Raichur ಭಾವೈಕ್ಯತೆಗೆ ಸಾಕ್ಷಿಯಾದ ಬಸವ ಜಯಂತಿ, ರಂಜಾನ್

By Suvarna NewsFirst Published May 4, 2022, 10:16 AM IST
Highlights
  • ಮುಸ್ಲಿಂ ಬಾಂಧವರಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ
  • ಮುಸ್ಲಿಂ ಬಾಂಧವರಿಗೆ ಸಿಹಿ ವಿತರಿಸಿದ ಬಸವ ಅಭಿಮಾನಿಗಳು
  • ವಿಕಲಚೇತನರಿಂದ ವಿನೂತನ ಸಂದೇಶ

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಮೇ.4): ಒಂದೇ ನಾಡು ನಾವೆಲ್ಲಾ ಒಂದೇ ಎಂಬುದನ್ನು ರಾಯಚೂರು ಜಿಲ್ಲೆ  ಸಿಂಧನೂರಿನ ಮುಸ್ಲಿಂ ಹಾಗೂ ಹಿಂದೂ ಮುಖಂಡರು ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನ ಒಟ್ಟಿಗೆ ಆಚರಣೆ ‌ಮಾಡಿ ತೋರಿಸಿಕೊಟ್ಟಿದ್ದಾರೆ. ಬಸವ ಅಭಿಮಾನಿಗಳಿಂದ ಬಸವ ಜಯಂತಿ ಆಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಮುಸ್ಲಿಂ ಬಾಂಧವರಿಗೆ ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಸಿಹಿ ತಿಂದು ರಂಜಾನ್ ಹಾಗೂ ಬಸವ ಜಯಂತಿಯ ಶುಭಾಶಯ ತಿಳಿಸಿದ್ದು ನೋಡುಗರ ಗಮನ ಸೆಳೆಯಿತು. 

ಬಸವ ವೃತ್ತದ ಬಳಿ ಎಲ್ಲಾ ಬಸವ ಅಭಿಮಾನಿಗಳು ಬಸವೇಶ್ವರ ಜಯಂತಿ ಆಚರಿಸಿ ನಂತರ ಬನ್ನೂರು ರಸ್ತೆಯಲ್ಲಿ ಇರುವ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರಿಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಶುಭಾಶಯ ತಿಳಿಸಿ ಅವರಿಗೆ ಸಿಹಿ ವಿತರಣಾ ಮಾಡಿದ್ರು.

 ಮುಸ್ಲಿಂ ಬಾಂಧವರಿಗೆ ಸಿಹಿ ವಿತರಿಸಿದ ಬಸವ ಅಭಿಮಾನಿಗಳು: ಈದ್ದಾ ಮೈದಾನದಲ್ಲಿ ಪ್ರಾರ್ಥನೆ ಮುಗಿಸಿ ತೆರಳುವ ಎಲ್ಲಾ ಮುಸ್ಲಿಂ ಬಾಂಧವರಿಗೆ ಬಸವ ಅಭಿಮಾನಿಗಳು, ಜನಪ್ರತಿನಿಧಿಗಳು ಸಿಹಿ ವಿತರಿಸಿ ಸೌಹಾರ್ದದ ಸಂಕೇತವಾಗಿರುವ ಬಸವ ಜಯಂತಿ ಹಾಗೂ ರಂಜಾನ್ ಶುಭಾಶಯ ತಿಳಿಸಿದರು. ಮುಸ್ಲಿಂ ಬಾಂಧವರಿಂದ ಬಸವೇಶ್ವರ ಮೂರ್ತಿಗೆ ಹಾಗೂ ಹಬ್ಬವನ್ನು ಸಡಗರ-ಸಂಭ್ರಮದಿಂದ ಭೇದ ಭಾವವಿಲ್ಲದೆ ಹಿಂದೂ-ಮುಸ್ಲಿಂ ಆಚರಿಸಿದ್ದು ದೇಶಕ್ಕೆ ಮಾದರಿ ಕ್ಷೇತ್ರ ಎಂದು ಅನಿಸುವುದು ಕಂಡುಬಂತು. 

