ಸರ್ಕಾರದ ರಕ್ಷಣೆಗೆ ಸ್ನೇಹಿತರು ಬರ್ತಾರೆಂಬ ವಿಶ್ವಾಸವಿದೆ: ಮಾಧುಸ್ವಾಮಿ

By Kannadaprabha News  |  First Published Nov 20, 2019, 1:36 PM IST

ಉಪ ಚುನಾವಣೆಯಲ್ಲಿ ಗೆದ್ದು ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ, ಅದು ಸಾಧ್ಯವಾಗದಿದ್ದರೆ ನಮ್ಮ ರಕ್ಷಣೆಗೆ ಯಾರಾದರೂ ಸ್ನೇಹಿತರು ಬಂದೇ ಬರುತ್ತಾರೆಂಬ ವಿಶ್ವಾಸವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಗಳವಾರ ಹೇಳಿದ್ದಾರೆ.


ಮಂಡ್ಯ(ನ.20): ಉಪ ಚುನಾವಣೆಯಲ್ಲಿ ಗೆದ್ದು ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ, ಅದು ಸಾಧ್ಯವಾಗದಿದ್ದರೆ ನಮ್ಮ ರಕ್ಷಣೆಗೆ ಯಾರಾದರೂ ಸ್ನೇಹಿತರು ಬಂದೇ ಬರುತ್ತಾರೆಂಬ ವಿಶ್ವಾಸವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಗಳವಾರ ಹೇಳಿದ್ದಾರೆ.

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ರಾಜ್ಯದಲ್ಲಿ ಮೂರು ವರ್ಷದ ಅವಧಿಗೂ ಬಿಜೆಪಿ ಸರ್ಕಾರ ಇದ್ದರೆ ಒಳ್ಳೆಯದು. ಇದರಿಂದ ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂಬ ವಿಶ್ವಾಸ ಬಹಳ ಮಂದಿ ಶಾಸಕರಲ್ಲಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಉಳಿಯಬೇಕು ಎಂಬುದು ಹೆಚ್ಚು ಶಾಸಕರ ಅಭಿಪ್ರಾಯ. ಆದ್ದರಿಂದ ಯಾರಾದರೂ ಪ್ರಸ್ತುತದ ಸರ್ಕಾರದ ಪರ ನಿಲ್ಲುತ್ತಾರೆಂಬ ಹೇಳಿಕೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಜೆಡಿಎಸ್‌ ಪಕ್ಷ ತಮ್ಮನ್ನು ಬೆಂಬಲಿಸುತ್ತಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ

Tap to resize

Latest Videos

undefined

ಕೆ.ಆರ್. ಪೇಟೆಯಲ್ಲಿ ಸುಮಲತಾ ಬೆಂಬಲ ಯಾರಿಗೆ? ಕೊನೆಗೂ ಬಂತು ಸುಳಿವು ಹೊರಗೆ

ಬಣ್ಣ ಕಟ್ಟುವುದು ಬೇಡ:

ಕೆ.ಆರ್‌.ಪೇಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನಡೆದ ಘಟನೆಗೆ ಅಲ್ಲಿನ ಆಡಳಿತ ವ್ಯವಸ್ಥೆ ಕಾರಣ. ಮೂರು ಪಕ್ಷದವರಿಗೆ 12 ಗಂಟೆ ಸಮಯ ನಿಗದಿ ಮಾಡಿ, ಎಲ್ಲರೂ ಒಂದೇ ಕಡೆ ಜಮಾವಣೆಯಾಗುವಂತೆ ಮಾಡಿದ್ದೇ ತಪ್ಪು. ಇಂತಹ ಸನ್ನಿವೇಶಗಳು ಸೃಷ್ಟಿಯಾದಾಗ ಇಂತಹ ಸಣ್ಣಪುಟ್ಟಗಲಾಟೆಗಳು ಆಗುವುದು ಸಹಜ. ಇಂತಹ ಘಟನೆಗಳಿಗೆ ನಾನಾ ಬಣ್ಣಕಟ್ಟುವುದು ತಪ್ಪು ಎಂದರು. ಕೆ.ಆರ್‌.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವಿಗೆ ನಾನು ಪ್ರಯತ್ನ ಮಾಡುತ್ತೇನೆ. ಕೆ.ಆರ್‌.ಪೇಟೆಗೆ ನಾನು ಹೊಸಬ. ನಾನೇ ರಸ್ತೆಗಳನ್ನು ಹುಡುಕಿಕೊಂಡು ಹೋಗುವ ಸ್ಥಿತಿ ಇದೆ. ಹೀಗಿರುವಾಗ ಬಿಜೆಪಿ ಅಭ್ಯರ್ಥಿ ಎಷ್ಟುಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಹೇಳಲಿ ಎಂದು ಪ್ರಶ್ನೆ ಮಾಡಿದರು.

