ಮಂಡ್ಯದ ಎರಡು ಕಡೆ ಗೃಹ ಸಚಿವರಿಂದ ನೀತಿ ಸಂಹಿತೆ ಉಲ್ಲಂಘನೆ

By Web DeskFirst Published Nov 21, 2019, 10:25 AM IST
Highlights

ನೀತಿ ಸಂಹಿತೆ ಉಲ್ಲಂಘಿಸಿದ ಬಸವರಾಜ್ ಬೊಮ್ಮಾಯಿ| ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಸಿಬ್ಬಂದಿಗೆ ಸಹಕಾರ ನೀಡದೆ ಕಾರನ್ನು ಚಲಾಯಿಸಿದ್ದಾರೆ| ಗೃಹ ಮಂತ್ರಿಯ ವರ್ತನೆಗೆ ಸಾರ್ವಜನಿಕರ ಆಕ್ರೋಶ|  

ಮಂಡ್ಯ(ನ.21): ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ನೀತಿ ಸಂಹಿತಿ ಜಾರಿಯಲ್ಲಿದೆ. ಆದರೆ, ಗೃಹ  ಸಚಿವ ಬಸವರಾಜ್ ಬೊಮ್ಮಾಯಿ ಅವರೇ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ತಾಲೂಕಿನ ಹನಕೆರೆ ಬಳಿ ಘಟನೆ ಇಂದು(ಗುರುವಾರ)  ನಡೆದಿದೆ. 

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಅವರ ತಂಡ ಇದ್ದ ಕಾರನ್ನು ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಲು ಮುಂದಾಗಿದ್ದಾರೆ. ಆದರೆ, ಸಚವರಿದ್ದ ಕಾರು ಚುನಾವಣಾ ಸಿಬ್ಬಂದಿಗೂ ಸಹಕರಿದೆ ಕಾರನ್ನು ಚಲಾಯಿಸಿದ್ದಾರೆ. 
ಸಚಿವ ಬಸವರಾಜ್ ಬೊಮ್ಮಾಯಿ ಅವರು ಒಟ್ಟು ಎರಡು ಕಡೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಒಂದು ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟ ಗ್ರಾಮದ ಬಳಿ ಮತ್ತೊಂದು ಹನಕೆರೆ ಬಳಿ ಸಚಿವರು ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಸಿಬ್ಬಂದಿಗೆ ಸಹಕಾರ ನೀಡದೆ ಕಾರನ್ನು ಚಲಾಯಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿದ್ದ ಕಾರು ನಿಡಘಟ್ಟ ಬಳಿ ಹಾಗೂ ಹನಕೆರೆ ಬಳಿ ವಾಹನ ತಪಾಸಣೆಗೆ ಒಳಗಾಗದೆ ಮುಂದೆ ಸಾಗಿದ್ದಾರೆ. ಆದರೆ ಈ ವೇಳೆ ಚುನಾವಣಾ ಸಿಬ್ಬಂದಿ ವಾಹನವನ್ನು ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಗೃಹ ಮಂತ್ರಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!