ರಾಸಲೀಲೆ ಸಿಡಿ ಪ್ರಕರಣ: ಕಾನೂನು ಪ್ರಕಾರವೇ ತನಿಖೆ, ಸಚಿವ ಬೊಮ್ಮಾಯಿ

By Kannadaprabha News  |  First Published Apr 7, 2021, 3:40 PM IST

ಎಎಸ್‌ಐಟಿಗೆ ಕ್ರಮಬದ್ದ, ನ್ಯಾಯಸಮ್ಮತವಾಗಿ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ| ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಏನಾದರೂ ಇದ್ದರೆ ಎಸ್‌ಐಟಿಯವರೇ ಹೇಳುತ್ತಾರೆ: ಬೊಮ್ಮಾಯಿ| 


ಕಲಬುರಗಿ(ಏ.07): ಸಿಡಿ ಪ್ರಕರಣದಲ್ಲಿ ಎಸ್‌ಐಟಿಗೆ ನ್ಯಾಯಸಮ್ಮತ ಕೆಲಸ ಮಾಡಲು ಸೂಚನೆ ನೀಡಿದ್ದೇನೆ. ನಾವು ಸತ್ಯದ ಪರವಾಗಿದ್ದೇವೆ. ಯಾರ ಪರ ಅಥವಾ ವಿರೋಧವಾಗಿಯೂ ಇಲ್ಲ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬಸವಕಲ್ಯಾಣ ಹೋಗುವ ದಾರಿಯಲ್ಲಿ ಕಲಬುರಗಿ ಏರ್ಪೋರ್ಟ್‌ನಲ್ಲಿ ಕೆಲಕಾಲ ತಂಗಿದ್ದ ಗೃಹ ಸಚಿವರು ಸಿಡಿ ಲೇಡಿಗೆ ಎಸ್‌ಐಟಿ ವಿಚಾರಣೆ ಬಗ್ಗೆ ಅತೃಪ್ತಿ ಇರುವ ಬಗ್ಗೆ ಪ್ರತಿಕ್ರಿಯಿಸಿದರಲ್ಲದೆ, ಎಎಸ್‌ಐಟಿಗೆ ಕ್ರಮಬದ್ದ, ನ್ಯಾಯಸಮ್ಮತವಾಗಿ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ. ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏನಾದರೂ ಇದ್ದರೆ ಎಸ್‌ಐಟಿಯವರೇ ಹೇಳುತ್ತಾರೆ ಎಂದು ತಿಳಿಸಿದ್ದಾರೆ.

Tap to resize

Latest Videos

ಆರೋಗ್ಯದಲ್ಲಿ ಚೇತರಿಕೆ, ರಮೇಶ್ ಜಾರಕಿಹೊಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಸಿಡಿ ಪ್ರಕರಣ ತನಿಖೆ ಪ್ರಗತಿಯ ಬಗ್ಗೆ ಹೈಕೋರ್ಟ್‌ ತನಿಖೆ ಪ್ರಗತಿಯ ಮಾಹಿತಿ ಕೇಳಿದ್ದರ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಸಿದರಲ್ಲದೆ ನ್ಯಾಯಾಲಯ ಕೇಳಿದ ಮಾಹಿತಿ ಕೊಡುತ್ತೇವೆ. ಎಲ್ಲ ಪ್ರಕ್ರಿಯೆಗಳನ್ನೂ ಕಾನೂನು ಪ್ರಕಾರವೇ ಮಾಡಲಾಗುವುದು ಎಂದು ಹೇಳಿದರು.
 

click me!