ಪಾರ್ಕ್ ಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡ್ತಿದೆ. ಆದ್ರೆ ಚಿತ್ರದುರ್ಗದಲ್ಲಿ ಪಾರ್ಕ್ ಗಳಲ್ಲಿ ಸಂಜೆ ಆದ್ರೆ ಸಾಕು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜು.4): ಪಾರ್ಕ್ ಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡ್ತಿದೆ. ಆದ್ರೆ ಈ ಜಿಲ್ಲೆಯಲ್ಲಿರುವ ಅಧಿಕಾರಿಗಳು ಮಾತ್ರ ನಮ್ಮ ವ್ಯಾಪ್ತಿಗೆ ಆ ಪಾರ್ಕ್ ಬರಲ್ಲ ಈ ಪಾರ್ಕ್ ಬರಲ್ಲ ಎಂದು ಒಂದರ ಮೇಲೆ ಮತ್ತೊಂದು ಇಲಾಖೆ ಸುಳ್ಳು ಹೇಳಿಕೊಂಡೆ ಬರ್ತಿದ್ದಾರೆ. ಇದ್ರಿಂದಾಗಿ ಇಂದು ಅಲ್ಲಿನ ಪಾರ್ಕ್ ಗಳ ಪರಿಸ್ಥಿತಿ ಜಾನುವಾರುಗಳ ದೊಡ್ಡಿಯಾಗಿ ಮಾರ್ಪಟ್ಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಾರ್ಕ್ ಗಳಲ್ಲಿ ಬಿದ್ದಿರೋ ಮದ್ಯದ ಬಾಟಲಿಗಳು ಒಂದೆಡೆಯಾದ್ರೆ, ಮತ್ತೊಂದೆಡೆ ಜಮೀನುಗಳಲ್ಲಿ ಮೇಯುವ ರೀತಿ ಅಯಾಗಿ ಮೇಯುತ್ತಾ ನಿದ್ರೆಗೆ ಜಾರಿರುವ ಎಮ್ಮೆಗಳು. ಈ ದೃಶ್ಯಗಳು ಕಂಡು ಬರುವುದು ಯಾವುದೋ ರೈತನೋರ್ವನ ಜಮೀನೊಂದರಲ್ಲಿ ಅಲ್ಲ. ಮೇಲಾಗಿ ಚಿತ್ರದುರ್ಗ ನಗರದ ಹೃದಯ ಭಾಗವಾಗಿರುವ ಜಿಲ್ಲಾಧಿಕಾರಿ ಸರ್ಕಲ್ ಬಳಿ ಇರುವ ಪಾರ್ಕ್ ಒಂದರಲ್ಲಿ. ನಿಜಕ್ಕೂ ನಗರಸಭೆ ಅಧಿಕಾರಿಗಳು, ಕೂಡ ನಗರಾಭಿವೃದ್ಧಿ ಅಧಿಕಾರಿಗಳು, ಜಿಲ್ಲಾಡಳಿತ ಈ ಮೂರು ಇಲಾಖೆ ಒಳಗೊಂಡಂತೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇಂದು ಸುಸಜ್ಜಿತವಾಗಿ ಇರಬೇಕಾಗಿದ್ದ ಪಾರ್ಕ್ ಗಳು ಜಾನುವಾರಗಳ ದೊಡ್ಡಿಯಾಗಿವೆ.
DHARWAD; ಕಾನೂನು ಕಾಲೇಜಿನಲ್ಲಿ ಮರಗಳ ಮಾರಣಹೋಮ, ವಿದ್ಯಾರ್ಥಿಗಳ ಆಕ್ರೋಶ
ಅಧಿಕಾರಿಗಳನ್ನ ಕೇಳೋಣ ಅಂದ್ರೆ ಒಬ್ಬರ ಮೇಲೆ ಒಬ್ರು ನಮಗೆ ಬರಲ್ಲ ಎಂದು ಹಾರಿಕೆ ಉತ್ತರ ಕೊಡ್ತಾರೆ. ಸರ್ಕಾರಿ ಕಚೇರಿಗಳ ಬಳಿಯೇ ಪಾರ್ಕ್ ಗಳು ಇರೋದ್ರಿಂದ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಅನುಕೂಲ ಆಗಲಿ ಎಂದು ಜನರು ಭಾವಿಸುತ್ತಾರೆ. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇಂದು ನಗರದಲ್ಲಿರುವ ಪಾರ್ಕ್ ಗಳು ಅಭಿವೃದ್ಧಿ ಕಾಣದೇ ಇರುವುದು ಬೇಸರದ ಸಂಗತಿ. ಇನ್ನಾದ್ರು ಅಧಿಕಾರಿಗಳು ಮುಂದೆ ಬಂದು ಕೂಡಲೇ ಪಾರ್ಕ್ ಗಳ ಅಭಿವೃದ್ಧಿ ಪಡಿಸಬೇಕಿದೆ ಅಂತಾರೆ ಸ್ಥಳೀಯರು.
