ಮಾಜಿ ದೇವದಾಸಿ ಮಕ್ಕಳ ಕಂಗಳಲ್ಲಿ ಹೊಸ ಕನಸು..!

By Suvarna News  |  First Published Mar 12, 2020, 5:25 PM IST

ಮಾಜಿ ದೇವದಾಸಿಯರ ಮಕ್ಕಳ ಕನಸುಗಳು ಜೀವ ಪಡೆದುಕೊಂಡಿವೆ.  ದೇವದಾಸಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಗಲಕೋಟೆ ನವನಗರದ ಕಲಾಭವನದಲ್ಲಿ ನಡೆದ ಮದುವೆ ನೆರವೇರಿದೆ.


ಬಾಗಲಕೋಟೆ(ಮಾ.12): ಮಾಜಿ ದೇವದಾಸಿಯರ ಮಕ್ಕಳ ಕನಸುಗಳು ಜೀವ ಪಡೆದುಕೊಂಡಿವೆ.  ದೇವದಾಸಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಗಲಕೋಟೆ ನವನಗರದ ಕಲಾಭವನದಲ್ಲಿ ನಡೆದ ಮದುವೆ ನೆರವೇರಿದೆ.

ಬಾಗಲಕೋಟೆಯಲ್ಲಿ ನವಜೀವನಕ್ಕೆ ಕಾಲಿಟ್ಟ ಮಾಜಿ ದೇವದಾಸಿ ಮಕ್ಕಳ ಕಣ್ಣಲ್ಲಿ ಹೊಸ ಕನಸುಗಳು ಹುಟ್ಟಿವೆ. 10 ಜೋಡಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮದುವೆ ಆಯೋಜನೆ ಮಾಡಲಾಗಿದೆ.

Tap to resize

Latest Videos

ಮುಕ್ತಿ ಬಾವುಟ 26 ಲಕ್ಷಕ್ಕೆ ಹರಾಜು, ನಾಯಕನಹಟ್ಟಿ ಜಾತ್ರೆ ಹೀಗಿತ್ತು..!

ಬಾಗಲಕೋಟೆ ನವನಗರದ ಕಲಾಭವನದಲ್ಲಿ ಮದುವೆ ನಡೆದಿದ್ದು, ಮಾಜಿ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಅರಿಶಿನ, ತಾಳಿ ನೀಡಿ ಹರಿಸಿದ್ಧಾರೆ. ಮದುವೆ ಶಾಸ್ತ್ರೋಕ್ತವಾಗಿ ನಡೆದಿದೆ.

ಮದುವೆ ಕಾರ್ಯದಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಪಂ ಸಿಇಒ ಗಂಗೂಬಾಯಿ ಮಾನಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಎರಡನೆ ವರ್ಷ ನಿರಂತರವಾಗಿ ಮಾಜಿ ದೇವದಾಸಿ ಮಕ್ಕಳಿಗೆ ಮದುವೆ ಆಯೋಜನೆ ಮಾಡಲಾಗಿದೆ. ಹೋಳಿ ಹಬ್ಬದಲ್ಲಿ ಮದುವೆಯಾಗಬಾರೆಂದ ಮೌಢ್ಯಕ್ಕೆ ಜಿಲ್ಲಾಡಳಿತ ಸೆಡ್ಡು ಹೊಡೆದಿದೆ. ಕಾರ್ಯಕ್ರಮಕ್ಕೆ ಆಗಮಿಸಿರೋ ನೂರಾರು ಜನರು ಭಾಗಿಯಾಗಿದ್ದಾರೆ.

click me!