10 ರಿಂದ 12 ಸ್ಥಾನ ಗೆಲುವು:

ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ 10 ರಿಂದ 12 ಕ್ಷೇತ್ರಗಳಲ್ಲಿ ಜಯಗಳಿಸಲಿದೆ, ನಾನು ರಾಜ್ಯದ ಕಾನೂನು ಸಚಿವನಾಗಿ ಉಪ ಸಮರದಲ್ಲಿ ಸ್ಪರ್ಧಿಸಿರುವ ಮಾಜಿ ಶಾಸಕರನ್ನು ಅನರ್ಹ ಶಾಸಕರು ಎಂದು ನಾನು ಕರೆಯುವುದಿಲ್ಲ. ಅವರು ಸ್ಪರ್ಧೆ ಮಾಡಲು ನ್ಯಾಯಾಲಯ ಒಪ್ಪಿರುವುದರಿಂದ ಅನರ್ಹರು ಎಂದು ಕರೆಯಲು ಬರುವುದಿಲ್ಲ, ಅವರಿಗೆ ಸರ್ಕಾರಿ ಸೌವಲತ್ತುಗಳನ್ನು ನೀಡಬಾರದು ಎಂದಷ್ಟೇ ನ್ಯಾಯಾಲಯ ಹೇಳಿದೆ. ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೇಳಿದ್ದರೆ ಮಾತ್ರ ಅವರು ಅನರ್ಹರಾಗುತ್ತಿದ್ದರು ಎಂದು ತಿಳಿಸಿದರು.

ಮೆಡಿಕಲ್ ಕಾಲೇಜ್‌ ಬಗ್ಗೆ ಗೊತ್ತಿಲ್ಲ:

ಕೆ.ಆರ್‌.ಪೇಟೆಯಲ್ಲಿ ನೂತನ ಮೆಡಿಕಲ್ ಸ್ಥಾಪನೆ ವಿಚಾರ ನನಗೆ ಗೊತ್ತಿಲ್ಲ, ನೀವು ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯುಡಿಯೂರಪ್ಪ ಅವರನ್ನೇ ಕೇಳಬೇಕು. ಒಟ್ಟಾರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ. ಅದರಂತೆ ಚಿಕ್ಕಮಗಳೂರು ಸೇರಿದಂತೆ ಮೂರು ಹೊಸ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.

ಸುಮಲತಾ ಬೆಂಬಲ:

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರಿಗೆ ಸಂಸದೆ ಸುಮಲತಾ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಬಿಜೆಪಿ ಪಕ್ಷ ಅವರು ಸಂಸದರಾಗಲು ಬೆಂಬಲ ನೀಡಿದೆ. ಅದರಂತೆ ಅವರು ಕೆ.ಆರ್‌.ಪೇಟೆಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸದ್ಯಕ್ಕೆ ಕ್ರಮವಿಲ್ಲ:

ಹೊಸಕೋಟೆ ಕ್ಷೇತ್ರದ ಶರತ್‌ ಬಚ್ಚೇಗೌಡ ಸೇರಿದಂತೆ ರಾಜ್ಯದ ಉಪ ಚುನಾವಣೆಯಲ್ಲಿ ಪಕ್ಷದ ವಿರುದ್ದ ಸ್ಪರ್ಧೆ ಬಯಸಿರುವ ಬಿಜೆಪಿ ಮುಖಂಡರ ಮೇಲೆ ನ.21 ರವರೆಗೆ ಯಾವುದೇ ಕ್ರಮಜರುಗಿಸುವುದಿಲ್ಲ. ನಾಮ ಪತ್ರ ಹಿಂಪಡೆಯುಲು ನ.21 ರಂದು ಕಡೆಯ ದಿನ ಇದೆ. ಇದಾದ ಬಳಿಕ ಅವರುಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಅಂತಹ ನಾಯಕರುಗಳ ಮೇಲೆ ಪಕ್ಷ ಕ್ರಮಕೈಗೊಳ್ಳುತ್ತದೆ ಎಂದಿದ್ದಾರೆ.

ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ

click me!