ಒಂದು ವೇಳೆ ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಿದ್ದರೆ ರಾಜ್ಯದ ಜನರು ಮಣ್ಣು ತಿನ್ನಬೇಕಿತ್ತು ಎಂದು ಗೃಹ ಸಚೊವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ (ಆ.30): ‘ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವುದರಿಂದ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಒಂದು ವೇಳೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದರೆ ಜನರು ಮಣ್ಣು ತಿನ್ನಬೇಕಾಗಿ ಬರುತ್ತಿತ್ತೇನೋ.ಆದರೆ ನಮ್ಮ ಸರ್ಕಾರದಲ್ಲಿ ಆ ರೀತಿ ಆಗುವುದಿಲ್ಲ’
-ಇದು ಕೇಂದ್ರ ಜಿಎಸ್‌ಟಿ ಹಣ ಕೊಡದಿದ್ದರೆ ಜನರು ಮಣ್ಣು ತಿನ್ನಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿರುವ ತೀಕ್ಷ$್ಣ ತಿರುಗೇಟು. ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳೆಲ್ಲ ಸೇರಿ ಒಟ್ಟಾಗಿ ಚರ್ಚಿಸಿದ್ದೇವೆ. ಸಿದ್ದರಾಮಯ್ಯ ಮುತ್ಸದ್ಧಿ ರಾಜಕಾರಣಿ.
undefined
ಬಿಟ್ಟು ಬಂದ ಪಕ್ಷದ ಪ್ರಭಾವ ಇನ್ನೂ ಇದೆ : ಬಿಜೆಪಿ ಮುಖಂಡನ ವಿರುದ್ಧ ಸಿಂಹ ಕಿಡಿ...
ಅತಿ ಹೆಚ್ಚು ಬಜೆಟ್ ಮಂಡಿಸಿದ್ದಾರೆ. ಅವರು ಇದರಲ್ಲಿ ರಾಜಕಾರಣ ಮಾಡದೇ ಪರಿಹಾರಕ್ಕೆ ಸೂಕ್ತ ಸಲಹೆ ನೀಡಬಹುದು ಎಂದರು. ರಾಜ್ಯಕ್ಕೆ ಬಡ್ಡಿ ಮತ್ತು ಅಸಲು ತೀರಿಸಲು ಭಾರ ಆಗದ ರೀತಿಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸೂಚಿಸಿದೆ. ಒಂದೆರಡು ದಿನಗಳಲ್ಲಿ ಅದು ಲಿಖಿತ ರೂಪದಲ್ಲಿ ಬರಲಿದೆ. ಆಗ ಸ್ಪಷ್ಟಅಭಿಪ್ರಾಯ ತಿಳಿಸುತ್ತೇವೆ ಎಂದರು.