ಸಮಯ ಪಾಲನೆಯಲ್ಲಿ ನೈಋುತ್ಯ ರೈಲ್ವೆಗೆ 4ನೇ ಸ್ಥಾನ: ಸಂಜೀವ್‌ ಕಿಶೋರ

By Kannadaprabha News  |  First Published Nov 29, 2022, 9:57 PM IST

ಸಮಯ ಪಾಲನೆಯಲ್ಲಿ (ಶೇ. 94.10 ಆಗಿದ್ದು) ನೈಋುತ್ಯ ರೈಲ್ವೆ 4ನೇ ಸ್ಥಾನ ಪಡೆದುಕೊಂಡಿದೆ ಎಂದು ನೈಋುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ ತಿಳಿಸಿದರು. ಮಂಗಳವಾರ ನಡೆದ ನೈಋುತ್ಯ ರೈಲ್ವೆಯ 22ನೇ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಹುಬ್ಬಳ್ಳಿ (ನ.29) : ಸಮಯ ಪಾಲನೆಯಲ್ಲಿ (ಶೇ. 94.10 ಆಗಿದ್ದು) ನೈಋುತ್ಯ ರೈಲ್ವೆ 4ನೇ ಸ್ಥಾನ ಪಡೆದುಕೊಂಡಿದೆ ಎಂದು ನೈಋುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ ತಿಳಿಸಿದರು. ಮಂಗಳವಾರ ನಡೆದ ನೈಋುತ್ಯ ರೈಲ್ವೆಯ 22ನೇ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರ ಅನುಕೂಲಕ್ಕಾಗಿ ಹಬ್ಬ ಮತ್ತು ರಜಾದಿನಗಳಲ್ಲಿ ನೈಋುತ್ಯ ರೈಲ್ವೆಯು 83 ವಿಶೇಷ ರೈಲು ಓಡಿಸಿದೆ. ರೈಲುಗಳಿಗೆ 1,798 ಹೆಚ್ಚುವರಿ ಕೋಚ್‌ ಅಳವಡಿಸಲಾಗಿದೆ. ಹೊಸಮಾರ್ಗ, ಜೋಡಿಮಾರ್ಗ ಮತ್ತು ವಿದ್ಯುದೀಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ. ಈಗಾಗಲೇ ನೈಋುತ್ಯ ರೈಲ್ವೆ ಜಾಲ ಶೇ.52 ವಿದ್ಯುದೀಕರಣಗೊಂಡಿದೆ ಎಂದು ತಿಳಿಸಿದರು.

Tap to resize

Latest Videos

ಮೈಸೂರು ಮತ್ತು ಎಂ.ಜಿ.ಆರ್‌. ಚೆನ್ನೈ ನಡುವೆ ದಕ್ಷಿಣ ಭಾರತದ ಮೊಟ್ಟಮೊದಲ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಚಾಲನೆ ನೀಡಿದ್ದು, ಬೆಳಗಾವಿ, ಹೊಸಪೇಟೆ, ದಾವಣಗೆರೆ ನಿಲ್ದಾಣಗಳ ಪುನರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬೆಂಗಳೂರು ಮತ್ತು ಯಶವಂತಪುರ ಕಂಟೋನ್ಮೆಂಟ್‌ಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Operation Nanhe Farishte: ವರ್ಷದಲ್ಲಿ 543 ಮಕ್ಕಳನ್ನ ರಕ್ಷಿಸಿದ ನೈರುತ್ಯ ರೈಲ್ವೆ

ಪ್ರಯಾಣಿಕ ಸೌಲಭ್ಯ, ರೈಲುಸೇವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ಈರಣ್ಣ ಕಡಾಡಿ, ಗೋವಾ ಸಚಿವ ನೀಲೇಶ್‌ ಕಾಬ್ರಾಲ್‌, ವಾಣಿಜ್ಯೋದ್ಯಮ ಸಂಸ್ಥೆ, ಪ್ರಯಾಣಿಕ ಸಂಘಗಳು, ಗ್ರಾಹಕ ರಕ್ಷಣಾ ಸಂಘಟನೆ, ದಿವ್ಯಾಂಗಜನರ ಸಂಘಟನೆಗಳು ಮತ್ತು ರೈಲ್ವೆ ಮಂಡಳಿಯ ವಿಶೇಷ ಪ್ರತಿನಿಧಿತ್ವದ 30 ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

ನೈಋುತ್ಯ ರೈಲ್ವೆಯ ಅಪರ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾದ ದೀಪಕ್‌ ಲಾಲ್ಗೆ, ಕೃಷ್ಣಮೂರ್ತಿ ಪಿ., ಬಿ.ವಿ. ಗೋಪಾಲ ರೆಡ್ಡಿ, ವಿನಯ್‌ ಜವಳಿ, ಕೆ.ಬಿ. ಲಿಂಗರಾಜು, ಸುಶೀಲ್‌ ನೋವಲ…, ಶಾ ರತನ್‌ ಚಂದ್‌, ಬಾಬುಲಾಲ್‌ ಜಿ. ಜೈನ್‌, ಮಹೇಂದ್ರ ಸಿಂಘಿ, ಎಚ್‌.ಎಸ್‌. ಲಿಂಗರಾಜು, ಅರುಣಕುಮಾರ ಎಚ್‌., ರವೀಂದ್ರ ಕುಮಾರ ಎಲ್‌., ಭರತಕುಮಾರ ಜೈನ್‌, ಎಂ. ಬಾಬು ರಾವ್‌, ಮಹಾಂತೇಶ ಮಮಮದಾಪುರ, ಸೇರಿ ಅನೇಕ ಸದಸ್ಯರು, ಇಲಾಖೆಗಳ ಪ್ರಧಾನ ಮುಖ್ಯಸ್ಥರು, ನೈಋುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

click me!