PSI recruitment scam ಪಿಎಸ್‌ಐ ಹುದ್ದೆಗಳ ಭರ್ತಿಗೆ ಎಎಸ್‌ಐಗಳಿಗೆ ಬಡ್ತಿ

ಎಲ್ಲರ ಗಮನ ಸೆಳೆದ ಮೆರವಣಿಗೆ ಸ್ತಬ್ಧ ಚಿತ್ರಗಳು: ಬಸವಣ್ಣನವರ ಸಮಕಾಲಿನ ಎಲ್ಲಾ ಶರಣರ ಭಾವಚಿತ್ರಗಳು ಹಾಗೂ ಡಾ.ಬಿ.ಆರ್ ಅಂಬೇಡ್ಕರ್, ಬುದ್ಧ ಮತ್ತು ಮೆಕ್ಕಾ ಮಸೀದಿ ಮೆರವಣಿಗೆ. ವೇಳೆ ಇದ್ದಿದ್ದು ಮತ್ತಷ್ಟು ನೋಡುಗರ ಗಮನ ಸೆಳೆಯುವ ರೀತಿಯಲ್ಲಿ ಇದ್ದಿದ್ದು ಕಂಡುಬಂತು. ಬಸವ ಜಯಂತಿ ‌ಪ್ರಯುಕ್ತ‌ ನಡೆದ ಮೆರವಣಿಗೆ ವೇಳೆ‌ ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಹೂ ಮಳೆ ಸುರಿಸಿದ್ರೆ, ಮತ್ತೆ ಕೆಲ ಮುಸ್ಲಿಂ ‌ಮುಖಂಡರು ಎಲ್ಲರಿಗೂ ಕೂಲ್ಡ್ ಡ್ರಿಕ್ಸ್  ಮತ್ತು ಲಸ್ಸಿ ಹಾಗೂ ಸರಭತ್‌ ವಿತರಣೆ ಮಾಡಿದ್ರು. ಅಷ್ಟೇ ಅಲ್ಲದೇ ಬಸವ ಜಯಂತಿ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಕೇಸರಿ ಶಾಲುಗಳು ಕೊರಳಿನಲ್ಲಿ ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಿಕಲಚೇತನರಿಂದ ವಿನೂತನ ಸಂದೇಶ: ಸಿಂಧನೂರು ಪಟ್ಟಣದ ಸರ್ವಪಕ್ಷಗಳ ಹಾಗೂ ಸರ್ವಧರ್ಮದ ಮುಖಂಡರು ಸೇರಿ ಒಟ್ಟಿಗೆ ಬಂದಿರುವ ರಂಜಾನ್ ಮತ್ತು ಬಸವ ಜಯಂತಿ ಜೊತೆಗೆ ಎಲ್ಲಾ ಸಮುದಾಯದ ನಾಯಕರ ಹಾಗೂ ದೇವರ ಫೋಟೋಗಳ ಮೆರವಣಿಗೆ ‌ಮಾಡುವ ಮುಖಾಂತರ ಭಾವೈಕ್ಯತೆ ಸಂದೇಶ ಸಾರಿದ್ರು. ಈ ವೇಳೆ ಮುಸ್ಲಿಂ ವಿಕಲಚೇತನೊಬ್ಬ ಸೈಕಲ್ ನಲ್ಲಿ ಮೆರವಣಿಗೆ ವೇಳೆ ಕೈಯಲ್ಲಿ ಬಸವೇಶ್ವರ ಇರುವ ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.

