ಮಠಗಳಿಂದಾಗಿಯೇ ಹಿಂದೂ ಧರ್ಮ ಉಳಿವು: ಪ್ರಮೋದ್‌ ಮುತಾಲಿಕ್‌

By Kannadaprabha News  |  First Published Nov 9, 2022, 7:45 AM IST
  • ಮಠಗಳಿಂದಾಗಿಯೇ ಹಿಂದೂ ಧರ್ಮ ಉಳಿವು: ಪ್ರಮೋದ್‌ ಮುತಾಲಿಕ್‌
  •  ಕಡೇನಂದಿಹಳ್ಳಿ ಶ್ರೀಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಕೋಟಿ ಶಿವಪಂಚಾಕ್ಷರಿ ಮಹಾಮಂತ್ರದ ಜಪಯಜ್ಞ ಮಂಗಲ ಧರ್ಮ ಸಮಾರಂಭ

ಶಿಕಾರಿಪುರ (ನ.8) : ಹಿಂದೂ ಧರ್ಮ ಉಳಿದು ಬೆಳೆದು ಬಂದಿದ್ದರೆ ಅದಕ್ಕೆ ಮಠಗಳು ನಡೆಸುತ್ತಿರುವ ಆಧ್ಯಾತ್ಮಿಕ ಚಟುವಟಿಕೆಗಳು ಕಾರಣವಾಗಿವೆ. ಶಿಕ್ಷಣ ದಾಸೋಹ ನೀಡುವ ಮೂಲಕ ನಾಡಿನಲ್ಲಿ ಸರ್ಕಾರದಿಂದ ಅಸಾದ್ಯವಾದ ಕಾರ್ಯವನ್ನು ವೀರಶೈವ ಮಠಗಳು ಸಾಧಿಸಿ ತೋರಿಸುತ್ತಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿದರು.

ಹಿಂದುತ್ವಕ್ಕೆ ಅವಹೇಳನ: ಸತೀಶ್‌ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮನವಿ

Tap to resize

Latest Videos

ತಾಲೂಕಿನ ಕಡೇನಂದಿಹಳ್ಳಿಯ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಒಂದು ಕೋಟಿ ಶಿವಪಂಚಾಕ್ಷರಿ ಮಹಾಮಂತ್ರದ ಜಪಯಜ್ಞ ಮಂಗಲ ಪ್ರಯುಕ್ತ ನಡೆದ ಧರ್ಮ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, 800 ವರ್ಷ ಮುಸ್ಲಿಮರು 200 ವರ್ಷ ಕ್ರಿಶ್ಚಿಯನ್ನರು ಈ ದೇಶವನ್ನು ನಿರಂತರ ಲೂಟಿ ಮಾಡಿದರೂ ಸಹ ಶ್ರೇಷ್ಠ ಸಂಸ್ಕೃತಿಯ ಈ ದೇಶದಲ್ಲಿ ಹಿಂದೂ ಧರ್ಮ ಉಳಿದು ಬಂದಿದೆ ಎಂದರು.

ಮಮ್ಮಿ ಡ್ಯಾಡಿ ಸಂಸ್ಕೃತಿ ಅಳಿಯಬೇಕು ಅಮ್ಮ ಅಪ್ಪ ಸಂಸ್ಕೃತಿ ಬೆಳೆಯಬೇಕು. ಪ್ರತಿಯೊಂದು ವಸ್ತುವಿನಲ್ಲಿಯೂ ತಾಯಿಯನ್ನು ದೇವರನ್ನು ಕಂಡ ದೇಶ ನಮ್ಮದು. ಸ್ವಾಭಿಮಾನ ಸಂಘಟನೆಯ ಕೊರತೆಯಿಂದಾಗಿ 1986- 1990ರ ಅವಧಿಯಲ್ಲಿ 7 ಲಕ್ಷ ಕಾಶ್ಮೀರಿ ಪಂಡಿತರು ಪಲಾಯನ ಮಾಡುವ ಸ್ಥಿತಿ ಬಂದಿತು. ಹಿಂದೂಗಳೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಧರ್ಮ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ರಾಷ್ಟ್ರ ಧರ್ಮಕ್ಕಾಗುವ ಆಘಾತವನ್ನು ತಡೆಗಟ್ಟಬೇಕು. ಯುವಕರನ್ನು ಜನತೆಯನ್ನು ಹಾಳು ಮಾಡುತ್ತಿರುವ ಸಾರಾಯಿ ಅಂಗಡಿಗಳು ಗ್ರಾಮ ಗ್ರಾಮಗಳಲ್ಲಿ ಹುಟ್ಟುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ್ದ ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಕ್ತರ ಒಳಿತಿಗೆ, ಅಭಿವೃದ್ಧಿಗೆ, ಕಲ್ಯಾಣಕ್ಕಾಗಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ತಪಸ್ಸು ಮಾಡುತ್ತಿದ್ದಾರೆ. ಶೂನ್ಯವಾಗಿದ್ದ ಈ ಕ್ಷೇತ್ರದಲ್ಲಿ ಶ್ರೀಗಳ ತಪೋಬಲದಿಂದ ಅದ್ಭುತ ಕೆಲಸಗಳು ನಡೆದಿವೆ. ಭಕ್ತವರ್ಗದ ಶ್ರಮ ಸಮೂಹದ ಬೆಂಬಲ ಕಾರಣವಾಗಿವೆ. ಗುರು-ಶಿಷ್ಯರ ಸಂಬಂಧ ಇಲ್ಲಿ ಗಟ್ಟಿಯಾಗಿದೆ. ಪ್ರತಿಯೊಬ್ಬರೂ ಗುರುವಿನಲ್ಲಿ ನಿಷ್ಠೆ ಹೊಂದಿ ಮುನ್ನಡೆಯಬೇಕು ಎಂದರು.

