ಸರ್ಫೇಸಿ ಕಾಯ್ದೆ ವಿರುದ್ಧ ರಾಜಕೀಯ ಪಕ್ಷಗಳು, ಬೆಳಗಾರರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಕಾಯ್ದೆಯ ಸಾಧಕ - ಬಾಧಕಗಳು ಚರ್ಚೆ ಆಗುತ್ತಿರುವ ಹೊತ್ತಿನಲ್ಲೇ ಬ್ಯಾಂಕಿನ ಅಧಿಕಾರಿಗಳು ಸರ್ಫೆಸಿ ಕಾಯ್ದೆ ಅನ್ವಯ ಕ್ರಮಕ್ಕೆ ಮುಂದಾಗುತ್ತಿದ್ದಾರೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.30): ಸರ್ಫೇಸಿ ಕಾಯ್ದೆ (Sarfaesi Act) ವಿರುದ್ಧ ರಾಜಕೀಯ ಪಕ್ಷಗಳು, ಬೆಳಗಾರರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಕಾಯ್ದೆಯ ಸಾಧಕ - ಬಾಧಕಗಳು ಚರ್ಚೆ ಆಗುತ್ತಿರುವ ಹೊತ್ತಿನಲ್ಲೇ ಬ್ಯಾಂಕಿನ ಅಧಿಕಾರಿಗಳು ಸರ್ಫೆಸಿ ಕಾಯ್ದೆ ಅನ್ವಯ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಸರ್ಫೇಸಿ ಕಾಯ್ದೆ ಅನ್ವಯ ಹೋಂ ಸ್ಟೇ (Home Stay) ಒಂದನ್ನು ಬ್ಯಾಂಕಿನ ಸಿಬ್ಬಂದಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡನ ಸ್ವಾಧೀನದಲ್ಲಿದ್ದ ಹೋಂ ಸ್ಟೇಗೆ ಬೀಗ ಹಾಕಿ ಸೀಜ್ (Siege) ಮಾಡಿದ್ದಾರೆ ಬ್ಯಾಂಕಿನ ಸಿಬ್ಬಂದಿಗಳು.
ಕಾಂಗ್ರೆಸ್ ಮುಖಂಡನ ಹೋಂ ಸ್ಟೇ ಸೀಜ್: ಚಿಕ್ಕಮಗಳೂರಿನ ಹಿರೇಕೊಳಲೆ ಸಮೀಪ ಇರುವ ಲೈಕ್ ವ್ಯೂ ಹಿರೇಕೊಳಲೇ ಹೋಂ ಸ್ಟೇಯನ್ನು ಪಟ್ಟಣ ಸಹಕಾರ ಬ್ಯಾಂಕ್ ಸಿಬ್ಬಂದಿಗಳು ಸೀಜ್ ಮಾಡಿದ್ದಾರೆ. ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಮಾಲೀಕರಿಗೆ ಹಲವು ಬಾರಿ ನೋಟಿಸ್ ನೀಡಿದ್ದಾರೆ. ನೋಟೀಸಿಗೆ ಯಾವುದೇ ಪ್ರತ್ಯುತ್ತರ ನೀಡಿದ ಹಿನ್ನೆಲೆಯಲ್ಲಿ ಸರ್ಫೇಸಿ ಕಾಯ್ದೆಯನ್ವಯ ಹೋಂ ಸ್ಟೇಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Chikkamagaluru: ಐಬೆಕ್ಸ್ ತಂತಿ ಬೇಲಿಗೂ ಡೊಂಟ್ ಕೇರ್: ಕಾಡಾನೆ ದಾಳಿಗೆ ಮಹಿಳೆ ಸಾವು
2ಎಕರೆ ಪ್ರದೇಶದಲ್ಲಿ ಇರುವ ಹೋಂ ಸ್ಟೇ ಮೇಲೆ ಕಾಂಗ್ರೆಸ್ ಮುಖಂಡ ಶ್ರೀಧರ್ ಉರಾಳ್, ಶಿವಾನಂದ, ಲೀಲಾವತಿ ಎನ್ನುವರು ಚಿಕ್ಕಮಗಳೂರು ನಗರದಲ್ಲಿ ಇರುವ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 1998ರಲ್ಲಿ ಸಾಲ ಮಾಡಿದ್ದರು. ಹೋಂಸ್ಟೇ ಮೇಲೆ ಸಾಲ ತೆಗೆದುಕೊಂಡು ಇವರು ಸಾಲ ಮರುಪಾವತಿಯನ್ನೇ ಮಾಡಿರಲಿಲ್ಲ ಹಲವು ಭಾರಿ ಬ್ಯಾಂಕಿನಿಂದ ನೋಟಿಸ್ ಜಾರಿ ಮಾಡಿದ್ದರು.ಇದಕ್ಕೆ ಯಾವುದೇ ಉತ್ತರವನ್ನು ಈ ಮೂವರು ಕೊಟ್ಟಿರಲಿಲ್ಲ. ಈ ಹಿನ್ನೆಲೆ ಬ್ಯಾಂಕಿನ ಸಿಬ್ಬಂದಿಗಳು ಹೋಂ ಸ್ಟೇ ಗೆ ನೋಟಿಸ್ ಅಂಟಿಸಿ ಮುಟ್ಟುಗೋಲು ಹಾಕಿಕೊಂಡರು.
