ಕಳೆದುಕೊಂಡ 45 ಸಾವಿರ ಹಣವನ್ನು ವಾಪಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

By Gowthami K  |  First Published Oct 2, 2022, 9:22 PM IST

ರಸ್ತೆಯಲ್ಲಿ ಕಳೆದುಕೊಂಡ ಹಣವನ್ನು ಮಾಲೀಕನಿಗೆ ವಾಪಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ರಸ್ತೆಯಲ್ಲಿ ಸಿಕ್ಕ 45 ಸಾವಿರ ಹಣ ಹಿಂತಿರುಗಿಸಿದ ಶಿವಕುಮಾರ್. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಘಟನೆ.


ತುಮಕೂರು (ಅ.2): ದಾರಿಯಲ್ಲಿ ಯಾವುದಾದ್ರೂ ಮೌಲ್ಯಯುತವಾದ ವಸ್ತು, ಹಣ ಸಿಕ್ರೆ ಅದು ನಮ್ಮ ಪಾಲಿನ ಅದೃಷ್ಟ ಅಂದುಕೊಳ್ತೀವಿ.‌ ನಾವು ಮಾಡಿದ ಪುಣ್ಯದಿಂದಲ್ಲೇ ಈ ಅದೃಷ್ಟ ಬಂದಿದೆ ಅಂತ  ಸಿಕ್ಕ ಹಣವನ್ನು ಎಂಜಾಯ್ ಮಾಡ್ತೀವಿ, ಆದರೆ ಹಣ ಕಳೆದುಕೊಂಡವರ ಪರಿಸ್ಥಿತಿ ಹಾಗೂ ಅವರ ಕಷ್ಟವನ್ನು ಅರಿಯುವ ಪ್ರಯತ್ನವನ್ನು ಬಹುತೇಕರು ಮಾಡುವುದಿಲ್ಲ, ಆದರೆ ಇಲ್ಲೊಬ್ಬ  ವ್ಯಕ್ತಿ ದಾರಿಯಲ್ಲಿ ಸಿಕ್ಕ ಹಣವನ್ನು ಪ್ರಾಮಾಣಿಕತೆಯಿಂದ  ಕಳೆದು ಕೊಂಡ ವ್ಯಕ್ತಿಗೆ ಹಿಂದುರುಗಿಸಿದ್ದಾನೆ. ಹಣ ಮಾಲೀಕರನ್ನು ಹುಡುಕಲು ಆತ ಸಾಮಾಜಿಕ ಜಾಲತಾಣಗಳ ಮೊರೆಯೊಗಿದ್ದಾನೆ. ಹಣ ಸಿಕ್ಕಿರುವ ಮಾಹಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ  ಹರಿಬಿಟ್ಟು ಹಣ ಮೂಲಿಕರನ್ನು ಹುಡುಕಿದ್ದಾನೆ. ಇಂತಹ ಅಪರೂಪದ ಘಟನೆ ನಡೆದಿರೋದು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ‌ ಹೊಸಕೆರೆ ಗ್ರಾಮದಲ್ಲಿ. ರಸ್ತೆಯಲ್ಲಿ ಕಳೆದುಕೊಂಡ ಹಣವನ್ನು ಮಾಲೀಕನಿಗೆ ವಾಪಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿಯ ಹೆಸರು ಶಿವಕುಮಾರ್, ಈ ಶಿವಕುಮಾರ್ ಹೊಸಕೆರೆ ಬಳಿ ಫ್ರೆಂಡ್ಸ್ ಡಾಬಾ  ನಡೆಸುತ್ತಿದ್ದಾರೆ. ಇವರಿಗೆ ನಿನ್ನೆ ಹೊಸಕೆರೆ ಗ್ರಾಮದ ಬಳಿಯ ರಸ್ತೆಯಲ್ಲಿ ಸಿಕ್ಕ 45 ಸಾವಿರ ಹಣ ಸಿಕ್ಕಿತ್ತು, ಆದರೆ ಹಣ ಕಳೆದುಕೊಂಡುವರ ಸುಳಿವು ಸಿಗಲಿಲ್ಲ. ಆಗ ಶಿವಕುಮಾರ್ ಫೇಸ್ ಬುಕ್ ನಲ್ಲಿ  ಸಿಕ್ಕಿರುವ 40 ಸಾವಿರ ಹಣದ ಕಂತೆಯನ್ನು ಕೈಯಲ್ಲಿ ಹಿಡಿದು, ಹೊಸಕೆರೆ ರಸ್ತೆಯಲ್ಲಿ ಈ ಹಣ ಸಿಕ್ಕಿದೆ, ಹಣ ಕಳೆದುಕೊಂಡವರು ನನ್ನ ಸಂಪರ್ಕ ಮಾಡಿ ಅಂತ ವಿನಂತಿಸಿಕೊಂಡಿದ್ದಾರೆ.

