ಕನ​ಕ​ಪುರ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುವೆ : HD Kumaraswamy

By Kannadaprabha News  |  First Published Nov 9, 2022, 6:01 AM IST

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕನ​ಕ​ಪುರ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡದೇ ಗಂ​ಭೀರವಾಗಿ ಪರಿಗಣಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.


 ಕನಕಪುರ (ನ.09): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕನ​ಕ​ಪುರ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡದೇ ಗಂ​ಭೀರವಾಗಿ ಪರಿಗಣಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರ ಮುಲಾಜಿಗೂ ಒಳಗಾಗುವುದಿಲ್ಲ ಹಾಗೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಜಾಯಮಾನವೂ ನನ್ನದಲ್ಲ. ಮುಂದಿನ ಯನ್ನು (Karnataka Assembly Election)  ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ ಈ ಕ್ಷೇತ್ರದ ಕಾರ್ಯಕರ್ತರು ಹಾಗೂ ಮತದಾರರಿಗೆ ಶಕ್ತಿ ತುಂಬುವ ಕೆಲಸ ಮಾಡು​ತ್ತೇನೆ. ಈ ಕ್ಷೇತ್ರದ ಮೇಲೆ ನನಗೆ ಶಕ್ತಿ ಇರುವುದರಿಂದಲೇ ಮೊದಲ ಪಂಚರತ್ನ ರಥಯಾತ್ರೆಯನ್ನು ಇಲ್ಲಿಂದಲೇ ಹಮ್ಮಿಕೊಂಡಿದ್ದೇನೆ. ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ದೃಷ್ಟಿಯಿಂದಲೇ ತಾಲೂಕಿನ ಸುಮಾರು 40 ಹಳ್ಳಿಗಳಿಗೆ (Village)  ಭೇಟಿ ಕೋಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ವೇಳೆ ಪಕ್ಷದ ನಿಷ್ಠಾ​ವಂತ ಕಾರ್ಯಕರ್ತರು ಹಾಗೂ ಮತದಾರರ ಅಭಿಪ್ರಾಯ ಪಡೆಯಲಾಗುವುದು. ಕ್ಷೇತ್ರದ ಮೇಲೆ ನನಗೆ ನಿರಾಸಕ್ತಿ ಇದ್ದಿದ್ದರೆ ಭೇಟಿ ಕೊಡುವ ಅಗತ್ಯವೇ ಇರಲಿಲ್ಲ ಎಂದು ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

Tap to resize

Latest Videos

ಒಂದು ಕಾಲದಲ್ಲಿ ಕನಕಪುರ ಮತ್ತು ಸಾತನೂರು ಎರಡು ವಿಧಾನಸಭಾ ಕ್ಷೇತ್ರವಿತ್ತು. ಕ್ಷೇತ್ರ ಮರು ವಿಂಗಡನೆಯಾದ ನಂತರ ಕನಕಪುರ ಮತ್ತು ಸಾತನೂರು ಒಂದಾಗಿದ್ದು ಕಮಿಟಿಯಲ್ಲಿದ್ದ ಪಿಜಿಆರ್‌ ಸಿಂದ್ಯಾ ಮತ್ತು ಸೇರಿ ಹಾರೋಹಳ್ಳಿ ಮತ್ತು ಮರಳವಾಡಿಯನ್ನು ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ವಿಲೀನ ಮಾಡಿ ಸಾತನೂರು ಕ್ಷೇತ್ರವನ್ನು ಕನಕಪುರಕ್ಕೆ ಕ್ಷೇತ್ರಕ್ಕೆ ಸೇರ್ಪಡೆ ಮಾಡಿದ ನಂತರ ತಾಲೂಕಿನಲ್ಲಿ ಹೊಸ ರಾಜಕಾರಣ ಪ್ರಾರಂಭವಾಯಿ​ತು. ಈ ತಾ​ಲೂಕಿನಲ್ಲಿ ನಮ್ಮಿಂದ ಪಕ್ಷ ಸಂಘಟನೆಯಲ್ಲಿ ಲೋಪವಾಗಿರುವುದು ಸತ್ಯವಾದ ವಿಷಯ ಎಂದು ತಿಳಿಸಿದರು.

