ಬಿಜೆಪಿ ಮುಖಂಡರೋರ್ವರ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಅವರು ಬಿಟ್ಟು ಬಂದ ಪಕ್ಷದ ಪ್ರಭಾವ ಇನ್ನೂ ಅವರ ಮೇಲೆ ಇದ್ದಂತಿದೆ ಎಂದು ಹೇಳಿದ್ದಾರೆ.
ಮೈಸೂರು (ಆ.30): ಟಿಪ್ಪು ಸುಲ್ತಾನ್ ಪರವಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ತಲ್ಲಣಕ್ಕೆ ಕಾರಣವಾಗಿರುವಾಗಲೇ ಸಂಸದ ಪ್ರತಾಪ ಸಿಂಹ ಕೂಡ ಕಿಡಿಕಾರಿದ್ದಾರೆ.
ಆದರೆ ವಿಶ್ವನಾಥ್ ಇದಾವುದಕ್ಕೂ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಂಸದ ಪ್ರತಾಪ ಸಿಂಹ ವಿಶ್ವನಾಥ್ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಆದರೆ ಅವರ ಪೂರ್ವಾಶ್ರಮ ಪ್ರಭಾವ ಇನ್ನೂ ಇದ್ದಂತಿದೆ.
ಮದ್ದೂರಲ್ಲಿ ಕಮಲ ಅರಳಿಸಲು ಸಜ್ಜಾದ ಬಿಜೆಪಿ : ಫಿಕ್ಸ್ ಆಗ್ತಾರ ಇವರೇ ಅಭ್ಯರ್ಥಿ?.
ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತಾನಾಡಬೇಕು ಎಂದು ಟಾಂಗ್ ನೀಡಿದರು. ಈ ಸುದ್ದಿಗಾರರು ವಿಶ್ವನಾಥ್ ಅವರನ್ನು ಪ್ರಶ್ನಿಸಿದಾಗ ಮಾತನಾಡಲು ನಿರಾಕರಿಸಿದ ಅವರು ‘ಈ ಹೊತ್ತು ಏಕದಾಶಿ ಮೌನ, ನಾಳೆ ಮಾತನಾಡೋಣ’ ಎಂದು ಬರೆದಿದ್ದ ಹಾಳೆ ಪ್ರದರ್ಶನ ಮಾಡಿ ಸುಮ್ಮನಾಗಿದ್ದಾರೆ.
ವಿಶ್ವನಾಥ್ ಅವರ ಟಿಪ್ಪುಪರ ಹೇಳಿಕೆ ವಿವಾದವಾದ ಬೆನ್ನಲ್ಲೇ ಪಕ್ಷದ ಹಿರಿಯ ಮುಖಂಡರನ್ನು ಅವರನ್ನು ಸಂಪರ್ಕಿಸಿ ಮಾತನಾಡಿದ್ದು, ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ಮೌನಕ್ಕೆ ಶರಣಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.