ಪ್ರಾಮಾಣಿಕತೆ ಮೆರೆದ ಆಟೋ ಚಾಲಕ : ಮರಳಿ ಮಾಲಕಿಗೆ ಸೇರಿದ ಬೆಲೆ ಬಾಳುವ ವಸ್ತುಗಳು

Published : Dec 03, 2019, 01:08 PM IST
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ : ಮರಳಿ ಮಾಲಕಿಗೆ ಸೇರಿದ ಬೆಲೆ ಬಾಳುವ ವಸ್ತುಗಳು

ಸಾರಾಂಶ

ಆಟೋ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದಿದ್ದು, ಆಟೋದಲ್ಲಿ ಬಿಟ್ಟಿದ್ದ ಬೆಲೆ ಬಾಳುವ ವಸ್ತುಗಳನ್ನು ಮರಳಿ ಮಾಲಕಿಗೆ ನೀಡಿದ್ದಾರೆ. 

ಬೆಂಗಳೂರು [ಡಿ.03]: ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರೋರ್ವರು ಬಿಟ್ಟ ವಸ್ತುವನ್ನು ಮರಳಿಸಿದ ಆಟೋ ಚಾಲಕನೋರ್ವನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಆಟೋದಲ್ಲಿ ಪ್ರಯಾಣಿಸುವಾಗ ಕಬಿತಾ ಪಾಂಡೆ ಎಂಬಾಕೆ ಬೆಲೆ ಬಾಳುವ ವಸ್ತುಗಳಿದ್ದ ತಮ್ಮ ಬ್ಯಾಗನ್ನು ಬಿಟ್ಟು ಹೋಗಿದ್ದರು. ಬ್ಯಾಗಿನಲ್ಲಿ ಐ ಫೋನ್ ಸೇರಿದಂತೆ ಹಲವು ರೀತಿಯ ವಸ್ತುಗಳಿದ್ದವು. 

ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ಬ್ಯಾಗು ಸಮೇತ ಮಾಲಕಿಗೆ ಆಟೋ ಚಾಲಕ  ಸಂತೋಷ್ ಮರಳಿ ನೀಡಿದ್ದಾರೆ. ಹೆಬ್ಬಾಳ ಠಾಣೆಗೆ ಎಲ್ಲಾ ವಸ್ತುಗಳನ್ನು ಒಪ್ಪಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಎಲ್ಲಾ ವಸ್ತುಗಳನ್ನು ಮರಳಿ  ಪೊಲೀಸರು ಮಾಲಕಿಗೆ ನೀಡಿದ್ದಾರೆ.  ಇದರಿಂದ ಆಟೋ ಚಾಲಕ ಸಂತೋಷ್ ಪ್ರಮಾಣಿಕತೆಗೆ ಮೆಚ್ಚಿದ ಪೊಲೀಸರು ಅವರಿಗೆ ಅಭಿನಂದಿಸಿದ್ದಾರೆ. 

ಈ ಹಿಂದೆಯೂ ಕೂಡ ಈ ರೀತಿಯ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಆಟೋ ಚಾಲಕನ ಪ್ರಾಮಾಣಿಕತೆ ಮಾಲಕಿಯೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

PREV
click me!

Recommended Stories

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Discover Koppal: ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್: ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