ಬೀದರ್‌ ಮಸೀದಿ ಮೇಲೆ ಕೇಸರಿ ಬಾವುಟ ಹಾರಿಸಿದ ಹಿಂದೂ ಯುವಕರು: ಇವರ ಹಿನ್ನೆಲೆ ಏನು ಗೊತ್ತಾ?

By Sathish Kumar KH  |  First Published Sep 25, 2023, 11:17 AM IST

ಕರ್ನಾಟಕದಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ ಮಸೀದಿಯ ಮೇಲೆ ಕೇಸರಿ ಭಗವಾಧ್ವಜ ಹಾರಿಸಿದ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡದಿದ್ದಾರೆ. ಆದರೆ, ಇವರ ಹಿನ್ನೆಲೆ ಏನು ಗೊತ್ತಾ.?


ಬೆಂಗಳೂರು (ಸೆ.25): ಈಗಾಗಲೇ ಹಲವೆಡೆ ಧರ್ಮ ದಂಗಲ್‌ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿವೆ. ಅದರಲ್ಲಿಯೂ ಗಣೇಶ ಹಬ್ಬದ ವೇಳೆ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಬೇಕು ಎಂದು ಕೆಲವು ಹಿಂದೂಪರ ಸಂಘಟನೆಗಳು ಒತ್ತಡ ಹೇರಿದ್ದವು. ಇದಕ್ಕೆ ಸರ್ಕಾರ ಯಾವುದೇ ಸೊಪ್ಪು ಹಾಕಿರಲಿಲ್ಲ. ಈಗ ಮಸೀದಿ ಮೇಲೆ ಹಿಂದೂ ಭಗವಾನ್‌ ಹನುಮಂತನ ಕೇಸರಿ ಬಾವುಟವನ್ನು ಹಾರಿಸಿ ಯುವಕರು ಪುಂಡಾಟ ಮೆರೆದಿದ್ದಾರೆ. ಇನ್ನು ಈ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಮಾಹಿತಿ ಇಲ್ಲಿದೆ ನೋಡಿ...

ಈ ಘಟನೆ ನಡೆದಿರುವುದು ಕನ್ನಡ ನಾಡಿನ ಗಡಿ ಜಿಲ್ಲೆ ಬೀದರ್‌ನಲ್ಲಿ ನಡೆದಿದೆ. ಮಸೀದಿ ಮೇಲೆ ಭಗವಾಧ್ವಜವನ್ನು ಹಾರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ವೇಳೆ ಪೊಲೀಸರು ನಾಲ್ವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಬಸವಕಲ್ಯಾಣ ತಾಲ್ಲೂಕಿನ ಧನ್ನೂರಾ (ಕೆ) ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಗ್ರಾಮದ ಜಾಮಾ ಮಸೀದಿ ಮೇಲೆ ನಾಲ್ವರು ಯುವಕರು ಭಗವಾಧ್ವಜ ಹಾರಿಸಿದ್ದಾರೆ. ಈ ಧ್ವಜವನ್ನು ಹಾರಿಸಿದ ವೀರೇಶ ಸೂರ್ಯ, ಕಲ್ಯಾಣಿ ಸೂರ್ಯ, ಸುಶೀಲ ಬಿರಾದಾರ ಹಾಗೂ ಅಭಿಷೇಕ ಚಂದ್ರಕಾಂತ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Tap to resize

Latest Videos

undefined

ಸೋನಿ ಟಿವಿಯ ಇಂಡಿಯನ್‌ ಐಡಲ್‌ಗೆ ಬೀದರ್‌ನ ಗಾಯಕಿ ಶಿವಾನಿ ಆಯ್ಕೆ: ಕರ್ನಾಟಕದ ಏಕೈಕ ಕಲಾವಿದೆ..!

ಇನ್ನು ಈ ಘಟನೆ ಕಳೆದ ನಾಲ್ಕು ದಿನಗಳ ಹಿಂದೆ (ಸೆ.20) ರಾತ್ರಿ ವೇಳೆ ನಡೆದ ಘಟನೆಯಾಗಿದೆ. ಸೆಪ್ಟೆಂಬರ್‌ 20ರಂದು ತಡರಾತ್ರಿ 4 ಜನ ಯುವಕರು ಮದ್ಯ ಕುಡಿದು ಧ್ವಜ ಹಾರಿಸಿದ್ದಾರೆ ಎಂದು ಸ್ಥಳೀಯ ಮಸೀದಿಯ ಮುಖಂಡರು ದೂರು ನೀಡಿದ್ದರು. ಇನ್ನು ರಾತ್ರಿ ವೇಳೆ ಇದೇ ಗ್ರಾಮದ ಹನುಮಾನ್ ದೇವಸ್ಥಾನದ ಮೇಲಿದ್ದ ಭಗವಾ ಧ್ವಜ ತೆಗೆದುಕೊಂಡು ಹೋಗಿ, ಸ್ವಲ್ಪ ದೂರದಲ್ಲಿದ್ದ ಜಾಮಾ ಮಸೀದಿ ಮೇಲೆ ಕಟ್ಟಿದ್ದಾರೆ. ಮಸೀದಿಯ ಚಾಂದಸಾಬ್‌ ಎಂಬುವರು ಕೊಟ್ಟಿದ್ದ ದೂರಿನ ಮೇರೆಗೆ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಯುವಕರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

click me!