PFI Ban: ಭಾವುಕರಾದ ಹೊನ್ನಾವರದ ಪರೇಶ್ ಮೇಸ್ತಾ ತಂದೆ ಕಮಲಾಕರ್

Published : Sep 28, 2022, 05:04 PM ISTUpdated : Sep 28, 2022, 05:07 PM IST
PFI Ban: ಭಾವುಕರಾದ ಹೊನ್ನಾವರದ ಪರೇಶ್ ಮೇಸ್ತಾ ತಂದೆ ಕಮಲಾಕರ್

ಸಾರಾಂಶ

ಕೋಮು ಗಲಭೆಯ ಬಳಿಕ ಹತ್ಯೆಯಾಗಿದ್ದ ಹೊನ್ನಾವರದ ಪರೇಶ್ ಮೇಸ್ತಾ ಅವರ ತಂದೆ ಪಿಎಫ್‌ಐ ಬ್ಯಾನ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಭಾವುಕರಾದರು.  

ಹೊನ್ನಾವರ: ಕೇಂದ್ರ ಸರಕಾರ ಪಿಎಫ್‌ಐ ಸಂಘಟನೆಯನ್ನು 5 ವರ್ಷಗಳ ಕಾಲ‌ ಬ್ಯಾನ್ ಮಾಡಿದ್ದಕ್ಕೆ 2017ರಲ್ಲಿ ಕೋಮು ಗಲಭೆಯ ನಂತರ ಹತ್ಯೆಗೀಡಾದ ಹೊನ್ನಾವರದ ಯುವಕ ಪರೇಶ್‌  ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ದೇಶ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಿಎಫ್ಐ ಬ್ಯಾನ್ (PFI Ban) ಆದ ಬಗ್ಗೆ ಮಾಧ್ಯಮಗಳು ಅವರನ್ನು ಮಾತನಾಡಿಸಿದಾಗ ಪ್ರತಿಕ್ರಿಯಿಸಿದ ಅವರು, ಒಂದು ಕ್ಷಣ ಭಾವುಕರಾದರು. ಉಗ್ರ ಸಂಘಟನೆಯಾಗಿರುವ ಪಿಎಫ್‌ಐ ಹಲವು ಹತ್ಯೆ ಪ್ರಕರಣದಲ್ಲಿ ಪಾತ್ರ ಹೊಂದಿದೆ.‌ ಪಿಎಫ್ಐ ಸಂಘಟನೆ ಇಲ್ಲಿಯವರೆಗೆ ಬೆಳೆಯಲು ಕಾಂಗ್ರೆಸ್ ಸರಕಾರವೇ (Congress Govt) ಕಾರಣ.‌ ಹಲವು ಹತ್ಯೆ ಪ್ರಕರಣಗಳಲ್ಲಿ ಪಿಎಫ್‌ಐ ಸಂಘಟನೆಯ ಕೈವಾಡವಿದೆ.‌

Paresh Mesta Murder Case: ಪ್ರಕರಣದ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ!

ನನ್ನ ಮಗ ಪರೇಶ್ ಮೇಸ್ತಾನ (Paresh Mestha) ಹತ್ಯೆಯಲ್ಲೂ ಪಿಎಫ್ಐಯವರ ಕೈವಾಡವಿರಬಹುದು ಎಂದು ನನಗೆ ಅನಿಸುತ್ತಿದೆ. ಆ ಸಂಘಟನೆಯನ್ನು ನಿಷೇಧ ಮಾಡದಿದ್ದರೆ ಬಹಳಷ್ಟು ಕಷ್ಟ ಪಡಬೇಕಾಗಿತ್ತು. ಯಾವುದೇ ಕಾರಣಕ್ಕೂ ಅವರನ್ನು ಬೆಳೆಯಲು ಬಿಡಬಾರದು. ಸಮಾಜದ ಜನರು ಶಾಂತಿಯಿಂದ (Peace) ಬಾಳಬೇಕಿದೆ. ಕೇಂದ್ರ ಸರಕಾರದ (Central Govt) ಈ ನಿರ್ಧಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪರೇಶ್ ಮೇಸ್ತಾನ ತಂದೆ ಕಮಲಾಕರ್ ಮೇಸ್ತ ಹೇಳಿದರು. 

2017ರ ಡಿಸೆಂಬರ್ 6ರಂದು ನಡೆದ ಕೋಮುಗಲಭೆಯ (Comunal clash) ನಂತರ ಕಮಲಾಕರ್ ಮೇಸ್ತ (Kamalakar Mestha) ಅವರ ಪುತ್ರ ಕೇವಲ 21ರ ಹರೆಯದ ತರುಣ ಪರೇಶ್ ಮೇಸ್ತಾ ನಾಪತ್ತೆಯಾಗಿದ್ದ. ಎರಡು ದಿನಗಳ ಬಳಿಕ ಡಿ.8ರಂದು ಹೊನ್ನಾವರದ (Honnavara) ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾ ಮೃತದೇಹ ಪತ್ತೆಯಾಗಿತ್ತು.‌ ಮೇಸ್ತಾ ಹತ್ಯೆಯಲ್ಲಿ ಅನ್ಯ ಕೋಮಿನ ಯುವಕರೇ ಆರೋಪಿಗಳಾಗಿದ್ದರು. ಈ ಘಟನೆ ನಡೆದ ನಂತರ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂಬ ಒತ್ತಾಯ ತೀವ್ರವಾಗಿ ಕೇಳಿ ಬಂದಿತ್ತು. ಕೊನೆಗೂ ಇದೀಗ ಕೇಂದ್ರ ಸರಕಾರ ಈ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿರೋದು ಜನರಲ್ಲಿ ಹರ್ಷ ತಂದಿದೆ.

ಪರೇಶ್ ಮೇಸ್ತ ಕುಟುಂಬಕ್ಕೆ ಉದ್ಯೋಗ: ಅಮಿತ್ ಶಾ ಭರವಸೆ

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