Holi Festival: ಹೋಳಿ ರಂಗಿನಾಟದ ಸೋಗಿನ ಬಂಡಿಗಳಲ್ಲೂ ಡಾ. ಪುನೀತ್ ಎಫೆಕ್ಟ್

Suvarna News   | Asianet News
Published : Mar 19, 2022, 06:33 PM ISTUpdated : Mar 19, 2022, 06:50 PM IST
Holi Festival: ಹೋಳಿ ರಂಗಿನಾಟದ ಸೋಗಿನ ಬಂಡಿಗಳಲ್ಲೂ ಡಾ. ಪುನೀತ್ ಎಫೆಕ್ಟ್

ಸಾರಾಂಶ

* ಮೆರವಣಿಗೆ ಮೂಲಕ ಕಾಮಣ್ಣನನ್ನ ಹೊತ್ತೊಯ್ಯೋ ಹುಡುಗ್ರು. * ಈ ಕಾಮಣ್ಣನಿಗೆ ಮನೆ ಮನೆಯಲ್ಲಿ ಕಡುಬು, ಹೋಳಿಗೆಯೇ ನೈವೇದ್ಯ. * ಊ ಅಂತಿಯಾ ಮಾವಾ, ಊಹು ಅಂತಿಯಾ ಎಂಬ ಹಾಡಿಗೆ ಹುಡುಗಿಯರ ಬೋಲ್ಡ್ ಸ್ಟೆಪ್.

ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ 

ಬಾಗಲಕೋಟೆ (ಮಾ.19): ನಾಡಿನಾದ್ಯಂತ ಹೋಳಿ ಹಬ್ಬದ (Holi Festival) ಸಂಭ್ರಮ ಮನೆ ಮಾಡಿರುವ ಮಧ್ಯೆ ದೇಶದಲ್ಲಿ ಅತಿ ಹೆಚ್ಚು ಹೋಳಿಯಾಡುವ 2ನೇ ನಗರ ಎಂಬ ಖ್ಯಾತಿಯ ಬಾಗಲಕೋಟೆಯಲ್ಲಿ 2ನೇ ದಿನದ ಹೋಳಿ ರಂಗಿನಾಟ ಭಜ೯ರಿಯಾಗಿ ಮುಂದುವರೆದಿದ್ದು, ಇವುಗಳ ಮಧ್ಯೆ ಸೋಗಿನ ಬಂಡಿಗಳ ಪ್ರದಶ೯ನ ಜೋರಾಗಿದ್ದು, ಹೋಳಿ ಹಬ್ಬದಲ್ಲಿ ಅಭಿಮಾನಿಗಳು ಮಾತ್ರ ಪವರ್ ಸ್ಟಾರ್ ಅಪ್ಪು (Puneeth Rajkumar) ನನ್ನ ಮಾತ್ರ ಮರೆತಿಲ್ಲ. ಹೌದು! ಸಾಮಾನ್ಯವಾಗಿ ಬಾಗಲಕೋಟೆಯಲ್ಲಿ 5 ದಿನಗಳವರೆಗೆ ನಡೆಯುವ ಸಾಂಪ್ರದಾಯಿಕ ಹೋಳಿ ಆಚರಣೆ ಜೊತೆಗೆ 3 ದಿನದ ಬಣ್ಣದಾಟದ ಮಧ್ಯೆ ಪ್ರತಿನಿತ್ಯ ರಾತ್ರಿ ಸೋಗಿನ ಬಂಡಿಗಳ ಪ್ರದಶ೯ನ ಭಜ೯ರಿಯಾಗಿ ನಡೆಯುತ್ತಿದೆ.