 

Tap to resize

Latest Videos

Udupi; 16 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ

ಈ ವಿಡಿಯೋ ಫೇಸ್ಬುಕ್‌ಗೆ ಅಪ್ ಲೌಡ್ ಮಾಡಿದ್ದಾರೆ. ಇದು ವೈರಲ್ ಆಗಿದೆ, ಆಗ ವಿಡಿಯೋ‌ ನೋಡಿದ ಅದೇ ಗ್ರಾಮದ ದರ್ಶನ್ ಎಂಬಾತ ಹಣ ನನ್ನದೆ ಎಂದು ಶಿವಕುಮಾರ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ದರ್ಶನ್ ಬೈಕ್ ನಲ್ಲಿ ತೆರಳಿವಾಗ ಹಣವನ್ನು ಕಳೆದುಕೊಂಡಿರುವುದು ಗೊತ್ತಾಗಿದೆ.‌ ಬಳಿಕ ಎಲ್ಲಾವನ್ನು ಪರಿಶೀಲಿಸಿ ಹಣವನ್ನು ದರ್ಶನ್ ಅವರಿಗೆ ಹಿಂದುರಿಗಿಸಲಾಗಿದೆ. ಈ ಘಟನೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.  ಶಿವಕುಮಾರ್ ಪ್ರಾಮಾಣಿಕತೆಯನ್ನು ಹಾಡಿ ಹೊಗಳಿದ್ದಾರೆ.

ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ: ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್

ಸುರತ್ಕಲ್‌: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಮೂಲ್ಕಿ: ಸುರತ್ಕಲ್‌ನ ಸೂರಜ್‌ ಹೋಟೆಲ್‌ ಬಳಿ ಗುರುವಾರ ಸಂಜೆ ಪಕ್ಷಿಕೆರೆಯ ದಯಾನಂದ ಶೆಟ್ಟಿಗಾರ್‌ ಎಂಬವರ ಜಾಗದ ಮೂಲ ಪತ್ರ ಮತ್ತು ಇನ್ನಿತರ ದಾಖಲೆ ಪತ್ರಗಳು ಜಯಕರ್ನಾಟಕ ಆಟೋ ಚಾಲಕ ಮಾಲೀಕ ಸಂಘದ ಮಾಜಿ ಅಧ್ಯಕ್ಷ ಶೇಖರ ಶೆಟ್ಟಿಯವರಿಗೆ ದೊರೆತಿದೆ. ಈ ಸಂದರ್ಭ ಕಾರ್ಯ ಪ್ರವೃತ್ತರಾದ ಅವರು ವಾರಸುದಾರರನ್ನು ರಾತ್ರಿಯೇ ಸಂಪರ್ಕಿಸಿ ಮರುದಿನ ಬೆಳಗ್ಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಹಿಂದೆಯೂ ಶೇಖರ ಶೆಟ್ಟಿಯವರು ನಗದು ಒಡವೆಗಳನ್ನು ಹಿಂದಿರುಗಿಸಿದ್ದ ಉದಾಹರಣೆಯೂ ಇದೆ. ಅವರ ಕಾರ್ಯಕ್ಕೆ ಸಾರ್ವಜನಿಕವಾಗಿ ಶ್ಲಾಘನೀಯ ವ್ಯಕ್ತವಾಗಿದೆ.

 

click me!