ಸರ್ಫೇಸಿ ಈ ಕಾಯ್ದೆಯನ್ವಯ ಕ್ರಮ: ಬ್ಯಾಂಕಿನ ಸಾಲ ಮರು ಪಾವತಿ ಮಾಡಿದ ಬೆಳಗಾರರು ವಿರುದ್ಧ ಸರ್ಫೇಸಿ ಕಾಯ್ದೆಯನ್ನು ಬಳಸಿ ಕ್ರಮ ತೆಗೆದುಕೊಳ್ಳುವ ಪರಿಪಾಠ ಚಿಕ್ಕಮಗಳೂರಿನಲ್ಲಿ ಹೆಚ್ಚಾಗುತ್ತಿದೆ. ಕಾಯ್ದೆ ವಿರುದ್ಧ ಈಗಾಗಲೇ ಕಾಫಿ ಬೆಳಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸರ್ಫೇಸಿ ಕಾಯ್ದೆಯನ್ವಯ ನೋಟಿಸ್ ಕೊಟ್ಟು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಅದನ್ನು ಹರಾಜು ಮಾಡುವಂತಹ ಸಂಪೂರ್ಣ ಹಕ್ಕು ಬ್ಯಾಂಕಿಗೆ ಅಧಿಕಾರ ಇರುತ್ತೆ. ಈ ಕಾಯ್ದೆ ಅನ್ವಯ ಹೋಂಸ್ಟೇ ಮೇಲೆ ಬ್ಯಾಂಕಿನ ಸಿಬ್ಬಂದಿಗಳು ಅಧಿಕಾರವನ್ನು ಬಳಸಿ ನೋಟಿಸ್ ಜಾರಿ ಮಾಡಿದ್ದಾರೆ.
ಹೆಣ್ಣು ಕಾಳಿಂಗ ಸರ್ಪವನ್ನ ಮೆಚ್ಚಿಸಲು ಎರಡು ಗಂಡು ಕಾಳಿಂಗಗಳ ಕೋಂಬ್ಯಾಕ್ ಡ್ಯಾನ್ಸ್..!
ಅಲ್ಲದೆ ಜಿಲ್ಲಾಧಿಕಾರಿಗಳಾದ ರಮೇಶ್, ಪೊಲೀಸ್ ಇಲಾಖೆ ಅನುಮತಿ ಪಡೆದು ಹೋಂಸ್ಟೇ ಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 1998ರಲ್ಲಿ 20 ಲಕ್ಷ ರೂಪಾಯಿಸಾಲವನ್ನು ಪಡೆದು ಅದರ ಬಡ್ಡಿ ಅಸಲನ್ನು ಈವರೆಗೂ ಕೂಡ ಮರುಪಾವತಿಯನ್ನು ಮಾಲೀಕರು ಮಾಡಿಲ್ಲ, ಇದರಿಂದ ಆ ಬ್ಯಾಂಕಿನ ಸಿಬ್ಬಂದಿಗಳು ಸರ್ಫೇಸಿ ಕಾಯ್ದೆ ಅನ್ವಯ ಕ್ರಮ ತೆಗೆದುಕೊಂಡು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.