ಪ್ರತಿಯೊಬ್ಬರೂ ನಮ್ಮ ಕನ್ನಡ ನಾಡಿನ ಜಲ, ನೆಲದ ಭಾಷೆಯ ಕುರಿತು ಹಾಗೂ ಕನ್ನಡ ಭಾಷೆಯ ಉಳುವಿಗಾಗಿ ಹೋರಾಟ ಮಾಡಿರುವ ಮಹನೀಯರ ಕುರಿತ ಇತಿಹಾಸ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಾಧಿಕಾರಿ ಎನ್. ಸೋಮಶೇಖರ್ ತಿಳಿಸಿದರು.
ತುರುವೇಕೆರೆ : ಪ್ರತಿಯೊಬ್ಬರೂ ನಮ್ಮ ಕನ್ನಡ ನಾಡಿನ ಜಲ, ನೆಲದ ಭಾಷೆಯ ಕುರಿತು ಹಾಗೂ ಕನ್ನಡ ಭಾಷೆಯ ಉಳುವಿಗಾಗಿ ಹೋರಾಟ ಮಾಡಿರುವ ಮಹನೀಯರ ಕುರಿತ ಇತಿಹಾಸ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಾಧಿಕಾರಿ ಎನ್. ಸೋಮಶೇಖರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯ, ಶಾಲಾಇಲಾಖೆ, ಪ್ರೌಢಶಾಲಾ ಕನ್ನಡ ಭಾಷಾ ಭೋಧಕರ ಸಂಘ ಹಾಗೂ ಸರ್ಕಾರಿ ಪ್ರೌಢಶಾಲಾ ವಿಭಾಗ ಸಂಯುಕ್ತಾಶ್ರಯದಲ್ಲಿ ಸೋಮವಾರ 68 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಶೈಕ್ಷಣಿಕ ಕಾರ್ಯಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
undefined
ನಮ್ಮ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿತ್ತು ಎಂಬ ಇತಿಹಾಸವಿದೆ.1956 ರಲ್ಲಿ ನವಂಬರ್ 1 ರಂದು ರಾಜ್ಯವನ್ನು ಏಕೀಕರಣ ಮಾಡಲಾಯಿತು. 1982 ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯನ್ನಾಗಬೇಕೆಂದು ಕನ್ನಡವನ್ನು ಆಡಳಿತ ಭಾಷೆಯನ್ನು ಮಾಡಿದರು ಎಂದ ಅವರು, ಕನ್ನಡ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಕರು ತಿಳಿಸಿಕೊಡಬೇಕು ಎಂದರು.
ಈ ಸಂಧರ್ಭದಲ್ಲಿ ಎಸ್ಎಸ್ಎಲ್‌ಸಿ ಕನ್ನಡದ ವಿಷಯದಲ್ಲಿ125 ಕ್ಕೆ125 ಅಂಕ ಗಳಿಸಿದ ೨೩ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶೇ.100 ರಷ್ಟು ಫಲಿತಾಂಶ ಬಂದಂತ ಶಾಲಾ ಶಿಕ್ಷಕರು, ತಾಲೂಕಿನ ಅತ್ಯತ್ತಮ ಶಿಕ್ಷಕರಾದ ಸರ್ಕಾರಿ ಪ್ರೌಢಶಾಲಾ ಕನ್ನಡ ಶಿಕ್ಷಕ ಎಸ್.ಬಿ.ಕುಮಾರ್, ಡಾಕ್ಟರೇಟ್ ಪಡೆದ ಕನ್ನಡ ಶಿಕ್ಷಕ ಪಾಂಡುರಂಗಯ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನಾಡು ನುಡಿ ಕುರಿತು ಪ್ರಗತಿಪರ ಲೇಖಕಿ ಹಾಗೂ ಸಾಹಿತಿ ಆರ್.ಎ. ವಿಜಯಲಕ್ಷ್ಮೀ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ.ರಾಜು, ಗೌರವಾಧ್ಯಕ್ಷರಾದ ಟಿ.ಎಸ್. ಬೋರೇಗೌಡ, ದಾನಿಗಳಾದ ಕೆ.ಬಿ. ಜ್ಯೋತಿ, ಬೆಸ್ಕಾಂ ಗುತ್ತಿಗೆದಾರ ಕೆ.ಬಿ. ಮಲ್ಲಿಕ್, ಕ್ಷೇತ್ರ ಸಮನ್ವಯಧಿಕಾರಿ ಜೆ.ಎಚ್. ವೀಣಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜೆ.ಆರ್. ರವಿಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಜೆ.ಬಿ. ವೆಂಕಟೇಶ್, ಕನ್ನಡ ಭಾಷಾ ಭೋಧಕರ ಸಂಘದ ಅಧ್ಯಕ್ಷ ಎಚ್.ಎಂ. ರಂಗಸ್ವಾಮಿ, ಮಾಜಿ ಅಧ್ಯಕ್ಷ ಎಲ್. ಮಂಜಯ್ಯಗೌಡ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ. ಗುರುರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಮಾಜಿ ಅಧ್ಯಕ್ಷ ಬಸವರಾಜು, ರೋಟರಿ ಕ್ಲಬ್ ಅಧ್ಯಕ್ಷ ರಾಜಪ್ಪ, ಕನ್ನಡ ಉಪನ್ಯಾಸಕ ಜಿ.ಎಸ್. ಹರ್ಷ ಹಾಗೂ ಕನ್ನಡ ಭಾಷ ಭೋಧಕರ ಸಂಘದ ಪದಾಧಿಕಾರಿಗಳಾದ ಎಸ್.ಬಿ.ಕುಮಾರ್, ಕೆ.ಟಿ.ಸಂಪತ್ತು, ಎಚ್.ಬಿ. ಪ್ರಕಾಶ್, ಪ್ರಭು, ಎ.ಎಸ್. ನಾಗರಾಜು, ಕೌಸಲ್ಯ, ಎಲ್. ಲಕ್ಷ್ಮಣ, ಎಚ್.ಪಿ. ಸೋಮಶೇಖರ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.