ಕಲಬುರಗಿಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಹೋಂ ಐಸೊಲೇಷನ್

By Suvarna News  |  First Published Mar 12, 2020, 5:57 PM IST

ಕಲಬುರಗಿಯಲ್ಲಿ 40ಕ್ಕೂ ಹೆಚ್ಚು ಜನರನ್ನು ಹೋಂ ಐಸೊಲೇಷನ್‌ನಲ್ಲಿರಿಸಲಾಗಿದೆ. ಕಲಬುರಗಿಯಲ್ಲಿ ವೃದ್ಧ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನೊಂದಿಗೆ ಒಡನಾಟ ನಡೆಸಿದ ಎಲ್ಲರ ಮೇಲು ತೀವ್ರ ನಿಗಾ ವಹಿಸಲಾಗಿದೆ.


ಕಲಬುರಗಿ(ಮಾ.12): ಕಲಬುರಗಿಯಲ್ಲಿ 40ಕ್ಕೂ ಹೆಚ್ಚು ಜನರನ್ನು ಹೋಂ ಐಸೊಲೇಷನ್‌ನಲ್ಲಿರಿಸಲಾಗಿದೆ. ಕಲಬುರಗಿಯಲ್ಲಿ ವೃದ್ಧ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನೊಂದಿಗೆ ಒಡನಾಟ ನಡೆಸಿದ ಎಲ್ಲರ ಮೇಲು ತೀವ್ರ ನಿಗಾ ವಹಿಸಲಾಗಿದೆ.

ಕೊರೊನಾ ಸೋಂಕು ಶಂಕಿತ ಕಲಬುರಗಿ ವೃದ್ದ ಸಾವು ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಮಾತನಾಡಿದ್ದಾರೆ. ವೃದ್ದನ ವೈದ್ಯಕೀಯ ರಿಪೋರ್ಟ್ ಇನ್ನೂ ಬಂದಿಲ್ಲ. ನಾವು ಕೂಡಾ ವರದಿಗಾಗಿ ಕಾಯುತ್ತಿದ್ದೇವೆ. ಕೊರೊನಾ ಮುಂಜಾಗ್ರತೆಗಾಗಿ ಇ.ಎಸ್ ಐ ಆಸ್ಪತ್ರೆಯಲ್ಲಿ 200 ಬೆಡ್ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.

Latest Videos

ಭಾರತದಲ್ಲಿ ಕೊರೋನಾಗೆ ಮೊದಲ ಬಲಿ? ಕರ್ನಾಟಕದ ವ್ಯಕ್ತಿ ಸಾವು!

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 40 ಕ್ಕೂ ಹೆಚ್ಚು ಜನರಿಗೆ ಹೋಂ ಐಸೋಲೆಷನ್ ನೀಡಲಾಗಿದ್ದು, ಮೃತ ವೃದ್ದನ ಕುಟುಂಬ, ನೆರೆಮನೆಯವರು, ಆತನಿಗೆ ಚಿಕಿತ್ಸೆ ನೀಡಿದವರು ಹೀಗೆ 40 ಕ್ಕೂ ಹೆಚ್ಚು ಜನರಿಗೆ ಹೋಂ ಐಸೋಲೆಷನ್ ವಿಧಿಸಲಾಗಿದೆ.

ಕಲಬುರಗಿಯ ವೃದ್ಧನ ಸಾವಿಗೆ ಕರೋನಾ ಕಾರಣ ಅಲ್ಲ, ಮತ್ತಿನ್ಯಾರು?

ಯಾವುದೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳು ನಡೆಸದಂತೆ ಕ್ರಮ ವಹಿಸಲಾಗಿದ್ದು, ವೀಸಾ ನಿರ್ಭಂದ ಮಾಡಿರುವುದರಿಂದ ಕೊರೊನಾ ನಿಯಂತ್ರಣ ಇನ್ನೂ ಸುಲಭವಾಗಲಿದೆ. ಪ್ರವಾಸಿ ಸ್ಥಳಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ನೆಗಡಿ,ಕೆಮ್ಮು,ಜ್ವರ, ಉಸಿರಾಟದ ಸಮಸ್ಯೆ ಇದ್ದವರು ಜಾತ್ರೆ ಹಾಗೂ ಜನನಿಬಿಡ ಸ್ಥಳಕ್ಕೆ ಬರದಂತೆ ಮನವಿ ಮಾಡಲಾಗಿದೆ.

click me!