ರೀ ರೈಲು ತೆರವು ಯಶಸ್ವಿ, ಕೊನೆಗೂ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಮತ್ತೆ ಆರಂಭ

By Gowthami K  |  First Published Oct 3, 2023, 4:47 PM IST

ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ್ದ ಆರ್‌ಆರ್‌ವಿ ತೆರವು ಯಶಸ್ವಿಯಾಗಿದೆ. ಹೀಗಾಗಿ ಹಸಿರು ಮಾರ್ಗದಲ್ಲಿ ಮತ್ತೆ ಮೆಟ್ರೋ ರೈಲು ಸಂಚಾರ ಆರಂಭಿಸಿದೆ.  


ಬೆಂಗಳೂರು (ಅ.3): ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ್ದ ಆರ್‌ಆರ್‌ವಿ ತೆರವು ಯಶಸ್ವಿಯಾಗಿದೆ. ಹೀಗಾಗಿ ಹಸಿರು ಮಾರ್ಗದಲ್ಲಿ ಮತ್ತೆ ಮೆಟ್ರೋ ರೈಲು ಸಂಚಾರ ಆರಂಭಿಸಿದೆ.  ರೀ ರೈಲು ಹಳಿ ತಪ್ಪಿದ್ದರಿಂದ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು. ಸದ್ಯ ಹಳಿಯಿಂದ ರೀ ರೈಲನ್ನು ತೆರವುಗೊಳಿಸುವ ಕಾರ್ಯ ಯಶಸ್ವಿಯಾಗಿದ್ದು,  ಮಧ್ಯಾಹ್ನ 3.40 ರಿಂದ ನಮ್ಮ ಮೆಟ್ರೋ ಸಂಚಾರ ಮತ್ತೆ ಎಂದಿನಂತೆ ಆರಂಭಗೊಂಡಿದೆ. ಎಂದಿನಂತೆ ನಾನ್ ಫೀಕ್ ಅವರ್ ನಲ್ಲಿ ಹತ್ತು ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿದೆ.

ಹಸಿರು ಮಾರ್ಗದಲ್ಲಿ ಕೈ ಕೊಟ್ಟ ಮೆಟ್ರೋ

Tap to resize

Latest Videos

undefined

ಸದ್ಯ ಎಲ್ಲಾ ಕ್ಲಿಯರ್ ಆಗಿದೆ. ಟ್ರ್ಯಾಕ್ ನಲ್ಲಿ ಯಾವ ಸಮಸ್ಯೆ ಇಲ್ಲ. ರೀ ರೈಲಿನ ಚಕ್ರ ಸಿಲುಕಿದ್ದರಿಂದ ಸಮಸ್ಯೆಯಾಗಿತ್ತು. ಈ ಹಿಂದೆ ಕೂಡ ರೀ ರೈಲು ಸಂಚಾರ ನಡೆಸಿದೆ. ಆದ್ರೆ ಈ ರೀತಿಯ ಸಮಸ್ಯೆ ಆಗಿರಲಿಲ್ಲ. ರೀ ರೈಲು ಟೈರ್ ಹಾಗೂ ವೀಲ್ ನಡುವೆ ಜಾಮ್ ಆಗಿತ್ತು. ರೀ ರೈಲು ಟ್ಯ್ರಾಕ್ ಹಾಗೂ ರಸ್ತೆ ಮೇಲೆ ಸಂಚಾರಿಸುವ ವಾಹನವಾಗಿದೆ. ಇದನ್ನ ಡಿಪೋದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದೇ ಮೊದಲ ಭಾರಿಗೆ ಟ್ರ್ಯಾಕ್ ಮೇಲೆ ತರಲಾಗಿತ್ತು. ಈಗ ಸಮಸ್ಯೆ ಬಗೆಹರಿದಿದೆ ಎಂದು ಆಪರೇಷನ್ ಆಂಡ್ ಮೆಂಟೇನೆನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ಹೇಳಿದ್ದಾರೆ.