2018ರಲ್ಲಿ ಅತಂತ್ರ ಸರ್ಕಾರ (Karnataka Govt) ಬಂದ ಸಂದರ್ಭದಲ್ಲಿ ರಾಜ್ಯ ರಾಜಕಾರಣ ಮತ್ತು ದೇಶದ ರಾಜಕಾರಣದ ದೃಷ್ಟಿಹಾಗೂ ರೈತರ ಸಾಲ ಮನ್ನಾ ಮಾಡುವ ದೃಷ್ಟಿಯಿಂದ ವಿಧಿಯಿಲ್ಲದೆ ನಾವು ರಾಜಿ ಸೂತ್ರವನ್ನು ಮಾಡಿಕೊಳ್ಳ ಬೇಕಾಯಿತು. ನಾವು ತೆಗೆದುಕೊಂಡ ನಿಲುವಿನಿಂದ ತಾಲೂಕಿನ ಕಾರ್ಯಕರ್ತರಿಗೆ ನೋವಾಗಿದ್ದರೂ ನಮ್ಮ ಕಾರ್ಯಕರ್ತರು ಎಂದಿಗೂ ನಮ್ಮನ್ನು ಬಿಟ್ಟು ಕೊಟ್ಟಿಲ್ಲ. ನಾವು ಅವರನ್ನೂ ಬಿಟ್ಟುಕೊಟ್ಟಿಲ್ಲ ಹಾಗಾಗಿಯೇ ಈ ಕ್ಷೇತ್ರದಲ್ಲಿ ಪಕ್ಷ ಗಟ್ಟಿಯಾಗಿದ್ದು ಇನ್ನು 15ರಿಂದ 20 ಸಾವಿರ ಮತಗಳನ್ನು ಹೆಚ್ಚು ಗಳಿಸುವ ಕಡೆಗೆ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.

ತಾಲೂಕಿನಲ್ಲಿ ಪಕ್ಷದ ಕಚೇರಿ ತೆರೆಯಲು ಮತ್ತು ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ಬಹಳ ಉತ್ಸಾಹದಿಂದ ಸಕ್ರಿಯರಾಗಿದ್ದಾರೆ. ಸದ್ಯದಲ್ಲೇ ತಾಲೂಕಿನಲ್ಲಿ ಪಕ್ಷದ ಕಚೇರಿಯನ್ನು ತೆರೆಯಲಿದ್ದೇವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ನನಗೆ ಲೀಡರ್‌ಗಳಿದ್ದಂತೆ ಈ ಕ್ಷೇತ್ರದಲ್ಲಿರುವ ಕಾರ್ಯಕರ್ತರು ನಮ್ಮ ಪಕ್ಷದ ಮಾದರಿ ಕಾರ್ಯಕರ್ತರು ಅವರಿಂದಲೇ ತಾಲೂಕಿನಲ್ಲಿ ಪಕ್ಷ ಉಳಿದಿದೆ ಎಂದು ಕು​ಮಾ​ರ​ಸ್ವಾಮಿ ಹೇಳಿ​ದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ನಾಗರಾಜು,ನಗರಸಭಾ ಸದಸ್ಯ ಜಯರಾಮು, ಮುಖಂಡರಾದ ಚಿನ್ನಸ್ವಾಮಿ, ನಲ್ಲಹಳ್ಳಿ ಶಿವಕುಮಾರ್‌, ದೊಡ್ಡ ಆಲಹಳ್ಳಿ ಶಿವರಾಜು, ವಕೀಲ ದೇವುರಾಜ್‌ ಜಾದವ್‌, ನಂಜೆಗೌಡ, ಚಿಕ್ಕಲಾಹಳ್ಳಿ ಲೋಕೇಶ್‌, ಜಯರಾಮ, ಕಾಡಹಳ್ಳಿ ಅನು ಕುಮಾರ್‌, ಪುಟ್ಟಸ್ವಾಮಿ, ಸರ್ದಾರ್‌, ಬಿ.ಎಸ್‌.ದೊಡ್ಡಿ ಸುನೀಲ… ಕುಮಾರ್‌, ಮೋಹನ್‌, ಶಿವಕುಮಾರ್‌ ಮತ್ತಿ​ತ​ರರು ಹಾಜ​ರಿ​ದ್ದರು.

  • : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕನ​ಕ​ಪುರ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡದೇ ಗಂ​ಭೀರವಾಗಿ ಪರಿಗಣಿಸುತ್ತೇನೆ
  • ನಾನು ಯಾರ ಮುಲಾಜಿಗೂ ಒಳಗಾಗುವುದಿಲ್ಲ ಹಾಗೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಜಾಯಮಾನವೂ ನನ್ನದಲ್ಲ
  • ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ನನಗೆ ಲೀಡರ್‌ಗಳಿದ್ದಂತೆ ಈ ಕ್ಷೇತ್ರದಲ್ಲಿರುವ ಕಾರ್ಯಕರ್ತರು ನಮ್ಮ ಪಕ್ಷದ ಮಾದರಿ
click me!