 ಬಸವ ಜಯಂತಿ ಮೆರವಣಿಗೆಯಲ್ಲಿ 30ಕ್ಕೂ ಹೆಚ್ಚು ಸಮುದಾಯವರು ಭಾಗಿ: 12ನೇ ಶತಮಾನದಲ್ಲಿ ಸಮಾನತೆ ತತ್ವ ಸಾರಿದ ಜಗಜ್ಯೋತಿ ಬಸವೇಶ್ವರ ಜಯಂತಿ ‌ಮತ್ತು ರಂಜಾನ್ ಒಂದೇ ದಿನ ಬಂದಿರುವುದರಿಂದ ಸಿಂಧನೂರು ನಗರದಲ್ಲಿ ವಿಶೇಷ ರೀತಿಯಲ್ಲಿ ಎರಡು ಹಬ್ಬ ಆಚರಣೆ ಮಾಡಲಾಯ್ತು. ಈ ಎರಡು ಹಬ್ಬದ ಆವರಣದಲ್ಲಿ ಸಿಂಧನೂರು ಪಟ್ಟಣದ ಸರ್ವ ಪಕ್ಷಗಳ ಮುಖಂಡರು ‌ಹಾಗೂ 30ಕ್ಕೂ ಹೆಚ್ಚು ಸಮುದಾಯಗಳ ಮುಖಂಡರು ಭಾಗವಹಿಸಿ ನಾವು ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ್ರು. ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಸಿಂಧನೂರಿನಲ್ಲಿ  ಬಸವ ಜಯಂತಿ ‌ಹಾಗೂ ರಂಜಾನ್ ಆಚರಣೆ ‌ಮಾಡಲಾಯ್ತು. ಎರಡು ಹಬ್ಬಗಳು ಈ ಸಲ ಒಟ್ಟಿಗೆ ಬಂದಿದ್ದರಿಂದ ಎಲ್ಲರೂ ಸೇರಿ ಹಬ್ಬವನ್ನು ಆಚರಣೆ ‌ಮಾಡಿ ಗಮನ ಸೆಳೆದರು. 

India Post Office Recruitment 2022: ಬರೋಬ್ಬರಿ 38,926 ಹುದ್ದೆಗಳಿಗೆ ನೇಮಕಾತಿ

ಇನ್ನೂ ಬಸವ ಜಯಂತಿ ‌ಮೆರವಣಿಗೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ,ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಎನ್. ಶಿವನಗೌಡ ಗೋರೆಬಾಳ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ಬಸನಗೌಡ ಬಾದರ್ಲಿ, ಸೈಯದ್ ಹುಸೇನ್ ಭಾಷಾ, ಬಾಬರ್ ಪಾಷಾ ಜಾಗೀರ್ದಾರ್, ಕೆ ಜಿಲಾನಿ ಪಾಷಾ,ಎಮ್.ಡಿ. ನದೀಮ್ ಮುಲ್ಲಾಖಾಜಾ ಮಲಿಕ್ ವಕೀಲ, ತಹಸಿಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ್ ಗುಂಡೂರ್, ಬಸವ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಟಿ.ಎಂ ಪಾಟೀಲ್, ಬಸವ ಕೇಂದ್ರದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ, ಬಸವ ಕೇಂದ್ರ ಅಧ್ಯಕ್ಷ ನಾಗಭೂಷಣ ನವಲಿ, ಶಾಂತಪ್ಪ ಚಿಂಚರಕಿ, ಮಲ್ಲಿನಾಥ್ ಶಾಸ್ತ್ರಿ, ಪಂಪನಗೌಡ ಬಾದರ್ಲಿ, ಬಸವರಾಜ್ ಹಿರೇಗೌಡ, ಚಂದ್ರಶೇಖರ್ ಯರದಿಹಾಳ, ಶಿವರಾಜ್ ಪಾಟೀಲ್ ಗುಂಜಳ್ಳಿ, ಶಿವನಗೌಡ ಸೇರಿದಂತೆ ಅನೇಕ ಭಾಗವಹಿಸಿದ್ದು ವಿಶೇಷವಾಗಿತ್ತು‌.

click me!