್ಲಿದ್ದುಕೊಂಡೇ ಕಾಂಗ್ರೆಸಿಗೆ ಅವರ ಕುಟುಂಬ ಬೆಂಬಲ ನೀಡಿತ್ತು. ಆದರೆ ಇದೀಗ ಫಲಿತಾಂಶದ ಬಗ್ಗೆ ರಾಜಕೀಯ ಹಾಗೂ ವೈಯಕ್ತಿಕ ನಿರ್ಧಾರಗಳ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಹುಣಸೂರು ಕ್ಷೇತ್ರದಲ್ಲಿ ಟಿಕೆಟ್ ವಿಚಾರದಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಬಳಿಕ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೀಮಶೇಖರ್ ಸ್ಪರ್ಧೆ ಮಾಡಿದ್ದರು.