ಚಿಕ್ಕಬಳ್ಳಾಪುರ (ಜು.28): ರಾಷ್ಟ್ರದಲ್ಲಿಯೆ ಮೊದಲ ಬಾರಿಗೆ ಬಿತ್ತನೆ ಆಲೂಗಡ್ಡೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರಾಜ್ಯ ವಿಯಟ್ನಾಂ ದೇಶದಲ್ಲಿ ಅಭಿವೃದ್ದಿಗೊಳಿಸಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಚಿಗುರು ಕಾಂಡ ಸಸ್ಯೋತ್ಪಾದನಾ ತಾಂತ್ರಿಕತೆಯನ್ನು ಅನುಷ್ಟಾನಗೊಳಿಸಿ ರೋಗ ರಹಿತ ಹಾಗೂ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ಉತ್ಪಾದಿಸುತ್ತಿದೆ ಎಂದು ತೋಟಗಾರಿಕಾ ವಿವಿಯ ಪ್ರಾದೇಶಿಕ ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ವಿಷ್ಣುವರ್ಧನ ತಿಳಿಸಿದರು.
ನಗರದ ನಂದಿ ಕ್ರಾಸ್‌ನಲ್ಲಿರುವ ತೋಟಗಾರಿಕಾ ಉಪ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ತೋಟಗಾರಿಕೆ ಸಹಾಯಕ ನಿರ್ದೇಶಕರಿಗೆ ಆಲೂಗೆಡ್ಡೆ ಚಿಗುರು ಕಾಂಡ ಸಸ್ಯೋತ್ಪಾದನಾ ತಾಂತ್ರಿಕತೆ ಕುರಿತ ತರಭೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
undefined
ಸ್ವಾವಲಂಬನೆ ಸಾಧಿಸುವ ಉದ್ದೇಶ
ಇಡೀ ದೇಶವೇ ಬಿತ್ತನೆ ಆಲೂಗಡ್ಡೆಗೆ ಪಂಜಾಬ್ ರಾಜ್ಯವನ್ನು ಅವಲಂಬಿಸಿತ್ತು. ಅಲ್ಲಿ ರೋಗ ರಹಿತ ಆಲೂಗಡ್ಡೆ ಬಿತ್ತನೆ ಬೀಜ ಸಿಗುತ್ತಿತ್ತು. ಆದರೆ ಇದೀಗ ಅಲ್ಲಿಯೂ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ರಾಜ್ಯದಲ್ಲಿ ಬಿತ್ತನೆ ಆಲೂಗೆಡ್ಡೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು, ರೋಗ ರಹಿತ ಬಿತ್ತನೆ ಬೀಜ ಪೂರೈಸಬೇಕೆಂಬ ಉದ್ದೇಶದಿಂದ ವಿಯಟ್ನಾಂ ತಾಂತ್ರಿಕತೆಯನ್ನು ಬಳಸಿಕೊಂಡು ಹಾಸನ ಜಿಲ್ಲೆಯಲ್ಲಿ ಉತ್ಪಾದನೆ ಆರಂಭಗೊಂಡಿದೆ ಎಂದರು.
ಆಲೂಗಡ್ಡೆಗಳನ್ನು ಸುದೀರ್ಘ ಕಾಲ ಹಾಳಾಗದಂತೆ ಕಾಪಾಡುವುದು ಹೇಗೆ?
ಸಸ್ಯರೋಗ ತಜ್ಞೆ ಡಾ.ಅಮೃತಾ ಎಸ್.ಭಟ್ ಮಾತನಾಡಿದರು. ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ತೋಟಗಾರಿಕಾ ಸಹಾಯಕ ನಿರ್ದೇಶಕರು, ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಆಲೂಗಡ್ಡೆ ಬಿತ್ತನೆ ಪ್ರದೇಶ ಕುಸಿತ
ಆಲೂಗೆಡ್ಡೆ ಬಿತ್ತನೆ ಬೀಜದ ಸಮಸ್ಯೆಯಿಂದ ರಾಜ್ಯದಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಆಲೂಗಡ್ಡೆ ಈಗ 25 ರಿಂದ 30 ಹೆಕ್ಟೇರ್‌ಗೆ ಕುಸಿದಿದೆ. ಹಾಗಾಗಿ ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಸೇರಿದಂತೆ ರಾಜ್ಯದ ಆಲೂಗಡ್ಡೆ ಬೆಳೆಯುವ ರೈತರಿಗೆ ಸಹಕಾರಿಯಾಗಲು ಬಿತ್ತನೆ ಆಲೂಗೆಡ್ಡೆ ಉತ್ಪಾದನಾ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿ ರೈತರಿಗೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆಯೆಂದು ಡಾ.ವಿಷ್ಣುವರ್ಧನ್ ತಿಳಿಸಿದರು.