ಶ್ವಾನ ‘ರಮ್ಯಾ’ ನಿಧನಕ್ಕೆ ಗದಗ ಪೊಲೀಸರ ಶೋಕ

By Web DeskFirst Published Feb 5, 2019, 3:38 PM IST
Highlights

ಪೊಲೀಸ್ ಇಲಾಖೆಯಲ್ಲಿ 11 ವರ್ಷಗಳ ಕಾಲ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದ ಶ್ವಾನ ರಮ್ಯಾ ಮೃತಪಟ್ಟಿದ್ದು, ಇಲ್ಲಿನ ಸಿಬ್ಬಂದಿಯಲ್ಲಿ ತೀವ್ರ ನೋವುಂಟು ಮಾಡಿದೆ. 

ಗದಗ :  ಗದಗ ಪೊಲೀಸ್ ಇಲಾಖೆಯಲ್ಲಿ ಹನ್ನೊಂದು ವರ್ಷ ಸೇವೆ ಸಲ್ಲಿಸಿದ್ದ ಹೆಣ್ಣು ಶ್ವಾನ ರಮ್ಯಾ  ಮೃತಪಟ್ಟಿದೆ. ದಕ್ಷ ಪೊಲೀಸ್ ಶ್ವಾನದ ಸಾವು ಇಲ್ಲಿನ ಸಿಬ್ಬಂದಿಗೆ ಅಪಾರ ನೋವನ್ನ ತಂದಿದೆ. 

ಎಷ್ಟೋ ಕ್ಲಿಷ್ಟಕರ ಸನ್ನಿವೇಶವನ್ನು ಬಗೆಹರಿಸಲು ಸಹಕಾರಿಯಾಗಿದ್ದ ಶ್ವಾನ ರಮ್ಯಾ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. 

ಕಾಮುಕನಿಂದ ಮಹಿಳೆ ಕಾಪಾಡಿ ನಿಷ್ಠೆ ತೋರಿದ ಬೀದಿನಾಯಿ

ಕೊಲೆ , ದರೋಡೆ, ಕಳ್ಳತನ ಸೇರಿದಂತೆ 120 ಪ್ರಕರಣಗಳನ್ನು ಬೇಧಿಸಲು ಸಹಕಾರಿಯಾದ ಈ ಶ್ವಾನ ಎಂದರೆ ಪೊಲೀಸರಿಗೆ ಬಲು ಪ್ರೀತಿ. ಇದರ ಅಗಲುವಿಕೆ ಇದೀಗ ಇಲ್ಲಿನ ಪೊಲೀಸ್ ಇಲಾಖೆ ಸಿಬ್ಬಂದಿಯಲ್ಲಿ ಅಪಾರ ದುಃಖ ಆವರಿಸುವಂತೆ ಮಾಡಿದೆ. 

ಅನಂತ ನಿಧನದ ನಡುವೆ ಮತ್ತೊಂದು ಶೋಕ, ಮರೆಯಾದ ಪತ್ತೆದಾರಿ

ಗದಗ್ ನ ಬೆಟಗೇರಿಯಲ್ಲಿರುವ ಪೊಲೀಸ್ ಇಲಾಖೆ ವಸತಿ ಗೃಹದ ಆವರಣದಲ್ಲಿ ಶ್ವಾನದ ಮೃತ ದೇಹವನ್ನು ಇರಿಸಿ ಗೌರವ ಸಲ್ಲಿಸಿ ಬಳಿಕ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

"

click me!