ಪ್ರತಿವಷ೯ ಸೋಗಿನಬಂಡಿಗಳಲ್ಲಿ ದೇಶಭಕ್ತಿ ಸಾರುವ ಚಿತ್ರಣಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ಸಂಸ್ಕೃತಿಗಳ ಸಂದೇಶ ಸಾರುವ ಪ್ರದಶ೯ನ ಮಾಡುತ್ತಾರೆ. ಆದರೆ ಈ ಬಾರಿ ವಿಶೇಷವಾಗಿ ಅಪ್ಪು ಅವರ ನೆನಪನ್ನು ಮರಕಳಿಸುವಂತಹ ಮಾದರಿ ವ್ಯಕ್ತಿಯನ್ನು ಸೋಗಿನ ಬಂಡಿಯಲ್ಲಿ ಪ್ರದಶ೯ನ ಮಾಡಲಾಯಿತು. ಅಪ್ಪು ಗೆಟಪ್ ಹೊಂದಿದ ವ್ಯಕ್ತಿ ಎಲ್ಲರತ್ತ  ಕೈಮುಗಿಯುತ್ತಾ , ಕೆಲವೊಮ್ಮೆ ನೃತ್ಯದ ಮೂಲಕ ಗಮನ ಸೆಳೆದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡುತ್ತಿದ್ದ ಪ್ರೇಕ್ಷಕರಿಗೆ ಮತ್ತಷ್ಟು ಆಕಷ೯ಣೆಯ ಕೇಂದ್ರ ಬಿಂದುವಾಗಿತ್ತು.

ಸಿದ್ದು-ಡಿಕೆಶಿ ಶೀತಲ ಸಮರ: ಸಿಎಂ ಅಭ್ಯರ್ಥಿ ಘೋಷಣೆ ಈಗಿಲ್ಲ, ಇದು ಇತಿಹಾಸ ಎಂದ ಕಾಂಗ್ರೆಸ್ ನಾಯಕ

ಮನೆ ಮನೆ ದಶ೯ನ ನೀಡುವ ಕೆರೂರ ವಿಶೇಷ ಕಾಮಣ್ಣ: ಜಿಲ್ಲೆಯಾದ್ಯಂತ ವಿವಿಧ ಪಟ್ಟಣಗಳಲ್ಲಿ ಕಾಮಣ್ಣ ಮೂತಿ೯ಯ ಪ್ರತಿಷ್ಠಾಪನೆ ಮಾಡಿ ನಂತರ ದಹನ ಮಾಡಲಾಗುತ್ತದೆ. ಅದರಂತೆ ಹೋಳಿ ಹುಣ್ಣಿಮೆದಂದು ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಕಾಮಣ್ಣನ ಮೂತಿ೯ಯನ್ನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರ ಹೋಳಿ ಹುಣ್ಣಿಮೆಯ ಮರುದಿನ ಯುವಕರೆಲ್ಲಾ ಸೇರಿ ಊರು ತುಂಬ ಮೆರವಣಿಗೆ ಮಾಡುತ್ತಾ ಬಾಯಿ ಬಾಯಿ ಬಡಿದುಕೊಂಡು ಓಡಾಡ್ತಾರೆ. ಹೀಗೆ ಮೆರವಣಿಗೆ ಮಾಡುತ್ತಲೇ ಮನೆ ಮನೆಗೂ ಕಾಮಣ್ಣನ ದಶ೯ನ ಮಾಡಿಸ್ತಾರೆ.



ಆಗ ಮನೆ ಎದುರು ಬರುವ ಕಾಮಣ್ಣನಿಗೆ ಹೂರಣದಿಂದ ತಯಾರಿಸಿದ ಕಡುಬು, ಹೋಳಿಗೆಯನ್ನೇ ನೈವೇದ್ಯವಾಗಿ ನೀಡಲಾಗುತ್ತದೆ. ಇದರೊಟ್ಟಿಗೆ ಪ್ರತಿ ಮನೆಯವರೂ ಕಾಮದಹನಕ್ಕಾಗಿ ಕಟ್ಟಿಗೆ, ಸಗಣೆ ಕುಳ್ಳು ಹೀಗೆ ಎಲ್ಲವನ್ನ ನೀಡಿ ಜೊತೆಗೆ ಒಂದಿಷ್ಟು ತಮ್ಮ ಕೆಲಸ ದಷ್ಟು ಹಣ ನೀಡಿ ಕಳಿಸ್ತಾರೆ.‌ ನಂತರ ಜಾತಿ ಮತ ಮೀರಿ ಎಲ್ಲರೂ ಒಂದುಗೂಡಿ ಕಾಮದಹನ ಮಾಡುತ್ತಾರೆ. ಇನ್ನು ಕಾಮದಹನದಲ್ಲಿ ಬೆಂದ ಕಟ್ಟಿಗೆ ತುಂಡನ್ನೇ ಮನೆಗೆ ತಂದು ಅದರಿಂದಲೇ ಹೊತ್ತಿಸಿದ ಬೆಂಕಿಯಲ್ಲಿ ಕಡಲೆ ಬೇಯಿಸಿ ಮನೆಮಂದಿಯೆಲ್ಲಾ ತಿನ್ನುತ್ತಾರೆ. ಇಂತಹ ಸಂಪ್ರದಾಯದಿಂದ ಭವಿಷ್ಯದಲ್ಲಿ ಒಳಿತಾಗುತ್ತೇ ನಂಬಿಕೆ ಇಲ್ಲಿದೆ.

