ಹಿಂದುಗಳ ಏಕತೆ ವೀರ ಸಾವರ್ಕರ್ ಅವರ ಕನಸಾಗಿತ್ತು. ಇಂದು ಅವರ ಕನಸು ಈಡೇರಿಸುವ ಕಾಲ ಬಂದಿದೆ. ಮುಂದಿನ ದಿನಗಳಲ್ಲಿ ಹಿಂದುತ್ವದ ರಕ್ಷಣೆಗೆ ಶಸಾಸ್ತ್ರ ತರಬೇತಿ ನೀಡುವ ಅವಶಕತೆ ಬಂದರೂ ಬರಬಹುದು ಎಂದು ಎಂದು ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಶಿವಮೊಗ್ಗ (ಅ.22) : ಹಿಂದುಗಳ ಏಕತೆ ವೀರ ಸಾವರ್ಕರ್ ಅವರ ಕನಸಾಗಿತ್ತು. ಇಂದು ಅವರ ಕನಸು ಈಡೇರಿಸುವ ಕಾಲ ಬಂದಿದೆ. ಮುಂದಿನ ದಿನಗಳಲ್ಲಿ ಹಿಂದುತ್ವದ ರಕ್ಷಣೆಗೆ ಶಸಾಸ್ತ್ರ ತರಬೇತಿ ನೀಡುವ ಅವಶಕತೆ ಬಂದರೂ ಬರಬಹುದು ಎಂದು ಎಂದು ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಹಿಂದೂ ಯುವಕರು ಅಗ್ನಿಪಥ ಯೋಜನೆಯ ಹೆಚ್ಚಿನ ಲಾಭ ಪಡೆಯಿರಿ
ಇಲ್ಲಿನ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭ ಔಪಚಾರಿಕ ಸಭೆಯಲ್ಲಿ ಅವರು ಮಾತನಾಡಿ, ಹಿಂದೂಗಳ ರಕ್ಷಣೆ ಅತಿ ಅವಶ್ಯಕವಾಗಿದೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಹಿಂದುವೂ ಸೈನಿಕನಾಗಬೇಕು ಜೊತೆಗೆ ಸಂಘಟಿತನಾಗಬೇಕು. ಧರ್ಮದ ರಕ್ಷಣೆಗೆ ಟೊಂಕಕಟ್ಟಿನಿಲ್ಲಬೇಕು. ಸಾವರ್ಕರ್ ಕೂಡ ಹಿಂದೂತ್ವದ ಏಕತೆ ಮತ್ತು ಸಂಘಟನೆ ಪ್ರತಿಪಾದನೆ ಮಾಡುತ್ತ ಬಂದಿದ್ದರು. ಶಿವಮೊಗ್ಗದಲ್ಲಿ 1944ರಲ್ಲಿ ಸಾವರ್ಕರ್ ಬಂದಿದ್ದರು. ಅಂದು ಅವರ ಜೊತೆ ಅವರ ಚಿಕ್ಕಪ್ಪ, ಚಿಕ್ಕಮ್ಮ ಕೂಡ ಬಂದಿದ್ದರು. ಆ ಸಂದರ್ಭದಲ್ಲಿ ಗಣೇಶೋತ್ಸವ ಆಚರಣೆಗೆ ಮಹತ್ವದ ಸಭೆ ನಡೆದಿತ್ತು. ಅದರ ಫಲವಾಗಿ 1945ರಲ್ಲಿ ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಹಿಂದೂ ಮಹಾಸಭಾ ಗಣಪತಿ ಉತ್ಸವ ನಡೆದಿತ್ತು ಎಂದು ತಿಳಿಸಿದರು.