ಕಡೇನಂದಿಹಳ್ಳಿಯ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ. ಭಕ್ತರು ತೋರಿಸುತ್ತಿರುವ ಶ್ರದ್ಧಾ ಮನೋಭಾವ,ಪ್ರೀತಿ ವಿಶ್ವಾಸದಿಂದ ಈ ಕ್ಷೇತ್ರ ಬೆಳೆಯುತ್ತಿದೆ. ಭಕ್ತರೇ ಶ್ರೀ ಮಠದ ಆಸ್ತಿಯಾಗಿದ್ದಾರೆ. 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲಮೂರ್ತಿ ಪ್ರತಿಷ್ಠಾಪಿಸುವ ಕೆಲಸ ನಡೆದಿದೆ ಎಂದರು.

ವೇದಿಕೆಯಲ್ಲಿ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚನ್ನಗಿರಿಯ ಪುರೋಹಿತ ವರ್ಗದವರು ರೇವಣಸಿದ್ಧ ಶಿವಾಚಾರ್ಯರಿಗೆ ಪುಷ್ಪಾರ್ಚನೆ ಮಾಡಿ ತಮ್ಮ ಪ್ರೀತಿ ಭಕ್ತಿಯನ್ನು ಸಮರ್ಪಿಸಿದರು. ಪ್ರಮೋದ ಮುತಾಲಿಕ್‌ ಅವರಿಗೆ ಧರ್ಮ ಸಂರಕ್ಷಣಾ ತಿಲಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರೇಕೆರೂರಿನ ಚನ್ನೇಶ ಶಾಸ್ತ್ರಿಗಳು ಪ್ರಶಸ್ತಿ ವಾಚನ ಮಾಡಿದರು. ಅನಿಲಕುಮಾರ ಹಲವಾಗಿಲು, ಎ.ಬಂಗಾರು ಕಣಿವೆಮನೆ, ಶಂಭು (ಡ್ರೋನ್‌), ಸುಮಂಗಳಾ ರಾಜೇಶ ಹಿರೇಮಠ, ಸುಜಾತಾ ಶ್ರೀನಿವಾಸ್‌, ಸಿ.ಎಚ್‌.ಬಾಳನಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಜಾರಕಿಹೊಳಿ ಹೇಳಿಕೆ ‘ಭಾರತ ತೋಡೋ’ ಮನಸ್ಥಿತಿ: ಸಿಎಂ ಬೊಮ್ಮಾಯಿ ಟೀಕೆ

ವಿವಿಧ ಸಮಾಜಗಳ ಮುಖಂಡರಿಗೆ, ಅನೇಕ ದಾನಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ರೋಣದ ವೇ. ಶೇಖರಯ್ಯ ಸ್ವಾಮಿಗಳು ಮಹಾತಪಸ್ವಿ ಲಿಂ.ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಮಾಡಿದರು. ಗದಗಿನ ಮಹೇಶಕುಮಾರ ಇವರು ಬಸವರಾಜ ಚಳಗೇರಿ ಅವರ ತಬಲಾ ಸಾಥನೊಂದಿಗೆ ಸಂಗೀತ ಸೇವೆ ಸಲ್ಲಿಸಿದರು. ತಡಸನಹಳ್ಳಿ ವೀರೇಶ ಗೌಡ್ರ ನಿರೂಪಿಸಿದರು.ಆಗಮಿಸಿದ ಭಕ್ತಾದಿಗಳಿಗೆ ಅನ್ನ ಪ್ರಸಾದ ಜರುಗಿತು.

click me!