ಗೋಡ್ಸೆ ಜಯಂತಿ ಆಚರಣೆ : ಹಿಂದೂ ಮಹಾ ಸಭಾ ಮುಖಂಡ ಅರೆಸ್ಟ್

Published : May 22, 2019, 02:25 PM IST
ಗೋಡ್ಸೆ ಜಯಂತಿ ಆಚರಣೆ : ಹಿಂದೂ ಮಹಾ ಸಭಾ ಮುಖಂಡ ಅರೆಸ್ಟ್

ಸಾರಾಂಶ

ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜಯಂತಿ ಆಚರಣೆ ಮಾಡಿದ ಹಿಂದೂ ಮಹಾಸಭಾ ಮುಖಂಡನನ್ನು ಅರೆಸ್ಟ್ ಮಾಡಲಾಗಿದೆ. 

ಉಳ್ಳಾಲ :   ವಿವಾದದ ನಡುವೆಯೂ ನಾಥೂರಾಮ್ ಗೋಡ್ಸೆ ಜಯಂತಿ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ರಾಜೇಶ್ ಪೂಜಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಮೇ.19ರಂದು ಹಿಂದೂ ಮಹಾಸಭಾ ವತಿಯಿಂದ ಗೋಡ್ಸೆ ಜಯಂತಿ ಆಚರಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದರು. ಈ ಆಚರಣೆಯಲ್ಲಿ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಎಲ್.ಕೆ.ಸುವರ್ಣ ಕೂಡ ಭಾಗಿಯಾಗಿದ್ದರು. 

ಗೋಡ್ಸೆ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ಒಟ್ಟು ಐದು ಜನರ ವಿರುದ್ಧ  ಸುಮೊಟೊ ಪ್ರಕರಣ ದಾಖಲು ಮಾಡಲಾಗಿತ್ತು. 

ಗೋಡ್ಸೆ ಜಯಂತಿ ಆಚರಣೆ: ಹಿಂದೂ ಮಹಾಸಭಾದ 6 ಕಾರ‍್ಯಕರ್ತರ ಬಂಧನ

ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಭಾರಿಯಾದ ರಾಜೇಶ್ ಪೂಜಾರಿ , ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ,  ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಕರ್ತ ವಿಶ್ವನಾಥ್ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತಿ. 

ರಾಜೇಶ್ ಪೂಜಾರಿ ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಿದ್ದಾರೆ. 

PREV
click me!

Recommended Stories

ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್
ಕಂದಾಯ ಸಚಿವ ಕೃಷ್ಣಬೈರೇಗೌಡ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವ ಗಂಭೀರ ಆರೋಪ