ಬಿಎಂಆರ್ ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚಾವ್ಹಾಣ್ ಪ್ರತಿಕ್ರಿಯೆ ನೀಡಿ, ಮೆಟ್ರೋದ ಪ್ರತಿ ಡಿಪೋದಲ್ಲಿ ರೋಡ್ ಕಂ ರೈಲ್ವೇ ವೆಹಿಕಲ್ ಇರುತ್ತೆ. ಮೆಟ್ರೋ ರೈಲು ಕೆಟ್ಟರೆ ನಂತ್ರ ಅದನ್ನು ಈ ವೆಹಿಕಲ್ ಹಳಿಯಲ್ಲಿ ಹೋಗಿ ಸರಿ ಪಡಿಸುತ್ತೆ‌. ಈ ರೋಡ್ ಕಂ ರೈಲ್ವೇ ಯಲ್ಲಿ ಮೆಟ್ರೋ ಸರಿಪಡಿಸುವ ಗ್ಯಾಜೇಟ್ಸ್ಗಳಿರುತ್ತೆ. ಸೋಮವಾರ ರಾತ್ರಿ ಈ ವೆಹಿಕಲ್ ಕಾರ್ಯಾಚರಣೆಗೆ ಹೋದಾಗ ಇದಾಗಿದೆ.  ರೈಲ್ ಸಂಚಾರ ಇರೋದ್ರಿಂದ ವರ್ಕ್ ಮಾಡೋದು ಕಷ್ಟವಾಯ್ತು ಎಂದಿದ್ದಾರೆ.

ಬೆಂಗಳೂರು ಮೆಟ್ರೋದಲ್ಲಿ ಫ್ರೀ ಆಗಿ ಹೇಗೆ ಪ್ರಯಾಣಿಸಬಹುದೆಂದು ತೋರಿಸಿದ ಯೂಟ್ಯೂಬರ್‌: ವಿಡಿಯೋ ವೈರಲ್‌

ಇನ್ನು ಇಷ್ಟೆಲ್ಲ ಘಟನೆ ನಡೆದರೂ ಬಿಎಂಆರ್ಸಿಎಲ್ ಎಂಡಿ ಅಂಜುಂ ಫರ್ವೆಜ್ ಘಟನಾ ಸ್ಥಳಕ್ಕೆ ಬರದೆ, ಏನ್ ಮಾಡಿದ್ರೆ ಸೂಕ್ತ ಅನ್ನೋ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಯ್ತು. ಅಧಿಕಾರಿಗಳು  ಗಂಟೆಗಳ ಕಾಲ ಕಾದು ಕುಳಿತಿದ್ರು. ಬಳಿಕ ನುರಿತ ತಜ್ಞರ ಮೂಲಕ ತಾಂತ್ರಿಕ ದೋಷ ನಿರ್ವಾರಣೆ ಅಧಿಕಾರಿಗಳು ಮುಂದಾದ್ರು ಎನ್ನಲಾಗಿದೆ.

ತಾಂತ್ರಿಕ ದೋಷದ ಹಿನ್ನೆಲೆ ಪ್ರಯಾಣಿಕರಿಗೆ ತೊಂದರೆಯಾಗದ ಹಿನ್ನೆಲೆ ಒಂದೇ ಮಾರ್ಗದಲ್ಲಿ ಸಂಚಾರ ನಡೆಸಲಾಯ್ತು. ಬಳಿಕ ಯಶವಂತಪುರದಿಂದ ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದ ನಡುವಿನ ಕಾರ್ಯಾಚರಣೆಯನ್ನು ಮದ್ಯಾಹ್ನ 2 ಗಂಟೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನಂತರ, ಆರ್.ಆರ್.ವಿಯನ್ನು ಕ್ರೇನ್‌ ಸಹಾಯದಿಂದ ತೆರವುಗೊಳಿಸಿದ ನಂತರ ಮದ್ಯಾಹ್ನ 3.40 ಗಂಟೆಗೆ ರೈಲು ಕಾರ್ಯಾಚರಣೆಯನ್ನು ಎಂದಿನಂತೆ ಪುನರಾರಂಭಿಸಲಾಯ್ತು ಎಂದು  ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.


 

click me!