ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದ ತಕ್ಷಣವೇ ಸರ್ಕಾರ ಕೇಸ್ ವಾಪಸ್ ತೆಗೆದುಕೊಳ್ಳಲ್ಲ. ಅದಕ್ಕೊಂದು ಪದ್ಧತಿಯಿದೆ ಎಂದ ಗೃಹ ಸಚಿವ ಜಿ.ಪರಮೇಶ್ವರ್
ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು(ಅ.03): ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸಾಕಷ್ಟು ಶಾಸಕರು ಪತ್ರ ಬರೀತಾರೆ. ನಾವು ಅಮಾಯಕರಿದ್ದೇವೆ, ಅಂತ ಅವರಿಗೆ ಅರ್ಜಿ ಕೊಟ್ಟಿರುತ್ತಾರೆ. ಆ ಕೇಸ್ ನಲ್ಲಿ ಸೇರಿಸಿದ್ದಾರೆ, ವಾಪಸ್ ತೆಗೆದುಕೊಳ್ಳಿ ಅಂತ ಮನವಿ ಮಾಡಿರುತ್ತಾರೆ. ಯಾರಾದ್ರೂ ಪತ್ರ ಬರೆದ ತಕ್ಷಣ ಕೇಸ್ ವಾಪಸ್ ತೆಗೆದುಕೊಳಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದ ತಕ್ಷಣವೇ ಸರ್ಕಾರ ಕೇಸ್ ವಾಪಸ್ ತೆಗೆದುಕೊಳ್ಳಲ್ಲ. ಅದಕ್ಕೊಂದು ಪದ್ಧತಿಯಿದೆ ಎಂದರು. ಕ್ಯಾಬಿನೇಟ್ ಸಬ್ ಕಮಿಟಿ ಮಾಡಿದ್ದಾರೆ. ಸಬ್ ಕಮಿಟಿ ಮುಂದೆ ಅದನ್ನು ಇಡುತ್ತೇವೆ. ಕಮಿಟಿ ಮುಂದೆ ಇಡುವ ಮೊದಲೇ ಗೃಹ ಇಲಾಖೆಯಲ್ಲಿ ಚೆಕ್ ಮಾಡಿಕೊಳ್ಳುತ್ತೇವೆ. ಅದನ್ನು ಇಡಬಹುದೊ ಇಡಬಾರದ ಅಂತ ಪರಿಶೀಲನೆ ಮಾಡಿ ಅನಂತರ ಕಮಿಟಿ ಮುಂದೆ ತರುಲಾಗುತ್ತದೆ. ಕಾನೂನು ಹಾಗೂ ಇಲಾಖೆಯ ತಜ್ಞರು ಇರ್ತಾರೆ ಅಲ್ಲಿ ಚರ್ಚೆ ಮಾಡಲಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಇದನ್ನ ತೆಗೆಯಬಾರದು, ತೆಗೆಯ ಬಹುದು ಅನ್ನೋದನ್ನ ನಮಗೆ ತಿಳಿಸುತ್ತಾರೆ. ಗೃಹ ಸಚಿವರೇ ಅಧ್ಯಕ್ಷರಿರುತ್ತಾರೆ. ಅಲ್ಲಿಯೂ ತೆಗೆಯಬಹುದು ಅಂತಾಂದ್ರೆ ಮತ್ತೇ ಕ್ಯಾಬಿನೇಟ್ ನಲ್ಲಿ ಇಡಲಾಗುತ್ತದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಗಲಭೆಗೆ ಆಗುವ ಮುನ್ನವೇ ನಾವು ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೆವು: ಸಚಿವ ಪರಮೇಶ್ವರ್
ಅಲ್ಲಿ ಇರಿ ಇದ್ದರೆ ಕೇಸ್ ತಗಿತ್ತಾರೆ, ಇಲ್ಲದಿದ್ದರೆ ವಾಪಸ್ ಕಳುಹಿಸಲಾಗುತ್ತದೆ. ಇಷ್ಟ ಪದ್ಧತಿ ಆದ್ಮೇನೇ ಕೇಸ್ ವಾಪಸ್ ತೆಗೆದುಕೊಳ್ಳೊದು. ಯಾವುದೇ ಸಮುದಾಯದ ಓಲೈಕೆ ಅಲ್ಲ ಎಲ್ಲಾ ಸರ್ಕಾರದಲ್ಲೂ ಇದು ನಡೆಯುತ್ತೆ ಹಿಂದೆ ನಾಲ್ಕು ವರ್ಷದಲ್ಲಿ ತೆಗೆದಿದ್ದಾರೆ. ಮುಗ್ಧರನ್ನು ತೆಗೆಯುವ ಕೆಲಸವನ್ನು ಎಲ್ಲಾ ಸರ್ಕಾರಗಳು ಮಾಡಿದೆ ಎಂದರು.
ಗಲಾಟೆಗೆ ಸಿದ್ದರಾಮಯ್ಯ- ಪರಮೇಶ್ವರ್ ಕಾರಣ ಎಂದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಸುಲಭವಾಗಿ ಮಾತನಾಡೋದನ್ನ ನಿಲ್ಲಿಸಬೇಕು. ಶೋಭಾ ಕರಂದ್ಲಾಜೆ ಕುಮ್ಮಕ್ಕಿನಿಂದ ಆಗಿದೆ ಅಂತ ಹೇಳಿ ಬಿಡಬಹುದಾ?, ನಾನು ಜವಾಬ್ದಾರಿ ಸ್ಥಾನದಲ್ಲಿ ಇರೋನು ಹಾಗೇ ಹೇಳಲ್ಲ. ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ, ತಿಳಿದು ಮಾತನಾಡೋದನ್ನ ಕಲಿತುಕೊಂಡರೆ ಬಹಳ ಒಳ್ಳೆದು. ಏನ್ ಮಾಡ್ತಾರೆ, ಅದನ್ನು ಅರ್ಥ ಮಾಡಿಕೊಳ್ಳಬೇಕು. ಘಟನೆ ನಡೆದಿದೆ, ಅದನ್ನು ನಿಯಂತ್ರಣ ಮಾಡಿದ್ದೇವೆ. ನಿಯಂತ್ರಣ ಮಾಡದಿದ್ದರೆ ದೊಡ್ಡದಾಗುತ್ತಿತ್ತು. ಅದನ್ನು ಮೊದಲೇ ತಿಳಿದು ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಅದಕ್ಕೆ ಅಪ್ರಿಷಿಯೇಟ್ ಮಾಡಬೇಕು ಎಂದರು.
ನಿಗಮಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಆದಷ್ಟು ಶೀಘ್ರವಾಗಿ ನೇಮಕ ಮಾಡುತ್ತೇವೆ. ಮುಖ್ಯಮಂತ್ರಿಗಳು ಅದನ್ನು ಗಮನಿಸಿದ್ದಾರೆ ಎಂದು ಹೇಳಿದರು.