ಹಿಂದುತ್ವಕ್ಕೆ ಅವಹೇಳನ: ಸತೀಶ್‌ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮನವಿ

By Kannadaprabha News  |  First Published Nov 9, 2022, 7:30 AM IST
  • ಹಿಂದುತ್ವಕ್ಕೆ ಅವಹೇಳನ: ಸತೀಶ್‌ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮನವಿ
  • ನಗರಸಭೆ ಅಧ್ಯಕ್ಷೆ ಮಧುರಾ ನೇತೃತ್ವ
  • ಕಾನೂನು ಕ್ರಮಕ್ಕೆ ಒತ್ತಾಯ

ಸಾಗರ (ನ.9) : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹಿಂದುತ್ವ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬಿಜೆಪಿ ನಗರ ಘಟಕ ಮತ್ತು ಯುವ ಮೋರ್ಚಾ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಜಾರಕಿಹೊಳಿ ಹೇಳಿಕೆ ‘ಭಾರತ ತೋಡೋ’ ಮನಸ್ಥಿತಿ: ಸಿಎಂ ಬೊಮ್ಮಾಯಿ ಟೀಕೆ

Tap to resize

Latest Videos

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್‌ ಮಾತನಾಡಿ, ಯಾವುದೇ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಹಿಂದೂ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಿರುವ ಸತೀಶ್‌ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರಸಭೆ ಉಪಾಧ್ಯಕ್ಷ ವಿ. ಮಹೇಶ್‌ ಮಾತನಾಡಿ, ಇಷ್ಟುವರ್ಷಗಳ ಕಾಲ ಹಿಂದೂ ಸಂಸ್ಕೃತಿಯನ್ನೇ ಅನುಸರಿಸಿಕೊಂಡು ಬಂದಿರುವ ಸತೀಶ ಜಾರಕಿಹೊಳಿ ಈಗ ಅದೇ ಧರ್ಮದ ಕುರಿತು ಅವಹೇಳನೆ ಮಾಡಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ನೈತಿಕತೆಯಿದ್ದರೆ ಜಾರಕಿಹೊಳಿಯನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣೇಶ್‌ ಪ್ರಸಾದ್‌ ಮಾತನಾಡಿ, ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್‌ ಸಂಸ್ಕೃತಿಯನ್ನು ತೋರಿಸುತ್ತದೆ. ಹಿಂದೂಗಳನ್ನು ಅವಮಾನಿಸುವುದೇ ಕಾಂಗ್ರೆಸ್ಸಿನ ಮುಖ್ಯ ಅಜೆಂಡವಾಗಿದ್ದು, ಇದರ ಭಾಗವಾಗಿಯೇ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಹೇಳಿದರು.

ಯುವ ಮೋರ್ಚಾ ಅಧ್ಯಕ್ಷ ಶ್ರೀರಾಮ್‌, ಪ್ರಮುಖರಾದ ಸಂತೋಷ್‌ ಶೇಟ್‌, ಸತೀಶ್‌ ಕೆ, ಸವಿತಾ ವಾಸು, ಭಾವನಾ ಸಂತೋಷ್‌, ಆರ್‌. ಶ್ರೀನಿವಾಸ್‌, ಡಿ. ತುಕಾರಾಮ್‌, ಪ್ರದೀಪ್‌, ವಿನೋದ್‌ ರಾಜ್‌, ಪರಶುರಾಮ್‌ ಇನ್ನಿತರರು ಹಾಜರಿದ್ದರು. ಹಿಂದುಗಳ ಕೆರಳಿಸಿದ ಸತೀಶ್‌ ಜಾರಕಿಹೊಳಿ ಮಾತು, ಕ್ಷಮೆ ಕೇಳಲ್ಲ ಎಂದ ಕಾಂಗ್ರೆಸ್ ನಾಯಕ! 

click me!