ಧಾರವಾಡದ ಎಲ್ ಇ ಎ ಸಂಸ್ಥೆಯ ಕಾನೂನೂ ಪದವೀಧರರ ಕಾಲೇಜಿನಲ್ಲಿ ಸುಮಾರು 15 ಕ್ಕೂ ಹೆಚ್ಚು ದೊಡ್ಡ ಮರಗಳನ್ನ ಕತ್ತರಿಸಿರುವ ಘಟನೆಗೆ ವಿದ್ಯಾರ್ಥಿಗಳಿಂದ ಭಾರೀ ವಿರೋಧ.
ವರದಿ : ಪರಮೇಶ್ಚರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜು.4) : ಧಾರವಾಡದ ಎಲ್ ಇ ಎ ಸಂಸ್ಥೆಯ ಕಾನೂನೂ ಪದವೀಧರರ ಕಾಲೇಜಿನಲ್ಲಿ ಸುಮಾರು 15 ಕ್ಕೂ ಹೆಚ್ಚು ದೊಡ್ಡ ದೊಡ್ಡ ಮರಗಳನ್ನ ಕತ್ತರಿಸಿರುವ ಘಟನೆ ನಡೆದಿದೆ. ಜುಲೈ 3ರ ರವಿವಾರ ರಜಾದಿನ ಇರುವ ಕಾರಣಕ್ಕೆ ಕಾಲೇಜಿನಲ್ಲಿ ಯಾರು ಇಲ್ಲದ ಸಮಯದಲ್ಲಿ ದೊಡ್ಡ ದೊಡ್ಡ ಬೃಹದ್ದಾಕಾರದ ಮರಗಳನ್ನ ಕತ್ತರಿಸಿದಕ್ಕೆ ಕಾಲೇಜು ವಿದ್ಯಾರ್ಥಿಗಳು ಆಕ್ರೋಶವನ್ನ ಹೊರ ಹಾಕಿದರು.
ಧಾರವಾಡದ ಕಾರ್ಪೋರೇಷನ್ ಕಚೇರಿಯ ಕೂದಲೇಳೆ ಅಂತರದಲ್ಲಿರುವ ಕಾನೂನೂ ಮಹಾವಿದ್ಯಾಲಯದಲ್ಲಿ 25 ಕ್ಕೂ ಹೆಚ್ಚು ದೊಡ್ಡ ಪ್ರಮಾಣದ ಗಿಡಗಳನ್ನ ನೆಲಸಮ ಮಾಡಿದ್ದಾರೆ. ಇನ್ನು ಗಿಡಗಳನ್ನ ಕಡಿತಾ ಇದಾರೆ ಎಂದು ವಿದ್ಯಾರ್ಥಿಗಳು ಕಡಿಯಬಾರದು ಎಂದು ಪ್ರತಿಬಟನೆ ಮಾಡಿದರು. ಬಳಿಕ ವಿದ್ಯಾರ್ಥಿಗಳ ಪ್ರತಿಬಟನೆಯ ಬಳಿಕ ಕುಡಿಯುವುದು ಇಲ್ಲ ಎಂದು ಆಡಳಿತ ಮಂಡಳಿ ಅವರು ಹೇಳಿದರು. ಆದರೆ ಮತ್ತೆ ವಿದ್ಯಾರ್ಥಿಗಳು ಹೋದ ಮೆಲೆ ಕಾಲೇಜು ಆವರಣದಲ್ಲಿರುವ ಮರಗಳನ್ನ ಕಡಿದು ಹಾಕಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಸಂಜೆ ಮರದ ಟೊಂಗಿಗಳ ಮೆಲೆ ಕುಳಿತು ಪ್ರತಿಭಟನೆ ಮಾಡಿ ಆಕ್ರೋಶ್ ಹೊರಹಾಕಿದರು.
Hubballi Kirloskar Electric Company ಗೆ ಸೇರಿದ ಭೂಮಿ ಕಬಳಿಸುವ ಹುನ್ನಾರ!
ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ, ಆಡಳಿತ ಮಂಡಳಿಯ ಜೊತೆ ಚರ್ಚೆ ಮಾಡಿದ್ದಾರೆ. ಯಾಕೆ ವಿದ್ಯಾರ್ಥಿಗಳ ವಿರೋಧದ ಮಧ್ಯ ಮರಗಳನ್ನ ಕಟಾವು ಮಾಡಲಾಗಿದೆ ಎಂದು ಕೇಳಿದಾಗ ಆಡಳಿತ ಮಂಡಳಿ ಅವರು ಹೇಳೋದೆ ಬೇರೆ ಅರ್ಥದಲ್ಲಿ ಸಮಜಾಯಿಸಿ ಉತ್ತರವನ್ನ ಕೊಡುತ್ತಿದ್ದಾರೆ.
ಇನ್ನು ಖಾಸಗಿ ಇರಲಿ, ಸರಕಾರಿ ಕಚೇರಿಯಲ್ಲಾಗಲಿ ಯಾವುದಾದರೂ ಮರಗಳನ್ನ ಕಡಿಯಬೇಕಾದರೆ ಅರಣ್ಯ ಇಲಾಖೆಯಿಂದ ಅನುಮತಿಯನ್ನ ಪಡೆಯಬೇಕು..ಆದರೆ ಇಲ್ಲಿ ಅನುಮತಿ ಪಡೆದಿದ್ದಾರೋ ಇಲ್ಲವೂ ಎಂಬುದು ಸಂಸ್ಥೆಯ ಮುಖ್ಯಸ್ಥರು ಉತ್ತರ ಕೊಡಬೇಕಾದ, ಇನ್ನು ಸ್ಥಳಕ್ಕೆ ಬೇಟಿ ನೀಡಿದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಮಾತನಾಡಿ ನೀವು ಒಂದು ಮರಕ್ಕೆ 10 ರಂತೆ 100 ಮರಗಳನ್ನ ನಿಮ್ಮ ಕಾಲೇಜು ಆವರಣದಲ್ಲಿ ನಡೆಬೇಕು ಎಂದು ಹೇಳಿದರು.
Dharwad: ನಾಯಿಯನ್ನು ಕೊಲ್ಲಲು ಮುಂದಾದ ದುರುಳರು: ರಕ್ಷಣೆ ಮಾಡಿದ ಶ್ವಾನ ಪ್ರಿಯ
ಇನ್ನು ವಿದ್ಯಾರ್ಥಿಗಳು ವಿರೊಧದ ಮದ್ಯ ಆವರಣದ ಮರಗಳನ್ನ ಕತ್ತರಿಸಿದ್ದು ದುರದುಷ್ಡಕರ ಸಂಗತಿಯಾಗಿದೆ.. ಇನ್ನು ಮರಗಳನ್ನ ಕಡಿದವರು ಮತ್ತೆ ಮರಗಳನ್ನ ಬೆಳಿಸಬೇಕು ಎಂದು ವಿದ್ಯಾರ್ಥಿಗಳು ಕೂಡಾ ಪ್ರಾಂಶುಪಾಲರಿಗೆ ಮನವಿ ಮಾಡಿದರು..ಇನ್ನು ಪ್ರಾಂಶುಪಾಲರ ಕೊಟ್ಟ ಭರವಸೆಗೆ ಸಂಜೆ ಮಾಡುತ್ತಿದ್ದ ಪ್ರತಿಬಟನೆಯನ್ನ ಕೈ ಬಿಟ್ಟಿದ್ದಾರೆ.