ಕರ್ನಾಟಕದಲ್ಲಿ ಓರ್ವನ ತಾಯಿಯ ಪತಿ ಅಶ್ಲೀಲ ಇದ್ದಾನೆ: ಜಾರಕಿಹೊಳಿ ವಿರುದ್ಧ ನಾಲಿಗೆ ಹರಿಬಿಟ್ಟ ಹಿಂದೂ ಮುಖಂಡ

By Girish Goudar  |  First Published Dec 18, 2022, 9:06 AM IST

ಅಶ್ಲೀಲ ಧರ್ಮದಲ್ಲಿ ಹುಟ್ಟಿದೆ ಎಂದು ಅವರಿಗೇಕೆ ಅನಿಸುತ್ತಿದೆ?. ಈ ಬಗ್ಗೆ ತನಿಖೆಗೆ ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಲಿ. ಹಿಂದೂ ಹಿತದ ಬಗ್ಗೆ ಯಾರೋ ಮಾತನಾಡ್ತಾರೋ ಅವರೇ ದೇಶ ನಡೆಸಬೇಕು ಎಂದು ಸಂಕಲ್ಪ ಮಾಡಿ: ಧನಂಜಯ ಭಾಯ್ ದೇಸಾಯಿ 


ಬೆಳಗಾವಿ(ಡಿ.18):  ಕರ್ನಾಟಕದಲ್ಲಿ ಓರ್ವನ ತಾಯಿಯ ಪತಿ ಅಶ್ಲೀಲ ಇದ್ದಾನೆ, ಹೀಗಾಗಿ ಆತನ ತಾಯಿಯ ಪತಿ ಹುಡುಕಾಡಲು ಬಂದಿರುವೆ. ವಿಧಾನಸಭೆಯ ಫಾರಂ ಮೇಲೆ ಹಿಂದೂ ಅಂತಾ ಬರೀತಾರೆ, ಬಳಿಕ ತಾವು ಹುಟ್ಟಿ ಬಂದ ತಾಯಿಯ ಗರ್ಭವನ್ನೇ ಅಶ್ಲೀಲ ಅಂತಾರೆ. ಈತ ಸನ್ನಿ ಲಿಯೋನ್‌ ಮಗನಿದ್ದಾನಾ ಅಥವಾ ಬೇರೆಯವರ ಮಗನಿದ್ದಾನಾ?, ಇಂತಹ ಪಾರ್ನ್ ಸ್ಟಾರ್‌ಗಳು ಎಲ್ಲಿಂದ ಬರ್ತಾರೆ?. ಇಂತವರನ್ನು ವಿಧಾನಸಭೆಗೆ ಕಳಿಸಿ ನಮ್ಮ ಸಮಾಜ ನಾಚುವ ಹಾಗೆ ಏಕೆ ಮಾಡ್ತಿದೀವಿ? ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿರುದ್ಧ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಧನಂಜಯ ಭಾಯ್ ದೇಸಾಯಿ ಹರಿಹಾಯ್ದಿದ್ದಾರೆ. 

ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ನಡೆದ 'ಜಾಗೋ ಹಿಂದೂ' ಸಮಾವೇಶದಲ್ಲಿ ಧನಂಜಯ ಭಾಯ್ ದೇಸಾಯಿ ನಾಲಿಗೆ ಹರಿಬಿಟ್ಟಿದ್ದಾರೆ. 

Tap to resize

Latest Videos

ಮತ್ತೊಂದು ವಿವಾದಕ್ಕೆ ಸಿಲುಕಿದ ಸತೀಶ ಜಾರಕಿಹೊಳಿ

ಅಶ್ಲೀಲ ಧರ್ಮದಲ್ಲಿ ಹುಟ್ಟಿದೆ ಎಂದು ಅವರಿಗೇಕೆ ಅನಿಸುತ್ತಿದೆ?. ಈ ಬಗ್ಗೆ ತನಿಖೆಗೆ ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಲಿ ಅಂತ ಹೇಳಿದ್ದಾರೆ. ಹಿಂದೂ ಹಿತದ ಬಗ್ಗೆ ಯಾರೋ ಮಾತನಾಡ್ತಾರೋ ಅವರೇ ದೇಶ ನಡೆಸಬೇಕು ಎಂದು ಸಂಕಲ್ಪ ಮಾಡಿ. 'ಹಿಂದೂ ಹಿತದ ಬಗ್ಗೆ ಯೋಚಿಸುವವರೇ ಪ್ರಧಾನಿ, ಸಿಎಂ, ಸಂಸದ, ಶಾಸಕ, ನಗರಸೇವಕ, ಪಂಚಾಯತಿ ಸದಸ್ಯರಾಗಬೇಕು. 'ಹಿಂದೂ ಶಬ್ದ ಸನಾತನ ಧರ್ಮ ಗೌರವಿಸುವವರು ನಮ್ಮ ರಾಜಕೀಯ ಪ್ರತಿನಿಧಿ ಆಗಬೇಕು ಅಂತ ತಿಳಿಸಿದ್ದಾರೆ. 

ರಾಹುಲ್ ಗಾಂಧಿ ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆ ಮಾಡುತ್ತಿದ್ದಾರೆ. ಯಾವಾಗ ಚೀನಾ ಪರ ಮಾತನಾಡ್ತಾರೆ, ಯಾವಾಗ ಅಮೆರಿಕ, ಸಾವರ್ಕರ್ ವಿರುದ್ಧ ಮಾತನಾಡ್ತಾರೆ ಗೊತ್ತಾಗಲ್ಲ. ಭಾರತ ವಿರೋಧಿ ವ್ಯಕ್ತಿತ್ವ, ಇಸ್ಲಾಮಿಕ್ ಜಿಹಾದಿ, ಲವ್ ಜಿಹಾದ್, ಪಿಎಫ್ಐ ಬೆಂಬಲಿಸುವರು ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗಿದ್ದರು ಅಂತ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ. 

ಕರ್ನಾಟಕ, ಮಹಾರಾಷ್ಟ್ರ ಸೇರಿ ಯಾವುದೇ ರಾಜ್ಯದ ವಿಧಾನಸಭೆ ಇರಲಿ ಹಿಂದೂಗಳು ಶಾಸಕರಾಗಬೇಕು. ಮುಂಬರುವ ದಿನಗಳಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು ಎಂದ ಧನಂಜಯ ಭಾಯ್ ದೇಸಾಯಿ ಹೇಳಿದ್ದಾರೆ. 
 

click me!