'ಮದ್ವೆ ಅಂತ ಬಂದಾಗ ಜಾತಿ, ಧರ್ಮದವರನ್ನೇ ಆಯ್ಕೆ ಮಾಡ್ಕೊಳ್ಳಿ, ಇಲ್ಲಂದ್ರೆ ನನಗಾದ ಸ್ಥಿತಿ ನಿಮ್ಗೂ ಆಗುತ್ತೆ'

2ನೇ ದಿನವೂ ಮುಂದುವರೆದ ಹೋಳಿ ಬಣ್ಣದಾಟ: ಹಳೇ ಬಾಗಲಕೋಟೆ ಪಟ್ಟಣ, ವಿದ್ಯಾಗಿರಿ, ನವನಗರ ಸೇರಿದಂತೆ ಎಲ್ಲೆಡೆ 2ನೇ ದಿನವೂ ಸಹ ಭಜ೯ರಿ ಬಣ್ಣದಾಟ ಮುಂದುವರೆದಿದ್ದು, ರೈನ್ ಡಾನ್ಸ್ ಗಮನ ಸೆಳೆಯಿತು. ಅತ್ತ ಹುಡುಗರೆಲ್ಲಾ ಸೇರಿ ಬಸಣ್ಣಿ ಬಾ ಅಂತ ಸ್ಟೆಪ್ ಹಾಕುತ್ತಿದ್ದರೆ, ಇತ್ತ ಹುಡುಗಿಯರು  ಊ ಅಂತಿಯಾ ಮಾವಾ, ಊಹು ಅಂತಿಯಾ ಎಂಬ ಹಾಡಿಗೆ ಭಜ೯ರಿಯಾಗಿ ಹೆಜ್ಜೆ ಹಾಕಿದ್ರು. ಇನ್ನುಳಿದಂತೆ ಜಿಲ್ಲೆಯಾದ್ಯಂತ ಹಲವೆಡೆ ಕಾಮದಹನದ ಜೊತೆಗೆ ಭಜ೯ರಿ ಬಣ್ಣದೋಕುಳಿ ನಡೆಯಿತು. ಮದ್ಯಾಹ್ನದ ವೇಳೆಗೆ ಬಸವೇಶ್ವರ ಕಾಲೇಜ್ ಕ್ಯಾಂಪಸ್ ಎದುರು ರಸ್ತೆಯಲ್ಲಿ ಬಣ್ಣದ ಬಂಡಿಗಳ ಮೂಲಕ ಪರಸ್ಪರ ಬಣ್ಣದ ಎರಚಾಟ ಕಂಡು ಬಂತು.  ಒಟ್ಟಿನಲ್ಲಿ ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಎರಡನೇ ದಿನವೂ ಹೋಳಿ ಬಣ್ಣದಾಟ, ಸೋಗಿನ ಬಂಡಿಗಳಾಟ ಜೊತೆಗೆ ಬಣ್ಣದ ಬಂಡಿ ಸೇರಿದಂತೆ ರೇನ್ ಡಾನ್ಸ್ ಗಮನ ಸೆಳೆದಿದ್ದು, ನಾಳೆ ಸಂಜೆ ಹೋಳಿ ಬಣ್ಣದಾಟಕ್ಕೆ ತೆರೆಬೀಳಲಿದೆ.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