ಝೀರೋ ಟ್ರಾಫಿಕ್ ಬೇಡ ಎಂದ್ರು ಸಚಿವ ಬೊಮ್ಮಾಯಿ

By Web DeskFirst Published Aug 31, 2019, 11:31 AM IST
Highlights

ಬಿಜೆಪಿ ಸರ್ಕಾರದ ಮೂವರೂ ಉಪಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್ ಸೌಕರ್ಯ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಬೆನ್ನಲ್ಲೇ ಈಗ ಮತ್ತೊಬ್ಬರು ಸಚಿವ ಝೀರೋ ಟ್ರಾಫಿಕ್ ಬೇಡ ಎಂದಿದ್ದಾರೆ. ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿದಾಗ  ಗೃಹ ಸಚಿವ‌ ಬೊಮ್ಮಾಯಿ ಜೀರೋ ಟ್ರಾಫಿಕ್ ನಿರಾಕರಿಸಿದ್ದಾರೆ.

ಹುಬ್ಬಳ್ಳಿ(ಆ. 31): ಬಿಜೆಪಿ ಸರ್ಕಾರದ ಮೂವರೂ ಉಪಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್ ಸೌಕರ್ಯ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಬೆನ್ನಲ್ಲೇ ಈಗ ಮತ್ತೊಬ್ಬರು ಸಚಿವ ಝೀರೋ ಟ್ರಾಫಿಕ್ ಬೇಡ ಎಂದಿದ್ದಾರೆ. ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿದಾಗ  ಗೃಹ ಸಚಿವ‌ ಬೊಮ್ಮಾಯಿ ಜೀರೋ ಟ್ರಾಫಿಕ್ ನಿರಾಕರಿಸಿದ್ದಾರೆ.

ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಝೀರೋ ಟ್ರಾಫಿಕ್ ಬೇಡ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿದಾಗ ಅಧಿಕಾರಿಗಳು ಝೀರೋ ಟ್ರಾಫಿಕ್ ನೀಡಿದಕ್ಕೆ ಬೇಡವೆಂದು ನಿರಾಕರಿಸಿದ್ದಾರೆ.

ಝೀರೋ ಟ್ರಾಫಿಕ್‌ನಿಂದ ಜನರಿಗೆ ತೊಂದರೆಯಾಗುತ್ತಿದೆ. ಇದು ನನ್ನ ಗಮನಕ್ಕೆ‌ ಬಂದಿದೆ. ಇನ್ನು ಮುಂದೆ ಝೀರೋ ಟ್ರಾಫಿಕ್ ಬೇಡ ಎಂದು ಬಸವರಾಜ್ ಬೋಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್‌ಗೆ ಅಚಿವರು ಸೂಚನೆ ನೀಡಿದ್ದಾರೆ.

ಉಪಮುಖ್ಯಮಂತ್ರಿಗಳಾದ ಡಾ|.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೂ ಝೀರೋ ಟ್ರಾಫಿಕ್ ಬೇಡ ಎಂಬ ತೀರ್ಮಾನ ಕೈಗೊಂಡಿದ್ದರು.

click me!