ಜಿತೇಂದ್ರ ಸಾಮಾಜಿಕ ಹೋರಾಟಗಾರ: ಇನ್ನೂ ಈ ಪಾರ್ಕ್ ಗಳ ಅಭಿವೃದ್ಧಿ ಕುಂಠಿತ ವಿಚಾರದಲ್ಲಿ ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಅವರ ನಿರ್ಲಕ್ಷ್ಯವೂ ಒಂದಾಗಿದೆ. ಯಾಕಂದ್ರೆ ನಗರೋತ್ಥಾನ ಯೋಜನೆಯಲ್ಲಿ ಬರುವ ರಸ್ತೆಗಳ ಕಾಮಗಾರಿಯಲ್ಲಿ ಗುತ್ತಿಗೆದಾರರ ಬಳಿ ಎಷ್ಟು ಕಮಿಷನ್ ಪಡೆಯಬೇಕು ಎನ್ನುವುದಷ್ಟೇ ಶಾಸಕರಿಗೆ ಗೊತ್ತಿರುವುದು. ಇವರು ನಮ್ಮ ಸ್ಥಳೀಯ ಜನರಿಗೆ ಮೋಸ ಮಾಡ್ತಿದ್ದಾರೆ.
ಅಭಿವೃದ್ಧಿ ಕಾರ್ಯಗಳು ಕುಂಠಿತವಾಗ್ತಿವೆ ಅದರ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ಪಾರ್ಕಗಳಲ್ಲಿ ಸಂಜೆ ಆದ್ರೆ ಸಾಕು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇಷ್ಟೆಲ್ಲಾ ಆಗ್ತಿದ್ರು ಅವುಗಳ ಅಭಿವೃದ್ಧಿ ಪಡಿಸುವಲ್ಲಿ ಶಾಸಕರು ಹಿಂದೇಟು ಹಾಕ್ತಿರೋದು ಖಂಡನೀಯ. ಕೂಡಲೇ ನಗರದಲ್ಲಿ ಅವ್ಯವಸ್ಥೆಯ ಆಗರವಾಗಿರುವ ಪಾರ್ಕ್ ಗಳ ಅಭಿವೃದ್ಧಿ ಆಗಬೇಕು. ಇಲ್ಲದೇ ಹೋದಲ್ಲಿ ನಮ್ಮ ಪಕ್ಷದ ವತಿಯಿಂದ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರ ಮನೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಎಚ್ಚರಿಕೆ ಕೊಟ್ಟರು.
ನಾಯಿಗಳಿಗೆ ಬಿಸ್ಕತ್ ತಯಾರಿಸುವ ರಾಜ್ಯದ ಮೊದಲ ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಗುದ್ದಲಿಪೂಜೆ
ಉಲ್ಲಾಶ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚಿತ್ರದುರ್ಗ: ಒಟ್ಟಾರೆಯಾಗಿ ಸರ್ಕಾರಿ ಕಚೇರಿಗಳಿಗೆ ಬಂದ್ರೆ ಅನೇಕ ಜನರು ಪಕ್ಕದಲ್ಲಿಯೇ ಇರುವ ಪಾರ್ಕ್ ಗೆ ತೆರಳಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಾರೆ. ಆದ್ರೆ ಇತ್ತೀಚೆಗೆ ಆ ಪಾರ್ಕ್ ಗಳು ದನದ ದೊಡ್ಡಿಯಂತೆ ಆಗಿರೋದು ನಿಜಕ್ಕೂ ವಿಷಾದನೀಯ. ಇನ್ನಾದ್ರು ಅಧಿಕಾರಿಗಳು ಯಾವುದೇ ಇರಿಸು ಮುರಿಸಿಲ್ಲದೇ ಪಾರ್ಕ್ ಗಳ ಅಭಿವೃದ್ಧಿ ಮಾಡಲಿ ಎಂಬುದ ಎಲ್ಲರ ಬಯಕೆ.