ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅರಕೇರಾ(ಕೆ) ಬಳಿ ನಿನ್ನೆ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ ಒಂದೇ ಕುಟುಂಬದ ಆರು ಜನ ದಾರುಣವಾಗಿ ಸಾನ್ನಪ್ಪಿದ್ದಾರೆ.
ಯಾದಗಿರಿ: ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅರಕೇರಾ(ಕೆ) ಬಳಿ ನಿನ್ನೆ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ ಒಂದೇ ಕುಟುಂಬದ ಆರು ಜನ ದಾರುಣವಾಗಿ ಸಾನ್ನಪ್ಪಿದ್ದಾರೆ. ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂರು ಜನ ಹಾಗೂ ಆಸ್ಪತ್ರೆಯಲ್ಲಿ ಮೂರು ಜನ ಸಾವಿಗೀಡಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅರಕೇರಾ(ಕೆ) ಬಳಿ ನಿನ್ನೆ ತಡರಾತ್ರಿ ಈ ದುರಂತ ಸಂಭವಿಸಿದೆ. 1 ವರ್ಷದ ಹೆಣ್ಣುಮಗು ಸೇರಿ 6 ಜನ ಮೃತಪಟ್ಟಿದ್ದಾರೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರು ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಹಟ್ಟಿಯವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ತೆಲಂಗಾಣದ ಕೊಡಂಗಲ್ ಸಮೀಪದ ದರ್ಗಾಕ್ಕೆ ತೆರಳಿದ್ದರು. ದರ್ಗಾದಲ್ಲಿ ಜವಳ ಕಾರ್ಯಕ್ರಮ ಹಾಗೂ ಪೂಜೆ ಸಲ್ಲಿಸಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುತ್ತಿರುವಾಗ ಈ ದುರಂತ ಸಂಭವಿಸಿದೆ.
undefined
ಘಟನೆಯ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ಬಸವೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಾರಿ ಡಿಕ್ಕಿಯಾಗಿ ಬಾಲಕ ಸಾವು: ರೊಚ್ಚಿಗೆದ್ದ ಜನರಿಂದ ಲಾರಿ ಮೇಲೆ ಕಲ್ಲೆಸೆತ, ಚಾಲಕನಿಗೆ ಥಳಿತ
ಘಟನೆ ಬಗ್ಗೆ ಎಸ್ಪಿ ಪ್ರತಿಕ್ರಿಯೆ
ಕಾರು ಮತ್ತು ಗೂಡ್ಸ್ ವಾಹನದ ಮದ್ಯೆ ಅಪಘಾತ ನಡೆದಿದೆ. ಸ್ಯಾಂಟ್ರೋ ಕಾರಿನಲ್ಲಿ ಒಂದೇ ಕುಟುಂಬದವರು ಇದ್ದರೂ, ಎಲ್ಲರೂ ಜವಳ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ದುರಂತದಲ್ಲಿ ಆರು ಜನ ಮೃತಪಟ್ಟಿದ್ದು, ಒಂದು ಮಗು ಕೂಡ ಸೇರಿದೆ. ಮಹ್ಮದ್ ವಾಜೀದ್ ಹುಸೇನ್ ಅವರ ಆರು ತಿಂಗಳ ಮಗಳು ಉಮೇಜಾಳ ಜವಳ ಇತ್ತು. ಇದಕ್ಕಾಗಿ ವಾಜೀದ್ ಅವರು ತಂದೆ, ತಾಯಿ, ಪತ್ನಿ ಅಳಿಯ ಹಾಗೂ ಇಬ್ಬರು ಮಕ್ಕಳ ಜೊತೆ ಹೋಗಿದ್ದರು. ಕಾರಿನಲ್ಲಿ ಏಳು ಜನರು ತೆರಳಿದ್ದರು. ಅದರಲ್ಲಿ ಆರು ಜನ ಮೃತ ಪಟ್ಟಿದ್ದಾರೆ. ಮೂರು ವರ್ಷದ ಮಗು ಫಾಜೀಲ್ ಬದುಕುಳಿದಿದೆ ಫಾಜೀಲ್ ಗೆ ಕಲಬುರ್ಗಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ವೇದಮೂರ್ತಿ ಘಟನೆ ಬಗ್ಗೆ ಮಾಹಿತಿ ನೀಡಿದರು.
ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ ಸಾವು, ಸಿದ್ದರಾಮಯ್ಯ ಸಂತಾಪ