ಹೋಂ ಕ್ವಾರಂಟೈನ್‌ಲ್ಲಿದ್ದ ಯುವಕ ಈಜಲು ಹೋಗಿ ಸಾವು

Kannadaprabha News   | Asianet News
Published : Apr 13, 2020, 01:44 PM IST
ಹೋಂ ಕ್ವಾರಂಟೈನ್‌ಲ್ಲಿದ್ದ ಯುವಕ ಈಜಲು ಹೋಗಿ ಸಾವು

ಸಾರಾಂಶ

ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಹೋಂ ಕ್ವಾರಂಟೈನ್‌ನಲ್ಲಿದ್ದ ಯುವಕ| ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿರೇನೆಲ್ಲೂರು ಗ್ರಾಮದಲ್ಲಿ ನಡೆದ ಘಟನೆ| ಲಾಕ್‌ಡೌನ್‌ ಆದ್ದರಿಂದ ಹುಬ್ಬಳ್ಳಿಯಲ್ಲಿದ್ದ ವ್ಯಕ್ತಿ ಸ್ವಗ್ರಾಮಕ್ಕೆ ಹಿಂದುರಿಗಿದ್ದ| ಬೇರೆಕಡೆಯಿಂದ ಬಂದಿದ್ದರಿಂದ ಪರಶುರಾಮನಿಗೆ ಹೋಂ ಕ್ವಾರಂಟೈನ್‌ ವಿಧಿಸಲಾಗಿತ್ತು|

ಸಾಗರ(ಏ.13): ಹೋಂ ಕ್ವಾರಂಟೈನ್‌ನಲ್ಲಿದ್ದ ಯುವಕನೊಬ್ಬ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿರೇನೆಲ್ಲೂರು ಗ್ರಾಮದಲ್ಲಿ ನಿನ್ನೆ(ಭಾನುವಾರ) ನಡೆದಿದೆ.

ಪರಶುರಾಮ (35) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕೊರೋನಾ ಕಾರಣಕ್ಕಾಗಿ ಲಾಕ್‌ಡೌನ್‌ ಆದ್ದರಿಂದ ಹುಬ್ಬಳ್ಳಿಯಲ್ಲಿದ್ದ ಪರಶುರಾಮ ತನ್ನ ಸ್ವಗ್ರಾಮ ಹಿರೇನೆಲ್ಲೂರಿಗೆ ಬಂದಿದ್ದ. 

ಕೆಲಸ, ಆಹಾರ ಸಿಗದೇ ಆಂಧ್ರಪ್ರದೇಶದಿಂದ ಹಾಸನಕ್ಕೆ ಕಾಲ್ನಡಿಗೆ!

ಬೇರೆಕಡೆಯಿಂದ ಬಂದಿದ್ದರಿಂದ ಪರಶುರಾಮನಿಗೆ ಹೋಂ ಕ್ವಾರಂಟೈನ್‌ ವಿಧಿಸಲಾಗಿತ್ತು. ಪರಶುರಾಮ ಗ್ರಾಮದ ಹಿರೇಕೆರೆಯಲ್ಲಿ ಶನಿವಾರ ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!