ಮಗನ ಫೀಸ್ ಕಟ್ಟಲು ಡ್ರಾ ಮಾಡಿದ ಹಣ ಎಗರಿಸಿದ ಕಳ್ಳರು : ಪೋಷಕರ ಕಣ್ಣೀರು

Published : May 22, 2019, 11:02 AM IST
ಮಗನ ಫೀಸ್ ಕಟ್ಟಲು ಡ್ರಾ ಮಾಡಿದ ಹಣ ಎಗರಿಸಿದ ಕಳ್ಳರು : ಪೋಷಕರ ಕಣ್ಣೀರು

ಸಾರಾಂಶ

ಮಗನ ಶಾಲೆ ಫೀಸ್ ಕಟ್ಟಲು ಇರಿಸಿಕೊಂಡಿದ್ದ ಹಣವನ್ನು ಕಳ್ಳರು ದಂಪತಿ ಬಳಿಯಿಂದ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು :  ಮಗನ ಸ್ಕೂಲ್ ಫೀಜ್‌ ಕಟ್ಟಲು ಡ್ರಾ ಮಾಡಿದ್ದ ಹಣವನ್ನು ಕಳ್ಳರು ಎಗರಿಸಿದ್ದು, ಅಡ್ಮಿಶನ್ ಫೀಜ್ ಕಟ್ಟಲಾಗದೇ ದಂಪತಿ ಕಣ್ಣೀರು ಸುರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಮಂಗಳವಾರ ಮಧ್ಯಾಹ್ನ ‌ಭಟ್ಟರಹಳ್ಳಿ‌ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಬ್ಯಾಂಕ್ ಆಫ್ ಇಂಡಿಯಾದಿಂದ ಡ್ರಾ ಮಾಡಿದ 48 ಸಾವಿರ ಕಳವು ಮಾಡಿದ್ದಾರೆ. 

ಮಗನ ಸ್ಕೂಲ್ ಅಡ್ಮಿಶನ್ ಫೀಜ್, ಬುಕ್ಸ್, ಗಾಗಿ ಹಣ ಡ್ರಾ ಮಾಡಿದ ದಂಪತಿ ಊಟ ಮಾಡಲು ತಮ್ಮ ಆಕ್ಟೀವಾ ಬೈಕ್ ನ ಡಿಕ್ಕಿಯಲ್ಲಿ ಹಣವನ್ನು ಇಟ್ಟು ಹೋಟೆಲ್ ಗೆ ತೆರಳಿದ್ದರು.  ಭಟ್ಟರಹಳ್ಳಿ‌ ಮುಖ್ಯರಸ್ತೆಯ ಉಡುಪಿ ಗಾರ್ಡನ್ ಹೋಟೆಲ್ ಗೆ ತೆರಳಿದ್ದು, ಈ ವೇಳೆ ಹೊರಗೆ ಕಳ್ಳರು ಬೈಕ್ ನಲ್ಲಿದ್ದ ಹಣವನ್ನು ಎಗರಿಸಿದ್ದಾರೆ.

ಹಣವನ್ನು ಬ್ಯಾಂಕಿಂದ ಡ್ರಾ ಮಾಡಿದ ಸಮಯದಿಂದಲೂ ಕಳ್ಳರು ದಂಪತಿಯನ್ನು ಫಾಲೋ ಮಾಡಿದ್ದು, ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಸುಮಾರು 2 ಕಿಲೋ‌ಮೀಟರ್ ಫಾಲೋ ಮಾಡಿ ಕಳ್ಳರು ಕೈ ಚಳಕ ತೋರಿದ್ದಾರೆ.

PREV
click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ಸಣ್ಣ ಜೆರಾಕ್ಸ್ ಅಂಗಡಿ ಮಾಲೀಕನಿಂದ ₹1.6 ಲಕ್ಷ ವಸೂಲಿ; ಕಗ್ಗಲೀಪುರ PSI ಹರೀಶ್ ಸಸ್ಪೆಂಡ್