ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನನ್ನು ತಡೆದು ಪ್ರಶ್ನಿಸಿದ ಪೊಲೀಸರು| ಕೊರೋನಾ ಪಾಸಿಟಿವ್ ಬಂದಿರುವ ವರದಿ ಪೊಲೀಸರಿಗೆ ನೀಡಿದ ಕೋವಿಡ್ ಸೋಂಕಿತ| ಈತನ ವರ್ತನೆಗೆ ಗಾಬರಿಯಾದ ಪೊಲೀಸರು|
ಶಿವಮೊಗ್ಗ(ಏ.26): ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ರಸ್ತೆಗಿಳಿದು ಪೊಲೀಸರು ಹಾಗೂ ಜನರನ್ನು ಬೆಚ್ಚಿ ಬೀಳಿಸಿದ ಘಟನೆ ಭಾನುವಾರ ನಡೆದಿದೆ.
ನಗರದ ಅಮೀರ್ ಅಹಮದ್ ವೃತ್ತದಲ್ಲಿ ಪೊಲೀಸರು ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನನ್ನು ತಡೆದು ಪ್ರಶ್ನಿಸಿದ್ದಾರೆ. ಆಗ, ಆತ ತಾನು ಕೊರೋನಾ ಸೋಂಕಿತನೆಂದು ಹೇಳಿದ್ದು, ಸುಳ್ಳು ಹೇಳುತ್ತಿರಬಹುದೆಂದು ದಾಖಲೆಗಳನ್ನು ಕೇಳಿದ್ದಾರೆ. ಆಗ ಕೊರೋನಾ ಪಾಸಿಟಿವ್ ಬಂದಿರುವ ವರದಿಯನ್ನು ನೀಡಿದ್ದು, ಪೊಲೀಸರು ಸೇರಿದಂತೆ ಸ್ಥಳದಲ್ಲಿದ್ದವರೆಲ್ಲ ಗಾಬರಿಗೊಂಡಿದ್ದಾರೆ.
undefined
ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ
ಪಾಸಿಟಿವ್ ಇದ್ದರೂ ಸಾರ್ವಜನಿಕವಾಗಿ ಏಕೆ ಓಡಾಡುತ್ತಿರುವ ಬಗ್ಗೆ ಪೊಲೀಸರು ಪ್ರಶ್ನಿಸಿದ್ದು, ಸೋಂಕಿತನು ಆಸ್ಪತ್ರೆಯಿಂದ ಬರುತ್ತಿದ್ದೇನೆ ಎಂದಿದ್ದಾನೆ. ಬಳಿಕ ರಸ್ತೆಯಲ್ಲಿ ಈ ರೀತಿ ಓಡಾಡಬೇಡ ಎಂದು ತಿಳಿಹೇಳಿ ಆತನನ್ನು ಮನೆಗೆ ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ.