Chikkaballapura: ಹಿಂದೂಗಳು ಕೋಮುವಾದಿಗಳಲ್ಲ ಜಾತ್ಯತೀತರು

By Kannadaprabha News  |  First Published Oct 24, 2022, 5:47 AM IST

ಮತಾಂತರ ದೇಶಕ್ಕೆ ಗಂಡಾಂತರವಾಗಿದ್ದು, ಅಸ್ಪೃಶ್ಯತೆಯ ಆಚರಣೆ ಪಾಪದ ಕೆಲಸ. ಆದ್ದರಿಂದ ಜಾತಿ, ಸಂಪ್ರದಾಯಗಳನ್ನು ಬದಿಗೊತ್ತಿ ಹಿಂದೂ ಸಮಾಜ ಒಗಟ್ಟು ಪ್ರದರ್ಶಿಸಬೇಕಿದೆಂದು ಆರ್‌ಎಸ್‌ಎಸ್‌ನ ಹಿರಿಯ ನಾಯಕ ಕಲಡ್ಕ ಪ್ರಭಾಕರ್‌ ಭಟ್‌ ತಿಳಿಸಿದರು.


 ಚಿಕ್ಕಬಳ್ಳಾಪುರ (ಅ.24);  ಮತಾಂತರ ದೇಶಕ್ಕೆ ಗಂಡಾಂತರವಾಗಿದ್ದು, ಅಸ್ಪೃಶ್ಯತೆಯ ಆಚರಣೆ ಪಾಪದ ಕೆಲಸ. ಆದ್ದರಿಂದ ಜಾತಿ, ಸಂಪ್ರದಾಯಗಳನ್ನು ಬದಿಗೊತ್ತಿ ಹಿಂದೂ ಸಮಾಜ ಒಗಟ್ಟು ಪ್ರದರ್ಶಿಸಬೇಕಿದೆಂದು ಆರ್‌ಎಸ್‌ಎಸ್‌ನ ಹಿರಿಯ ನಾಯಕ ಕಲಡ್ಕ ಪ್ರಭಾಕರ್‌ ಭಟ್‌ ತಿಳಿಸಿದರು.

ನಗರದ ಖಾಸಗಿ (Bus)  ನಿಲ್ದಾಣದಲ್ಲಿ ಭಾನುವಾರ ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ  (RSS) ಪಥ ಸಂಚಲನ ಬಳಿಕ ಹಮ್ಮಿಕೊಂಡಿದ್ದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮತೀಯ ಹೆಸರಲ್ಲಿ ದೇಶ ವಿಭಜನೆ ಮಾಡಬೇಕಾದರೆ ಮುಸ್ಲಿಂರನ್ನು ಪಾಕ್ತಿಸ್ತಾನಕ್ಕೆ ಕಳುಹಿಸಬೇಕೆಂದರು.

Tap to resize

Latest Videos

ದಲಿತರನ್ನು ಹೊರಗಿಟ್ಟಿರುವುದು ಪಾಪ

ಮಹಾನ್‌ ವ್ಯಕ್ತಿ ಅಂಬೇಡ್ಕರ್‌ ಹುಟ್ಟಿದ ಸಮಾಜವನ್ನು ನಾವು ಹೊರಗೆ ಇಟ್ಟಿದ್ದೇವೆ. ಇದು ಪಾಪದ ಕೆಲಸ, ನಮ್ಮ ತಾಯಿ ಸಂಸ್ಕೃತಿ, ಎಲ್ಲಾ ಜಾತಿ, ಜನಾಂಗವನ್ನು ಒಟ್ಟಿಗೆ ಕರೆದುಕೊಂಡು ಹೋಗುವುದೇ ಹಿಂದೂ ಸಮಾಜ, ನಮ್ಮ ಕುಟುಂಬ ಪದ್ಧತಿ, ಯೋಗ, ಆರ್ಯುವೇದವನ್ನು ಜಗತ್ತಿನ ಇತರೇ ರಾಷ್ಟ್ರಗಳು ಅವಲಂಬಿಸುತ್ತಿವೆ. ಒಂದು ಸದೃಢವಾದ ಶಕ್ತಿಶಾಲಿ ಹಿಂದೂ ಸಮಾಜ ಕಟ್ಟಬೇಕಾದರೆ ಜಾತಿ, ಸಂಪ್ರದಾಯಗಳನ್ನು ಬದಿಗೊತ್ತಿ ಹಿಂದುಗಳು ಒಂದಾಗಬೇಕೆಂದರು.

ಹಿಂದೂಗಳು ಕೋಮುವಾದಿಗಳು ಅಲ್ಲ. ಅಪ್ಪಟ್ಟಜಾತ್ಯತೀತರೆಂದ ಕಲಡ್‌್ಕ ಪ್ರಭಾಕರ್‌, ಮತಾಂತರಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಮೋಸ, ವಂಚನೆ, ಬಲತ್ಕಾರ ಮತಾಂತರಕ್ಕೆ ನಮ್ಮ ವಿರೋಧ ಇದೆ. ಆರ್ಥಿಕ, ಶೈಕ್ಷಣಿಕವಾಗಿ ದುರ್ಬಲರಾಗಿರುವ ಪರಿಶಿಷ್ಟಸಮುದಾಯಗಳಿಗೆ ನಾವು ಬಲ ಕೊಡಬೇಕೆಂದರ. ನಮ್ಮ ಶ್ರದ್ದೆ, ಭಾವನೆಗಳಿಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೆಚ್ಚಾಗುತ್ತಿರುವ ಜನಸಂಖ್ಯೆಯಲ್ಲಿನ ಅಸಮತೋಲನ ಕಾರಣ. ಎಡಪಂಥಿಯರು ನಮ್ಮ ಹಿಂದೂ ಸಮಾಜವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕೂಡ ಇದ್ದಾರೆಂದು ಆರೋಪಿಸಿದರು.

ವಿಛಿದ್ರಕಾರಿ ಶಕ್ತಿಗಳು ಬಗ್ಗೆ ಎಚ್ಚರ ಇರಲಿ

ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಮಾತನಾಡಿ, ಧರ್ಮ ಇರುವುದು ಮನುಷ್ಯ ಸ್ಥಿರ ಜೀವನಕ್ಕಾಗಿ, ಆದರೆ ಇದನ್ನು ಚಂಚಲಗೊಳಿಸಿ. ತಲ್ಲಣಗೊಳಿಸುವ ಕೆಲಸವನ್ನು ಕೆಲ ವ್ಯಕ್ತಿಗಳು ಹಾಗೂ ವಿಛಿದ್ರಕಾರಿ ಶಕ್ತಿಗಳು ಮಾಡುತ್ತಿವೆಯೆಂದು ಡೀಸಿ ಕಳವಳ ವ್ಯಕ್ತಪಡಿಸಿದರು. ಆಯಾ ಧರ್ಮದವರು ಪರಧರ್ಮಗಳನ್ನು ಗೌರವಿಸಿ ನಡೆದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಂದರು.

ಸಮಾರೋಪಕ್ಕೂ ಮೊದಲು ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ನೂರಾರು ಮಂದಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿ ಗಮನ ಸೆಳೆದರು. ವೇದಿಕೆಯಲ್ಲಿ ಕೋಲಾರದ ಪ್ರಾಂತೀಯ ಪ್ರಚಾರಕ ಡಾ.ಶಂಕರ್‌ನಾಯಕ್‌ ಇದ್ದರು.

ಮತಾಂತರ, ಒಳನುಸುಳುವಿಕೆಯಿಂದ ಅಸಮಾನತೆ

  ದೇಶದಲ್ಲಿ ನಡೆಯುತ್ತಿರುವ ಮತಾಂತರ ಮತ್ತು ಬಾಂಗ್ಲಾದೇಶದಿಂದ ವಲಸೆಗಾರರ ಒಳನುಸುಳುವಿಕೆಯಿಂದ ದೇಶದಲ್ಲಿ ಜನಸಂಖ್ಯಾ ಅಸಮಾನತೆ ಉಂಟಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಪ್ರಧಾನ ಕಾರ‍್ಯದರ್ಶಿ ದತ್ತಾತ್ರೇಯ ಹೊಸಬಾಳೆ ಬುಧವಾರ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ 4 ದಿನದ ಕಾರ‍್ಯಕಾರಿ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು ಮತಾಂತರ ನಿಷೇಧ ಕಾಯ್ದೆಯನ್ನು ಕಠಿಣವಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಆರ್‌ಎಸ್‌ಎಸ್‌ ಮತಾಂತರದ ಕುರಿತಾಗಿ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲಾಗುವುದು. ಧಾರ್ಮಿಕ ಮತಾಂತರವನ್ನು ತಡೆಗಟ್ಟಲು ಈಗಿರುವ ಕಾನೂನನ್ನು ಕಠಿಣವಾಗಿ ಜಾರಿ ಮಾಡಬೇಕು. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಇದನ್ನು ಜಾರಿ ಮಾಡಲಾಗಿದೆ. ಬಲವಂತವಾಗಿ ಅದರಲ್ಲೂ ಮದುವೆಯ ಮೂಲಕ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಬಡತನ, ನಿರುದ್ಯೋಗವೆಂಬ ರಾಕ್ಷಸರನ್ನು ಸಂಹರಿಸಬೇಕು: RSS ನಾಯಕ ದತ್ತಾತ್ರೇಯ ಹೊಸಬಾಳೆ

ಜನಸಂಖ್ಯಾ ಅಸಮಾನತೆಗೆ ವಲಸೆಗಾರರ ಒಳನುಸುಳುವಿಕೆ ಮತಾಂತರದ ಬಳಿಕ ಅತಿ ದೊಡ್ಡ ಸವಾಲಾಗಿದೆ. ಬಾಂಗ್ಲಾದೇಶದಿಂದ ಪುರ್ನಿಯಾ ಮತ್ತು ಕತಿಹಾರ್‌ ಸೇರಿದಂತೆ ಉತ್ತರ ಬಿಹಾರದ ಹಲವು ಜಿಲ್ಲೆಗಳು ಮತ್ತು ಇತರ ರಾಜ್ಯಗಳು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

click me!