ಕೆರೆಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ಧಿ. ಜತೆಗೆ ಕೆರೆಕಟ್ಟೆ ಉಳಿಸಿ, ಕೃಷಿ, ಜನ-ಜಾನುವಾರುಗಳಿಗೂ ಅನುಕೂಲವಾಗಲಿವೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯ ಪವಿತ್ರವಾದದ್ದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ತಿಪಟೂರು : ಕೆರೆಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ಧಿ. ಜತೆಗೆ ಕೆರೆಕಟ್ಟೆ ಉಳಿಸಿ, ಕೃಷಿ, ಜನ-ಜಾನುವಾರುಗಳಿಗೂ ಅನುಕೂಲವಾಗಲಿವೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯ ಪವಿತ್ರವಾದದ್ದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ರಂಗಾಪುರ ವಲಯದ ಅನಗೊಂಡನಹಳ್ಳಿ ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು, ನಮ್ಮ ಕೆರೆ ಕಾರ್ಯಕ್ರಮದಡಿ 373ನೇ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೂರ್ವಿಕರು ಕೆರೆ ಕಟ್ಟೆ ಹೂಳೆತ್ತುವ ಮೂಲಕ ಹಲವು ವರ್ಷಗಳು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅಂತರ್ಜಲ ವೃದ್ಧಿಯಾಗಿ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಕಾಲ ಬದಲಾದಂತೆ ವೈಜ್ಞಾನಿಕವಾದ ಕೆಲ ಕ್ರಮಗಳಿಂದ ಅಂತರ್ಜಲ ಬತ್ತಿ ಹೋಗುತ್ತಿರುವುದಲ್ಲದೆ, ಅನೇಕ ಭಾಗಗಳಲ್ಲಿ ಕೆರೆಕಟ್ಟೆಗಳೆ ಇಲ್ಲದಂತಾಗಿದ್ದು, ಕೆರೆಗಳ ಹೂಳೆತ್ತುವ ಕೆಲಸ ಯಾರೂ ಮಾಡುತ್ತಿಲ್ಲ. ಸರ್ಕಾರದ ಜೊತೆಗೆ ಇಂತಹ ಸಂಘ ಸಂಸ್ಥೆಗಳು ನೆರವು ನೀಡಿದಾಗ ಮತ್ತಷ್ಟು ಅಭಿವೃದ್ಧಿ ಸಾಧ್ಯ. ಧರ್ಮಸ್ಥಳ ಯೋಜನೆಯು ಕೆರೆಗಳ ಪುನಶ್ಚೇತನ ಸೇರಿದಂತೆ ಅನೇಕ ಯೋಜನೆ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
undefined
ಕೆರೆಕಟ್ಟೆ ಅಭಿವೃದ್ಧಿಪಡಿಸುವ ಕಾರ್ಯ ಅತ್ಯಂತ ಪವಿತ್ರವಾಗಿದ್ದು, ಕೆರೆಯಲ್ಲಿ ನೀರು ಶೇಖರಣೆಯಾದರೆ ಅಂತರ್ಜಲ ವೃದ್ಧಿಯಾಗಿ ಸಾವಿರಾರು ರೈತರು, ಜಾನುವಾರು, ಪಶುಪಕ್ಷಿ, ಮರಗಿಡ ಬದುಕುವ ಮೂಲಕ ಉತ್ತಮ ಪರಿಸರ ಸೃಷ್ಟಿಯಾಗುವುದರಿಂದ ಈ ಭಾಗದ ರೈತರು ಕೆರೆಯ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದರು.
ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ಮಾತನಾಡಿ, ಯೋಜನೆಯು ಕಳೆದ ಹತ್ತು ವರ್ಷದಲ್ಲಿ ರಾಜ್ಯದ 750 ಕೆರೆ ಪುನಶ್ಚೇತನ ಮಾಡಲಾಗಿದ್ದು, ಅದರಲ್ಲಿ ತುಮಕೂರು ಜಿಲ್ಲೆಯಲ್ಲಿ 50 ಕೆರೆ ಪುನಶ್ಚೇತನ ಮಾಡಲಾಗಿದೆ. ತಿಪಟೂರು ತಾಲೂಕಿನಲ್ಲಿ ಒಟ್ಟು 7 ಕೆರೆ ಅಭಿವೃದ್ಧಿ ಪಡಿಸಲಾಗಿದ್ದು, ಈ ಕೆರೆಗಳನ್ನು ಕೆರೆ ಸಮಿತಿ ಅಧ್ಯಕ್ಷರಿಂದ ಪಂಚಾಯತಿಗೆ ಹಸ್ತಾಂತರಿಸಿ ಕೆಲವು ಜವಾಬ್ದಾರಿ ನೀಡಲಾಗುವುದು ಎಂದರು.
ಪುನಶ್ಚೇತನಗೊಂಡ ಕೆರೆ ಒತ್ತುವರಿ ಮಾಡಬಾರದು, ಪ್ಲಾಸ್ಟಿಕ್, ಅನಪೇಕ್ಷಿತ ವಸ್ತು, ಸತ್ತ ಪ್ರಾಣಿಗಳನ್ನು ಎಸೆಯಬಾರದು. ಬಟ್ಟೆ ತೊಳೆಯಬಾರದು. ಕೆರೆ ಸುತ್ತ ಗಿಡ ಬೆಳೆಸಬೇಕು. ದನ ಕರು, ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿಗೆ ಆಸರೆಯಾಗಲಿವೆ. ಆಯಾ ಗ್ರಾಮಗಳ ರೈತರು ಹಾಗೂ ಯುವಕರು ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೆರೆ ತುಂಬಿದಾಗ ಬಾಗಿನ ಅರ್ಪಿಸಬೇಕು. ಕೆರೆಗಳು ವರದಾನವಾಗಿದ್ದು, ಸಂರಕ್ಷಣಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ತಾಲೂಕು ಯೋಜನಾಧಿಕಾರಿ ಸುರೇಶ್, ರಂಗಾಪುರ ಗ್ರಾ.ಪಂ. ಅಧ್ಯಕ್ಷೆ ಮಮತಾ, ಪಿಡಿಒ ಶಂಕರ್ ಬೀಳೂರು, ಕೆರೆ ಸಮಿತಿ ಅಧ್ಯಕ್ಷ ಪ್ರಭುಸ್ವಾಮಿ, ಕೆರೆ ಎಂಜಿನಿಯರ್ ಅರುಣ್, ಕೃಷಿ ಮೇಲ್ವಿಚಾರಕರಾದ ಪ್ರದೀಪ್, ಪ್ರಮೋದ್, ವಲಯ ಮೇಲ್ವಿಚಾರಕ ಅಣ್ಣಪ್ಪ, ಸೇವಾ ಪ್ರತಿನಿಧಿ ರೂಪಾ ಭಾಗವಹಿಸಿದ್ದರು.