ಅಂದು ಶುರುವಾದ ಹಿಂದು ಮಹಾಸಭಾ ಗಣೇಶೋತ್ಸವ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಅಂದು ಶಿವಮೊಗ್ಗದಲ್ಲಿ ಬಿತ್ತಿದ್ದ ಹಿಂದುತ್ವದ ಬೀಜ ಇಂದು ಹೆಮ್ಮರವಾಗಿ ಬೆಳೆದು ಹಿಂದು ಜಾಗೃತಿ ಮಾಡುತ್ತಿದೆ. ಹಿಂದೆಲ್ಲ ಸಾವರ್ಕರ್ ವಿಚಾರಧಾರೆಗೆ ಅವಮಾನ ಮಾಡಲಾಗುತ್ತಿತ್ತು. ಆದರೆ, ಅವರಿಗೆ ಅವಮಾನ ಮಾಡಿದ ಕಡೆ ಅವರ ಮೊಮ್ಮಗ ಆದ ನನಗೆ ಇಂದು ಸನ್ಮಾನ ಮಾಡಲಾಗುತ್ತಿದೆ. ಸಿಂದೂ ಸಂಸ್ಕೃತಿ ನಮ್ಮ ದೇಶದ ಸಂಸ್ಕೃತಿ. ಆದರೆ, ಸಿಂದೂ ಸಂಸ್ಕೃತಿ ಜನರನ್ನು ಪಾಕಿಸ್ತಾನಕ್ಕೆ ಸೇರಿಸುವಂತೆ ಕೆಲಸ ಆಗಿದೆ. ಅದು ದೊಡ್ಡ ದುರಂತ. ಶಿವಾಜಿ ಮಹಾರಾಜರು ಕನಸು ಕಂಡಿದ್ದ ಹಿಂದವಿ ಸಾಮ್ರಾಜ್ಯದ ಕನಸು ನನಸಾಗಬೇಕು ಎಂಬುದು ನನ್ನ ಆಶಯ ಎಂದರು.
ಈ ಸಂದರ್ಭದಲ್ಲಿ ಹಿಂದು ಮಹಾಸಭಾ ಅಧ್ಯಕ್ಷ ಸುರೇಶ್‌ಕುಮಾರ್, ಕಾರ್ಯದರ್ಶಿ ಶರಬ್ ಶ್ರೀಧರ್, ಪ್ರಮುಖರಾದ ಚನ್ನಪ್ಪಬಸಪ್ಪ, ಪ್ರಭು, ದತ್ತಾತ್ರಿ ರಾವ್, ಎನ್.ಆರ್.ಪ್ರಕಾಶ್, ಸತ್ಯನಾರಾಯಣ್, ಹರಿಗೆ ಗೋಪಾಲಸ್ವಾಮಿ, ರಾಜಶೇಖರ್, ನಿರಂಜನ್, ಲಕ್ಷ್ಮೇ ನಾರಾಯಣ್, ಸತ್ಯನಾರಾಯಣ್, ಶ್ರೀಧರ್ ಮತ್ತಿತರರು ಇದ್ದರು.
ಇದೇ ಸಂದರ್ಭ ಚಿತ್ಪಾವನ ಬ್ರಾಹ್ಮಣ ಸಮಾಜ ವತಿಯಿಂದ ಸಾತ್ಯಕಿ ಸಾವರ್ಕರ್ ಅವರನ್ನು ಸನ್ಮಾನಿಸಲಾಯಿತು. ಅನಂತರ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಸಾತ್ಯಕಿ ಸಾವರ್ಕರ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿದರು.
ಸಾವರ್ಕರ್ ಕುರಿತು ಟೀಕೆ, ರಾಹುಲ್ ಗಾಂಧಿ ಚಿತ್ರಕ್ಕೆ ಚಪ್ಪಲಿ ಬಡಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ!
ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮಕ್ಕೆ ಸಿದ್ಧತೆ
ಅ.22ರಂದು ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ನಡೆಯಲಿರುವ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದæ. ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಜನ ಸಾವರ್ಕರ್ ರಚನೆಯ ಜಯೋಸ್ತು.